ಪೋಸ್ಟ್‌ಗಳು

ಭಾರತ ಇತಿಹಾಸ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಾರತೀಯ ಸ್ವಾತಂತ್ರ್ಯ ಹೋರಾಟ - ಗಾಂಧಿಯುಗ

ಇಮೇಜ್
ಭಾರತೀಯ ಸ್ವಾತಂತ್ರ್ಯ ಹೋರಾಟ ಗಾಂಧಿಯುಗ ( 1915-1947) ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ 1915 ರಲ್ಲಿ ಭಾರತಕ್ಕೆ ಹಿಂದಿರುಗಿದರು. ಗೋಪಾಲಕೃಷ್ಣ ಗೋಖಲೆ ಯವರು ಗಾಂಧಿಯವರ ರಾಜಕೀಯ ಗುರುವಾಗಿದ್ದರು. 1917 ರಲ್ಲಿ ಗಾಂಧೀಜಿ ಗುಜರಾತಿನ ಅಹ್ಮದಾಬಾದಿನಲ್ಲಿ ಸಾಬರಮತಿ ಆಶ್ರಮವನ್ನು ನಿರ್ಮಿಸಿದರು. ಯಂಗ್ ಇಂಡಿಯಾ ಇವರು ನಡೆಸುತ್ತಿದ್ದ ಪತ್ರಿಕೆಯಾಗಿತ್ತು. ಆತ್ಮಕತೆ ಮೈ ಎಕ್ಸ್ಪೆರಿಮೆಂಟ್ ವಿತ್ ದ ಟ್ರುತ್ (ನನ್ನ ಸತ್ಯಾನ್ವೇಷಣೆ) ಎಂಬುದು ಆತ್ಮಕತೆ. ಗಾಂಧಿಯವರನ್ನು ಸುಭಾಷ್ ಚಂದ್ರ ಭೋಸರು ರಾಷ್ಟ್ರಪಿತ ಎಂತಲೂ , ವಲ್ಲಭಬಾಯಿ ಪಟೇಲ್ ಅವರು ಬಾಪೂಜಿ ಎಂತಲೂ ಕರೆದಿರುವರು. ರವೀಂದ್ರನಾಥ ಠಾಗೂರರು ಗಾಂಧಿಯವರನ್ನು ಮಹಾತ್ಮ ಎಂದು ಕರೆದರೆ , ಗಾಂಧೀಜಿ ಠಾಗೂರರನ್ನು ಗುರುದೇವ ಎಂದು ಕರೆದಿದ್ದಾರೆ. ಬ್ರಿಟನ್ ಪ್ರಧಾನಿ ಸರ್ ವಿನ್ಸ್ಟನ್ ಚರ್ಚಿಲ್ ಗಾಂಧಿಯವರನ್ನು ಅರೆಬೆತ್ತಲೆ ಫಕೀರ ಎಂದು ಕರೆಯುತ್ತಿದ್ದರು. ಹೋಂ ರೂಲ್ ಚಳುವಳಿ ( 1916) ಅನಿಬೆಸೆಂಟರು ಸ್ವರಾಜ್ಯ ಸ್ಥಾಪನೆ , ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ಭಾರತೀಯ ವೈದಿಕ ಶಿಕ್ಷಣದ ಜಾರಿ ಈ ಅಂಶಗಳನ್ನು ಜಾರಿಗೆ ತರುವುದಕ್ಕಾಗಿ ಹೋಂ ರೂಲ್ ಲೀಗ್ ಚಳುವಳಿಯನ್ನು ಪ್ರಾರಂಭಿಸುವ ಕುರಿತು 1914 ಜನವರಿ 2 ರಂದು ತಮ್ಮ ಕಾಮನ್ ವ್ಹೀಲ್ ಪತ್ರಿಕೆಯಲ್ಲಿ ಪ್ರಕಟಿಸಿದರು. 1916 ಏಪ್ರಿಲ್ ನಲ್ಲಿ ಬಾಲಗಂಗಾಧರ ತಿಲಕರು   ಬಾಂಬೆಯಲ್ಲಿ (ಮಹಾರಾಷ್ಟ್ರ) ಹೋಂ ರೂಲ್ ಚಳುವಳಿಯನ್...