ಪರಮಾಣು ಮತ್ತು ಅಣು
ಪರಮಾಣು ಮಧ್ಯದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಇದ್ದು ಸುತ್ತಲೂ ಎಲೆಕ್ಟ್ರಾನ್ ಗಳು ಸುತ್ತುತ್ತಿವೆ. ಈ ಪರಮಾಣುಗಳು , ಅಣುಗಳು ಮತ್ತು ಅಯಾನುಗಳನ್ನು ಉಂಟುಮಾಡುತ್ತವೆ. ಪರಮಾಣು ರಚನಾ ಸಿದ್ದಾಂತಗಳು ಡಾಲ್ಟನ್ ಸಿದ್ದಾಂತ ಜಾನ್ ಡಾಲ್ಟನ್ ಎಂಬ ವಿಜ್ಞಾನಿ 1803 ರಲ್ಲಿ ಪರಮಾಣು ಸಿದ್ದಾಂತವನ್ನು ಮೊದಲ ಬಾರಿಗೆ ಮಂಡಿಸಿದನು. ಪರಮಾಣುಗಳು ವಿಭಜಿಸಲಾಗದ ಪದಾರ್ಥಗಳು ಪರಮಾಣುಗಳು ಅವುಗಳ ಧಾತುಗಳ ಗುಣಲಕ್ಷಣಗಳನ್ನೇ ಹೊಂದಿರುತ್ತವೆ. ಒಂದು ಧಾತುವಿನ ಪರಮಾಣುಗಳನ್ನು ಇನ್ನೊಂದು ಧಾತುವಿನ ಪರಮಾಣುಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬೇರೆ ಬೇರೆ ಪರಮಾಣುಗಳ ಧಾತುಗಳು ನಿರ್ದಿಷ್ಟ ಅನುಪಾತದಲ್ಲಿ ಸೇರಿ ಸಂಯುಕ್ತಗಳಾಗುತ್ತವೆ. ಜಲಜನಕದ (ಹೈಡ್ರೋಜನ್) 2 ಅಣುಗಳು ಮತ್ತು ಆಮ್ಲಜನಕದ (ಆಕ್ಸಿಜನ್) 1 ಅಣು ಸೇರಿ ನೀರು ಎಂಬ ಸಂಯುಕ್ತ ಉಂಟಾಗುತ್ತದೆ ಇಂಗಾಲದ 1 ಅಣು ಮತ್ತು ಆಮ್ಲಜನಕದ (ಆಕ್ಸಿಜನ್) 2 ಅಣು ಸೇರಿ ಇಂಗಾಲದ ಡೈ ಆಕ್ಸೈಡ್ ಎಂಬ ಸಂಯುಕ್ತ ಉಂಟಾಗುತ್ತದೆ. ಥಾಮ್ಸನ್ ಪರಮಾಣು ರಚನೆಯ ಮಾದರಿಯನ್ನು ಪ್ರಸ್ತಾಪಿಸಿದ ಮೊದಲ ವ್ಯಕ್ತಿ ಸಹ ಆಗಿದ್ದಾನೆ. ಆದರೆ ಈ ವಾದವು ಅಷ್ಟು ಸಮಂಜಸವಾಗಿರಲಿಲ್ಲ. ಪರಮಾಣುವಿನ ಬೀಜಕೇಂದ್ರ ಮಾದರಿ ಸಿದ್ದಾಂತ ರುದರ್ ಫೋರ್ಡ್ ಪರಮಾಣು ರಚನೆಯ ಸರಿಯಾದ ಮಾದರಿಯನ್ನು ವಿವರಿಸಿ ಪರಮಾಣು ಬೀಜಕೇಂದ್ರ ಮಾದರಿಯನ್ನು ಪ್ರತಿಪಾದಿಸಿದನು ಈ ಸಿದ್ಧಾಂತ...