ಭಾಗ 3 - ಮೂಲಭೂತ ಹಕ್ಕುಗಳು
ಭಾಗ 3 - ಮೂಲಭೂತ ಹಕ್ಕುಗಳು ಸಂವಿಧಾನದ 12 ನೇ ವಿಧಿಯಿಂದ 35 ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ಚರ್ಚಿಸಲಾಗಿದೆ. ಮೂಲಭೂತ ಹಕ್ಕುಗಳನ್ನು ಅಮೇರಿಕಾ ದಿಂದ ಎರವಲು ಪಡೆಯಲಾಗಿದೆ. ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಾಕಾರ್ಟ್ ಎಂದು ಕರೆಯುವರು. ಮ್ಯಾಗ್ನಾಕಾರ್ಟ ಎಂಬುದು ಪ್ರಪಂಚದಲ್ಲಿ ಮೊದಲ ಬಾರಿಗೆ 1215 ರಲ್ಲಿ ಇಂಗ್ಲೇಂಡಿನ ಅರಸ ಹೆನ್ರಿ ತನ್ನ ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಆಗಿದೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ವ್ಯಕ್ತಿ ನೇರವಾಗಿ 32 ನೇ ವಿಧಿಯಡಿಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಇತರೇ ಹಕ್ಕುಗಳ ಉಲ್ಲಂಘನೆಯಾದಾಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಆಗ 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ರಕ್ಷಣೆ ಯಿದ್ದು ಅವುಗಳ ಉಲ್ಲಂಘನೆ ಮಾಡಿದವರಿಗೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷೆ ನೀಡುತ್ತದೆ. ಆದ್ದರಿಂದ ಸುಪ್ರೀಂಕೋರ್ಟ್ ಅನ್ನು ಮೂಲಭೂತ ಹಕ್ಕುಗಳ ರಕ್ಷಕ ನೆಂದು ಕರೆಯಲಾಗುತ್ತದೆ. 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ಸಹ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ. ಮೂಲಭೂತ ಹಕ್ಕುಗಳನ್ನು ಅನುಭವಿಸಲು ಎಷ್ಟೇ ಸ್ವಾತಂತ್ರ್ಯವಿದ್ದರೂ ಸಹ ಅವುಗಳನ್ನು ಅನುಭವಿಸಲು ಸಹ ಕೆಲವು ನಿರ್ಬಂಧಗಳಿವೆ ಆದ್ದರಿಂದ ಮೂಲಭೂತ ಹಕ್ಕುಗಳು ನಿರ್ಬಂಧಿತ ಹಕ್ಕು ಗಳಾಗಿವೆ. ಮೂ...