ಪೋಸ್ಟ್‌ಗಳು

ಕರ್ನಾಟಕ ಇತಿಹಾಸ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕರ್ನಾಟಕ ಏಕೀಕರಣ

ಇಮೇಜ್
ಕರ್ನಾಟಕ ಏಕೀಕರಣ ಭಾರತ ಸ್ವಾತಂತ್ರ್ಯವಾದಾಗ ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಆಗಿನ್ನೂ ಕರ್ನಾಟಕ ಏಕೀಕರಣಗೊಂಡಿರಲಿಲ್ಲ. ಏಕೀಕರಣದ ಕಲ್ಪನೆಯನ್ನು ಮೊದಲಿಗೆ ಹಾಕಿಕೊಟ್ಟವರು ಡೆಪ್ಯುಟಿ ಚನ್ನಬಸಪ್ಪ ನವರು. 1856 ರಲ್ಲಿ ಧಾರವಾಡ ದಲ್ಲಿ ನಾರ್ಮಲ್ ಸ್ಕೂಲ್ ಪ್ರಾರಂಭವಾಯಿತು. ಇದರ ಉದ್ದೇಶ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಕರುನಾಡನ್ನು ಅಸ್ಥಿತ್ವಕ್ಕೆ ತರುವುದು. ಡೆಪ್ಯುಟಿ ಚೆನ್ನಬಸಪ್ಪ ನವರು ಇದರ ಮೊದಲ ಪ್ರಾಂಶುಪಾಲರಾಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮತ್ತೋರ್ವ ಮಹನೀಯರು ಆಲೂರು ವೆಂಕಟರಾಯರು . ಕರ್ನಾಟಕದ ಇತಿಹಾಸವನ್ನು ಕನ್ನಡಿಗರ ಎದುರಿಗೆ ತಂದು ಕನ್ನಡ ಭಾಷೆ , ಸಂಸ್ಕ ø ತಿ , ಜನಾಂಗಗಳನ್ನು ಒಳಗೊಂಡ ನೆಲದ ಏಕೀಕರಣದ ಮಹತ್ವವನ್ನು ತಿಳಿಸಿಕೊಡಲು 1910 ರಲ್ಲಿ ಕರ್ನಾಟಕ ಗತವೈಭವ ಎಂಬ ಕೃತಿಯನ್ನು ರಚಿಸಿದರು. ಏಕೀಕರಣಕ್ಕೂ ಮುನ್ನ ಇದ್ದ ಮೈಸೂರು ರಾಜ್ಯ ಮತ್ತು ಇತರ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳು ಮೈಸೂರು ಸಂಸ್ಥಾನ : ಬೆಂಗಳೂರು , ಚಿತ್ರದುರ್ಗ , ತುಮಕೂರು , ಮೈಸೂರು , ಕೋಲಾರ , ಶಿವಮೊಗ್ಗ , ಹಾಸನ , ಚಿಕ್ಕಮಗಳೂರು , ಮಂಡ್ಯ ಹೈದ್ರಾಬಾದ್ ಸಂಸ್ಥಾನ : ಬೀದರ್ , ಕಲುಬುರ್ಗಿ , ರಾಯಚೂರು ಮುಂಬೈ ಪ್ರಾಂತ್ಯ : ಧಾರವಾಡ , ಬಿಜಾಪುರ , ಬೆಳಗಾವಿ , ಉತ್ತರ ಕನ್ನಡ ಮದ್ರಾಸ್ ಪ್ರಾಂತ್ಯ : ನೀಲಗಿರಿ , ದಕ್ಷಿಣ ಕನ್ನಡ , ಬಳ್ಳಾರಿ ಕೊಡಗು : ಬ್ರಿಟೀಷ್...

