ಕರ್ನಾಟಕ ಏಕೀಕರಣ
ಕರ್ನಾಟಕ ಏಕೀಕರಣ ಭಾರತ ಸ್ವಾತಂತ್ರ್ಯವಾದಾಗ ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಆಗಿನ್ನೂ ಕರ್ನಾಟಕ ಏಕೀಕರಣಗೊಂಡಿರಲಿಲ್ಲ. ಏಕೀಕರಣದ ಕಲ್ಪನೆಯನ್ನು ಮೊದಲಿಗೆ ಹಾಕಿಕೊಟ್ಟವರು ಡೆಪ್ಯುಟಿ ಚನ್ನಬಸಪ್ಪ ನವರು. 1856 ರಲ್ಲಿ ಧಾರವಾಡ ದಲ್ಲಿ ನಾರ್ಮಲ್ ಸ್ಕೂಲ್ ಪ್ರಾರಂಭವಾಯಿತು. ಇದರ ಉದ್ದೇಶ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಕರುನಾಡನ್ನು ಅಸ್ಥಿತ್ವಕ್ಕೆ ತರುವುದು. ಡೆಪ್ಯುಟಿ ಚೆನ್ನಬಸಪ್ಪ ನವರು ಇದರ ಮೊದಲ ಪ್ರಾಂಶುಪಾಲರಾಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮತ್ತೋರ್ವ ಮಹನೀಯರು ಆಲೂರು ವೆಂಕಟರಾಯರು . ಕರ್ನಾಟಕದ ಇತಿಹಾಸವನ್ನು ಕನ್ನಡಿಗರ ಎದುರಿಗೆ ತಂದು ಕನ್ನಡ ಭಾಷೆ , ಸಂಸ್ಕ ø ತಿ , ಜನಾಂಗಗಳನ್ನು ಒಳಗೊಂಡ ನೆಲದ ಏಕೀಕರಣದ ಮಹತ್ವವನ್ನು ತಿಳಿಸಿಕೊಡಲು 1910 ರಲ್ಲಿ ಕರ್ನಾಟಕ ಗತವೈಭವ ಎಂಬ ಕೃತಿಯನ್ನು ರಚಿಸಿದರು. ಏಕೀಕರಣಕ್ಕೂ ಮುನ್ನ ಇದ್ದ ಮೈಸೂರು ರಾಜ್ಯ ಮತ್ತು ಇತರ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳು ಮೈಸೂರು ಸಂಸ್ಥಾನ : ಬೆಂಗಳೂರು , ಚಿತ್ರದುರ್ಗ , ತುಮಕೂರು , ಮೈಸೂರು , ಕೋಲಾರ , ಶಿವಮೊಗ್ಗ , ಹಾಸನ , ಚಿಕ್ಕಮಗಳೂರು , ಮಂಡ್ಯ ಹೈದ್ರಾಬಾದ್ ಸಂಸ್ಥಾನ : ಬೀದರ್ , ಕಲುಬುರ್ಗಿ , ರಾಯಚೂರು ಮುಂಬೈ ಪ್ರಾಂತ್ಯ : ಧಾರವಾಡ , ಬಿಜಾಪುರ , ಬೆಳಗಾವಿ , ಉತ್ತರ ಕನ್ನಡ ಮದ್ರಾಸ್ ಪ್ರಾಂತ್ಯ : ನೀಲಗಿರಿ , ದಕ್ಷಿಣ ಕನ್ನಡ , ಬಳ್ಳಾರಿ ಕೊಡಗು : ಬ್ರಿಟೀಷ್...