ಉಷ್ಣ
ಉಷ್ಣ ಒಂದು ವಸ್ತುವಿನಲ್ಲಿರುವ ಎಲ್ಲಾ ಅಣುಗಳ ಚಲನಶಕ್ತಿಯೇ ಉಷ್ಣ. ಉಷ್ಣದ ಅಂತರರಾಷ್ಟ್ರೀಯ ಏಕಮಾನ ಜೌಲ್ ( J) ಒಂದು ವಸ್ತುವಿನ ಬಿಸಿಯ ಅಥವಾ ತಣ್ಣಗಿನ ಮಟ್ಟದ ಅಳತೆಯೇ ತಾಪ. ತಾಪದ ಅಂತರರಾಷ್ಟ್ರೀಯ ಏಕಮಾನ ಕೆಲ್ವಿನ್ ( K) ಒಂದು ಗ್ರಾಂ ನೀರಿನ ತಾಪವನ್ನು 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿಸಲು ನೀಡುವ ಉಷ್ಣದ ಪ್ರಮಾಣವನ್ನು ಒಂದು ಕ್ಯಾಲೊರಿ ಎನ್ನುವರು. 1 ಕಿಲೊಗ್ರಾಂ ತೂಕದ ವಸ್ತುವಿನ ತಾಪವನ್ನು 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿಸಲು ಬೇಕಾದ ತಾಪವನ್ನು ವಿಶಿಷ್ಟೋಷ್ಣ ಎನ್ನುವರು 1 ಕಿಲೊಗ್ರಾಂ ತೂಕದ ಘನವಸ್ತುವನ್ನು ತಾಪ ಹೆಚ್ಚಿಸದೆ ಸಂಪೂರ್ಣವಾಗಿ ದ್ರವರೂಪದ ಸ್ಥಿತಿಗೆ ತರುವುದನ್ನು ಗುಪ್ತೋಷ್ಣ ಎನ್ನುವರು. ಉಷ್ಣದಿಂದ ಲೋಹಗಳು ವಿಕಸಿಸುತ್ತವೆ ಅದೇ ಉಷ್ಣವನ್ನು ತೆಗೆದಾಗ ಸಂಕುಚಿತವಾಗುತ್ತವೆ. ಲೋಹಗಳ ಈ ಗುಣದಿಂದ ಲೋಹಗಳನ್ನು ನಮ್ಮ ದಿನನಿತ್ಯದ ಅನೇಕ ಕೆಲಸಗಳಿಗೆ ಬಳಸಿಕೊಳ್ಳಬಹುದು. ಉಷ್ಣತಾಮಾಪಕಗಳಲ್ಲಿ ಪಾದರಸ ಅಥವಾ ಕೆಂಪು ಆಲ್ಕೊಹಾಲ್ ಅನ್ನು ಬಳಸುತ್ತಾರೆ. ಆರೋಗ್ಯವಂತ ಮನುಷ್ಯನ ತಾಪ ಸು. 37 ಡಿಗ್ರಿ ಸೆಲ್ಸಿಯಸ್/98.6 ಡಿಗ್ರಿ ಫ್ಯಾರನ್ ಹೀಟ್ ಇರುತ್ತದೆ. ನೀರಿನಲ್ಲಿ ವಿಲೀನವಾಗುವ ಲವಣಗಳು ಇದ್ದಲ್ಲಿ ನೀರಿನ ಕುದಿಬಿಂದು ಹೆಚ್ಚಾಗಿರುತ್ತದೆ. ವಾತಾವರಣದಲ್ಲಿನ ಒತ್ತಡವು ಸಹ ನೀರಿನ ಕುದಿಬಿಂದುವಿನ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಸಾಮಾನ್ಯ ತಾಪ ಸೆಲ್ಸಿಯಸ್ ನಲ್ಲಿ 0 ಡಿಗ್ರಿ , ಫ್ಯಾರನ್ ಹೀಟ್ ನಲ್ಲಿ ...