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಕರ್ನಾಟಕ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಾಗಿ ವಿಂಗಡಿಸಬಹುದಾಗಿದೆ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ  ಮೊದಲನೆಯ ಘಟ್ಟ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳದ್ದು ಮೊದಲನೆಯ ಘಟ್ಟ. 1767 ರಿಂದ 1799 ರ ವರೆಗೆ ನಡೆದ 4 ಆಂಗ್ಲೋ ಮೈಸೂರು ಕದನಗಳಲ್ಲಿ ಹೈದರ್ ಅಲಿ ಮತ್ತು ಟೀಪೂ ಸುಲ್ತಾನ್ ಬ್ರಿಟಿಷರನ್ನು ಎದುರಿಸಿದರು. ಆದರೆ 1799 ರಲ್ಲಿ ನಡೆದ ಕೊನೆಯ ಆಂಗ್ಲೋ ಮೈಸೂರು ಕದನದಲ್ಲಿ ಟೀಪೂ ಸುಲ್ತಾನ್ ಸೋತು ಬ್ರಿಟಿಷರಿಂದ ಹತನಾದನು. ಸಶಸ್ತ್ರ ಬಂಡಾಯಗಳ ಎರಡನೆಯ ಘಟ್ಟ. 1800 - ದೋಂಡಿಯಾ ವಾಘ – ಮೈಸೂರು ಪ್ರಾಂತ್ಯ (ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯವೆಬ್ಬಿಸಿದ ಮೊದಲ ಹೋರಾಟಗಾರ) , ಕೋಣಗಲ್ಲಿನಲ್ಲಿ ನಡೆದ ಕದನದಲ್ಲಿ ಬ್ರಿಟಿಷ್ ಸೇನಾನಿ ಆರ್ಥರ್ ವೆಲೆಸ್ಲಿಯಿಂದ ಧೋಂಡಿಯವಾಘ್ ಹತನಾದ. 1819 - ವೀರಪ್ಪನಾಯಕ - ಕೊಪ್ಪಳ 1820 - ಶಿವಲಿಂಗಯ್ಯ ದೇಶಮುಖ್ - ಬೀದರ್ 1824 - ದಿವಾಕರ ದೀಕ್ಷಿತ ಮತ್ತು ರಾವಜಿ ರಾಸ್ತೆ - ಸಿಂದಗಿ (ವಿಜಯಪುರ) 1824 – ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ – ಕಿತ್ತೂರು (ಬೆಳಗಾವಿ) – ದತ್ತು ಮಗನಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ಸರ್ಕಾರದ ನೀತಿಗೆ ಪ್ರತಿಭಟನೆ. 1824 ಡಿಸೆಂಬರ್ 24 ರಂದು ಕಾಳಗ ನಡೆದು ಚೆನ್ನಮ್ಮ ಸೋತು ಶರಣಾದಳು. ಹ...

ಮೈಸೂರು ಸಂಸ್ಥಾನ - ಪ್ರಮುಖ ದಿವಾನರು

ಇಮೇಜ್
 ಮೈಸೂರು ಸಂಸ್ಥಾನ -  ಪ್ರಮುಖ ದಿವಾನರು  (1746-1812) ದಿವಾನ್ ಪೂರ್ಣಯ್ಯ ಮೈಸೂರಿನ ಪ್ರಥಮ ದಿವಾನ ರಾಗಿ ಟೀಪೂ ಮತ್ತು ಹೈದರ್ ಅಲಿ ಕಾಲದಲ್ಲಿ ಸೇವೆ ಸಲ್ಲಿಸಿದವರು. ಮೈಸೂರು ಸಂಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಕಂದಾಚಾರ ಎನ್ನುವ ಪಡೆಯನ್ನು ಸ್ಥಾಪಿಸಿದರು. ಪ್ರತ್ಯೇಕ ನ್ಯಾಯಾಂಗ ಇಲಾಖೆಯನ್ನು ಸ್ಥಾಪಿಸಿದರು. 1801 ರಲ್ಲಿ ಬೆಂಗಳೂರಿನಲ್ಲಿ ಸಂಪಂಗಿ ಕೆರೆ ಯನ್ನು ನಿರ್ಮಿಸಿದರು. 1808 ರಲ್ಲಿ ಮೊದಲ ಬಾರಿಗೆ ಮೈಸೂರು ರಾಜ್ಯದ ನೀಲ ನಕ್ಷೆ ಯನ್ನು ತಯಾರಿಸಲಾಯಿತು. ಸಿ ರಂಗಾಚಾರ್ಲು(1881-1883) ರಾಜ್ಯ ಪುನರ್ದಾನ ದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಧಿಕಾರ ವಹಿಸಿಕೊಂಡ ನಂತರ ಸೇವೆಗೆ ಸೇರಿದ ಮೊದಲ ದಿವಾನ ರು 1881 ಆಗಸ್ಟ್ 25 ರಂದು ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಯನ್ನು ಸ್ಥಾಪಿಸಿದರು.   1881 ಅಕ್ಟೋಬರ್ 7 ರಂದು ಮೊದಲ ಪ್ರಜಾಪ್ರತಿನಿಧಿ ಸಭೆ ನಡೆಯಿತು. ಮೈಸೂರಿನಲ್ಲಿ ಮಹಾರಾಣಿ ಕಾಲೇಜ್ ಆರಂಭಿಸಿದರು. 1881 ರಲ್ಲಿ ಬ್ರಿಟನ್ನಿನ ಟ್ರೈಲರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೋಲಾರ ದಲ್ಲಿ ಚಿನ್ನ ತೆಗೆಯುವ ಗಣಿಗಾರಿಕೆ ಯನ್ನು ಆರಂಭಿಸಿದರು. 1882 ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ರೈಲು ಮಾರ್ಗ ನಿರ್ಮಾಣ ಮಾಡಿಸಿದರು. ಇವರ ಸ್ಮರಣೆಗಾಗಿ ಮೈಸೂರಿನಲ್ಲಿ ರಂಗಾಚಾರ್ಲು ಮೆಮೋರಿಯಲ್ ಹಾಲ್ ಸ್ಥಾಪಿಸಲಾಗಿದೆ. ಕೆ ಶೇಷಾದ್ರಿ ಅಯ್ಯರ್ (1883-1890) ಚಿತ್ರದುರ್ಗ ಜಿಲ...

