ಬೆಳಕು - ದರ್ಪಣ ಮತ್ತು ಮಸೂರಗಳು - ಕಣ್ಣು

ಬೆಳಕು - ದರ್ಪಣ ಮತ್ತು ಮಸೂರಗಳು - ಕಣ್ಣು

ಬೆಳಕು ಮತ್ತು ದರ್ಪಣ

ಸತ್ಯ ಪ್ರತಿಬಿಂಬ : ಪರದೆಯ ಮೇಲೆ ಪ್ರತಿಬಿಂಬ ಮೂಡಿದರೆ ಅದನ್ನು ಸತ್ಯ ಪ್ರತಿಬಿಂಬ ಎನ್ನುವರು. ಸತ್ಯ ಪ್ರತಿಬಿಂಬದಲ್ಲಿ ವಕ್ರೀಭವನದ ನಂತರ ಕಿರಣಗಳು ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಬಿಂಬವು ಯಾವಾಗಲೂ ತಲೆಕೆಳಕಾಗಿರುತ್ತವೆ.

ಮಿಥ್ಯ ಪ್ರತಿಬಿಂಬ : ಪರದೆಯ ಮೇಲೆ ಪ್ರತಿಬಿಂಬ ಮೂಡದೇ ಹೋದರೆ ಅದನ್ನು ಮಿಥ್ಯ ಪ್ರತಿಬಿಂಬ ಎನ್ನುವರು. ಮಿಥ್ಯ ಪ್ರತಿಬಿಂಬದಲ್ಲಿ ವಕ್ರೀಭವನದ ನಂತರ ಕಿರಣಗಳು ಒಂದು ಬಿಂದುವಿನಲ್ಲಿ ಸಂಧಿಸಿದಂತೆ ಭಾಸವಾಗುತ್ತದೆ. ಬಿಂಬವು ಯಾವಾಗಲೂ ನೇರವಾಗಿರುತ್ತದೆ.

ದರ್ಪಣಗಳ ವಿಧಗಳು

ಸಮತಲ ದರ್ಪಣ

ಸಮತಲ ದರ್ಪಣದಿಂದ ಉಂಟಾಗುವ ಪ್ರತಿಬಿಂಬವು ಸಮಬಾಹು ಪ್ರತಿಬಿಂಬವಾಗಿರುತ್ತದೆ. ಈ ಸಮಬಾಹು ಪ್ರತಿಬಿಂಬವು ನೇರ ಮತ್ತು ಮಿಥ್ಯ ಪ್ರತಿಬಿಂಬವಾಗಿರುತ್ತದೆ. ಈ ಪ್ರತಿಬಿಂಬವು ವಸ್ತುವಿನ ಗಾತ್ರದಷ್ಟೇ ಉಂಟಾಗುತ್ತದೆ. 2 ಸಮತಲ ದರ್ಪಣಗಳ ನಡುವಿನ ಕೋನ ಯಾವಾಗಲೂ ಶೂನ್ಯ ಅಥವಾ ಅನಂತವಾಗಿರುತ್ತದೆ.

ನಿಮ್ನ ದರ್ಪಣ

ಒಂದು ವಸ್ತುವನ್ನು ದರ್ಪಣದ ಸಮೀಪದಲ್ಲಿ ತಂದು ಇಟ್ಟಾಗ ವಸ್ತುವಿಗಿಂತಲೂ ದೊಡ್ಡದಾದಮಿಥ್ಯ ಮತ್ತು ನೇರವಾದ ಪ್ರತಿಬಿಂಬ ಉಂಟಾಗುತ್ತದೆ.

ನಿಮ್ನ ದರ್ಪಣದಿಂದ ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ ಉಂಟಾಗುತ್ತದೆ.

ನಿಮ್ನ ದರ್ಪಣವನ್ನು ಕಣ್ಣು, ಕಿವಿ, ಮೂಗು, ದಂತ ಇತ್ಯಾದಿಗಳನ್ನು ಪರೀಕ್ಷಿಸಲು, ಟಾರ್ಚ್‍ಗಳ ಪ್ರತಿಫಲಕಗಳಾಗಿ, ವಾಹನಗಳ ದೀಪಗಳು, ಸೌರ ಒಲೆಗಳು ಮುಂತಾದವುಗಳಲ್ಲಿ ಬಳಸುತ್ತಾರೆ.

