ಪ್ರಪಂಚದ ವಿವಿಧ ವಾಯುಗುಣ ಪ್ರದೇಶಗಳು
ಪ್ರಪಂಚದ ವಿವಿಧ ವಾಯುಗುಣ ಪ್ರದೇಶಗಳು ಕೆಂಪು - ಸಮಭಾಜಕ ವೃತ್ತ ವಾಯುಗುಣ ಹಳದಿ - ಉಷ್ಣ ವಾಯುಗುಣ ಹಸಿರು - ಸಮಶೀತೋಷ್ಣ ವಾಯುಗುಣ ನೀಲಿ - ಶೀತ ವಾಯುಗುಣ ಸಮಭಾಜಕವೃತ್ತ ವಾಯುಗುಣ ಈ ವಲಯವು ಸಮಭಾಜಕವೃತ್ತದಿಂದ ಉತ್ತರ ಮತ್ತು ದಕ್ಷಿಣದ ಕಡೆಗೆ 10 ಡಿಗ್ರಿ ಅಕ್ಷಾಂಶದವರೆಗೆ ಹರಡಿದೆ. ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಇಲ್ಲಿ ವಾರ್ಷಿಕ ಉಷ್ಣಾಂಶ ಸರಾಸರಿ 27 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹಗಲು ಅಧಿಕ ಉಷ್ಣಾಂಶದಿಂದ ಕೂಡಿದ್ದು ರಾತ್ರಿ ಹೊತ್ತು ವಿಕಿರಣಗಳಿಂದ ಉಷ್ಣಾಂಶವು ಕಡಿಮೆಯಾಗಿ ತಂಪಾಗಿರುತ್ತದೆ. ಗಾಳಿಯು ಸಮತಲವಾಗಿ ಚಲಿಸುತ್ತದಲ್ಲದೆ ಅತಿಯಾದ ತೇವಾಂಶದಿಂದ ಕೂಡಿರುತ್ತದೆ. ಕರಾವಳಿ ಪ್ರದೇಶದಲ್ಲಿ ಹೆಚ್ಚು ಭೂಗಾಳಿ ಮತ್ತು ಸಮುದ್ರಗಾಳಿಗಳು ಬೀಸುತ್ತವೆ ಈ ವಲಯದಲ್ಲಿ ಅಧಿಕ ಉಷ್ಣದಿಂದ ನೀರು ಕಾದು ಆವಿಯಾಗಿ ಸಂಜೆಯ ಹೊತ್ತಿಗೆ ಮಳೆಯಾಗಿ ಬೀಳುತ್ತದೆ. ಇಂತಹ ಮಳೆಯನ್ನು ಪರಿಸರಣ ಮಳೆ ಎನ್ನುವರು. ಅಲ್ಲದೆ ಈ ಪ್ರದೇಶದಲ್ಲಿ ವರ್ಷಾದ್ಯಂತ ಭಾರಿ ಮಳೆಯಾಗುತ್ತದೆ. ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ 150 ರಿಂದ 300 ಸೆಂ.ಮೀ ವರೆಗೆ ಅತ್ಯಧಿಕ ಮಳೆಯಾಗುತ್ತದೆ. ಇಲ್ಲಿ ಅಮೆಜಾನ್ ಅರಣ್ಯ/ಸೆಲ್ವಾಸ್ ಮಾದರಿ ಕಾಡುಗಳು ಕಂಡುಬರುತ್ತವೆ. ಇವು ಸದಾ ಹಸಿರಾದ ನಿತ್ಯ ಹರಿದ್ವರ್ಣದ ಕಾಡುಗಳೆನಿಸಿವೆ. ಇಲ್ಲಿನ ದುರ್ಗಮ ಕಾಡುಗಳ ಕಾರಣದಿಂದ ಬೆಳಕು ಸರಿಯಾಗಿ ಭೂಮಿಗೆ ತಲುಪದೆ ಈ ಪ್ರದೇಶಗಳನ್ನು ಮಂದ ಬೆಳಕಿನ ಪ್ರ...