ಮೈಸೂರು ಒಡೆಯರು

ಇಮೇಜ್
ಮೈಸೂರು ಒಡೆಯರು (ಕ್ರಿ.ಶ 1339-1947) ಯದುರಾಯ ಮತ್ತು ಕೃಷ್ಣರಾಯ ರು ಈ ವಂಶದ ಸ್ಥಾಪಕರು. ಮೊದಲು ಶ್ರೀರಂಗಪಟ್ಟಣ ರಾಜಧಾನಿಯಾಗಿತ್ತು ನಂತರ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜಲಾಂಛನ  ಗಂಡಭೇರುಂಡ 1 ನೇ ರಾಜ ಒಡೆಯರು( 1578-1617) 1 ನೇ ರಾಜ ಒಡೆಯರು 1610 ರಲ್ಲಿ ಶ್ರೀರಂಗಪಟ್ಟಣವನ್ನು ಶ್ರೀರಂಗರಾಯ/ತಿರುಮಲರಾಯನಿಂದ ವಶಪಡಿಸಿಕೊಂಡು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತವನ್ನು ಆರಂಭಿಸಿದರು. ಶ್ರೀರಂಗರಾಯನ ಪತ್ನಿ ಅಲುಮೇಲಮ್ಮ ಮಾಲಂಗಿ ಮಡುವಾಗಲಿ ತಲಕಾಡು ಮರುಳಾಗಲಿ ಮೈಸೂರು ಅರಸರಿಗೆ ಗಂಡು ಮಕ್ಕಳಿಲ್ಲದೆ ಹೋಗಲಿ ಎಂದು ಮೈಸೂರು ಸಂಸ್ಥಾನಕ್ಕೆ ಶಾಪ ನೀಡಿದಳೆಂಬುದು ಪ್ರತೀತಿ. ರಾಜ ಒಡೆಯರು 1610 ರಲ್ಲಿ ಮೈಸೂರಿನ ದಸರಾ ಉತ್ಸವ ವನ್ನು ಆರಂಭಿಸಿದರು. 6 ನೇ ಚಾಮರಾಜ ಒಡೆಯರು( 1617-1637) ಇವರು ಶ್ರೀರಂಗಪಟ್ಟಣವನ್ನು ತಮ್ಮ ಆಯುಧಗಾರವನ್ನಾಗಿ ನಿರ್ಮಿಸಿದರು. ಷಡ್ ದರ್ಶನ ಸ್ಥಾಪನಾಚಾರ್ಯ ಎಂಬುದು ಇವರಿಗಿದ್ದ ಬಿರುದು. ಶ್ರೀರಂಗಪಟ್ಟಣದ ಹತ್ತಿರ ಕಾವೇರಿ ನದಿಗೆ ಸೇತುವೆ ನಿರ್ಮಿಸಿದರು. ಚಾಮರಾಜೋಕ್ತಿ ವಿಲಾಸ ಎಂಬುದು ಇವರು ರಚಿಸಿದ ಕೃತಿಯಾಗಿದೆ. ರಣಧೀರ ಕಂಠೀರವ ನರಸರಾಜ ( 1638-1659) ಮೈಸೂರು ಮನೆತನದ ಮೊದಲ ಸ್ವತಂತ್ರ ದೊರೆ ಕಂಠೀರವ ನರಸರಾಜ ಒಡೆಯರು. 1638 ರಲ್ಲಿ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದ ವಿಜಯಪುರದ ರಣದುಲ್ಲಾ ಖಾನನನ್ನು ಸೋಲಿಸಿದರು. ಕಂಠೀರವ ...