ಪೀನ ದರ್ಪಣ

ಪೀನ ದರ್ಪಣದಲ್ಲಿ ವಸ್ತುವಿನ ಗಾತ್ರಕ್ಕಿಂತಲೂ ಚಿಕ್ಕದಾದ, ಮಿಥ್ಯ ಮತ್ತು ನೇರವಾದ ಪ್ರತಿಬಿಂಬ ಉಂಟಾಗುತ್ತದೆ.

ಪೀನ ದರ್ಪಣವನ್ನು ವಾಹನಗಳಲ್ಲಿ ಹಿಂದಿನಿಂದ ಬರುವ ಬೇರೆ ವಾಹನಗಳನ್ನು ನೋಡಲು ಕನ್ನಡಿಗಳಾಗಿ, ಬೆಂಕಿ ಹೊತ್ತಿಸಲು ದಹನ ಗಾಜು ಆಗಿ, ಭೂಮಿ ಮತ್ತು ಸಮುದ್ರದಲ್ಲಿರುವ ವಸ್ತುಗಳನ್ನು ನೋಡಲು ಪೀನ ದರ್ಪಣದಿಂದ ಮಾಡಿರುವ ಭೌಮಿಕ ದೂರದರ್ಶಕವನ್ನಾಗಿ ಬಳಸುವರು.

ಪೀನ ದರ್ಪಣದಲ್ಲಿ ಸಂಗಮ ದೂರವು ಧನಾತ್ಮಕವಾಗಿದ್ದರೆ, ನಿಮ್ನ ದರ್ಪಣದಲ್ಲಿ ಸಂಗಮ ದೂರವು ಋಣಾತ್ಮಕವಾಗಿರುತ್ತದೆ.

ಬೆಳಕು ಮತ್ತು ಮಸೂರಗಳು

ನಿಮ್ನ ಮಸೂರ

ನಿಮ್ನ ಮಸೂರದಲ್ಲಿ ವಸ್ತುವಿನ ಗಾತ್ರಕ್ಕಿಂತಲೂ ಚಿಕ್ಕದಾದ, ಮಿಥ್ಯ ಮತ್ತು ನೇರವಾದ ಪ್ರತಿಬಿಂಬ ಉಂಟಾಗುತ್ತದೆ

ಪೀನ ಮಸೂರ

ಪೀನ ಮಸೂರದಿಂದ ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ ಉಂಟಾಗುತ್ತದೆ. ವಸ್ತುವನ್ನು ಮಸೂರದ ಸಮೀಪದಲ್ಲಿ ತಂದು ಇಟ್ಟಾಗ ವಸ್ತುವಿಗಿಂತಲೂ ದೊಡ್ಡದಾದ, ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ ಉಂಟಾಗುತ್ತದೆ.


ನಿಮ್ನ ದರ್ಪಣ ಮತ್ತು ಪೀನ ಮಸೂರಗಳು ಸತ್ಯ ಪ್ರತಿಬಿಂಬಗಳನ್ನು ಉಂಟು ಮಾಡುತ್ತವೆ. ಹಾಗೆಯೇ ಪೀನ ದರ್ಪಣ ಹಾಗೂ ನಿಮ್ನ ಮಸೂರಗಳು ಮಿಥ್ಯ ಪ್ರತಿಬಿಂಬಗಳನ್ನು ಉಂಟುಮಾಡುತ್ತವೆ.

ಕಣ್ಣು ಮತ್ತು ಮಸೂರಗಳು

ಒಂದು ವಸ್ತುವು ಸ್ಪಷ್ಟವಾಗಿ ಮತ್ತು ಒತ್ತಡ ರಹಿತವಾಗಿ ಕಣ್ಣಿಗೆ ಕಾಣುವ ಕನಿಷ್ಟ ದೂರವನ್ನು ಕಣ್ಣಿನ ಕನಿಷ್ಟ ದೂರ ಎನ್ನುವರು. ಸಾಮಾನ್ಯವಾಗಿ ಪ್ರೌಢ ವಯಸ್ಕರಲ್ಲಿ ಈ ಕಣ್ಣಿನ ಕನಿಷ್ಟ ದೂರ 25 ಸೆಂ.ಮೀ ಇರುತ್ತದೆ.

ಕಣ್ಣಿನ ಸಮಸ್ಯೆಗಳು


ಮಯೋಪಿಯಾ/ಸಮೀಪದೃಷ್ಟಿ

ಈ ವ್ಯಕ್ತಿಗೆ ಸಮೀಪದ ವಸ್ತುಗಳನ್ನು ಮಾತ್ರ ಸ್ಪಷ್ಟವಾಗಿ ನೋಡಲು ಸಾಧ್ಯವಿದ್ದು ದೂರದ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಈ ದೋಷ ಉಳ್ಳವರಿಗೆ ವಸ್ತುವಿನ ಬಿಂಬವು ಕಣ್ಣಿನ ರೆಟಿನಾದ ಮೇಲೆ ಮೂಡದೆ, ರೆಟಿನಾದ ಮುಂಭಾಗದ ಮೇಲೆ ಮೂಡುತ್ತದೆ. ಇವರಿಗೆ ಹತ್ತಿರದಲ್ಲಿರುವ ವಸ್ತುವು ಸಹ ಸ್ವಲ್ಪ ದೂರದಲ್ಲಿರುವಂತೆ ಕಾಣುತ್ತದೆ. ಇದಕ್ಕೆ ಕಾರಣ ಕಣ್ಣಿನ ಮಸೂರವು ಸ್ವಲ್ಪ ಉಬ್ಬಿರುತ್ತದೆ.

ಹೈಪರ್ ಮೆಟೋಪಿಯಾ/ದೂರದೃಷ್ಟಿ

ಈ ವ್ಯಕ್ತಿಗೆ ದೂರದ ವಸ್ತುಗಳನ್ನು ಮಾತ್ರ ಸ್ಪಷ್ಟವಾಗಿ ನೋಡಲು ಸಾಧ್ಯವಿದ್ದು ಸಮೀಪದ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಈ ದೋಷ ಉಳ್ಳವರಿಗೆ ವಸ್ತುವಿನ ಬಿಂಬವು ಕಣ್ಣಿನ ರೆಟಿನಾದ ಮೇಲೆ ಮೂಡದೆ, ರೆಟಿನಾದ ಹಿಂಬಾಗದ ಮೇಲೆ ಮೂಡುತ್ತದೆ. ಇವರಿಗೆ ಹತ್ತಿರದಲ್ಲಿರುವ ವಸ್ತುವು ಸಹ ಸ್ವಲ್ಪ ದೂರದಲ್ಲಿರುವಂತೆ ಕಾಣುತ್ತದೆ. ಇದಕ್ಕೆ ಕಾರಣ ಕಣ್ಣಿನ ಮಸೂರವು ಸ್ವಲ್ಪ ಚಿಕ್ಕದಾಗಿರುತ್ತದೆ.

ಪ್ರೆಸ್ಬಯೋಪಿಯಾ 

ವಯಸ್ಸಾದಂತೆಲ್ಲಾ ಕಣ್ಣಿನಲ್ಲಿರುವ ಸಿಲಿಯರಿ ಸ್ನಾಯುಗಳು ದುರ್ಬಲವಾದಾಗ ಕಣ್ಣಿನ ಮಸೂರವು ತನ್ನ ಶಕ್ತಿ ಕಳೆದುಕೊಂಡು ಈ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ದೂರದ ವಸ್ತುಗಳು ಕಾಣದೇ ಹೋಗುವ ಅಥವಾ ಸಮೀಪದ ವಸ್ತುಗಳು ಕಾಣದೇ ಹೊಗುವ ಸಮಸ್ಯೆಯುಂಟಾಗುತ್ತವೆ. ಈ ಸಮಸ್ಯೆಗೆ ದ್ವಿಸಂಗಮ ಮಸೂರ ಹಾಕಬೇಕಾಗುತ್ತದೆ. ನಿಮ್ನ ಹಾಗೂ ಪೀನ ಮಸೂರಗಳೆರಡನ್ನು ಒಳಗೊಂಡಿರುವುದೇ ದ್ವಿಸಂಗಮ ಮಸೂರ.

ವರ್ಣಾಂಧತೆ ಇರುವ ವ್ಯಕ್ತಿಗಳಿಗೆ ಮೂಲ ಬಣ್ಣಗಳಾದ ಹಸಿರು, ಕೆಂಪು, ನೀಲಿ ಬಣ್ಣಗಳು ಕಾಣಿಸುವುದಿಲ್ಲ.

ಕಾಮೆಂಟ್‌ಗಳು