ಬೆಳಕು ಮತ್ತು ವಿದ್ಯುತ್ ಕಾಂತೀಯ ತರಂಗಗಳು
ಬೆಳಕು ಮತ್ತು ವಿದ್ಯುತ್ ಕಾಂತೀಯ ತರಂಗಗಳು
ಬೆಳಕು
ಬೆಳಕು ಒಂದು ಶಕ್ತಿಯ ಆಕರ ಅಥವಾ ರೂಪವಾಗಿದೆ. ಬೆಳಕಿನಲ್ಲಿ ಫೋಟಾನ್ಗಳೆಂಬ ಸೂಕ್ಷ್ಮ
ಕಣಗಳಿರುತ್ತವೆ. ಬೆಳಕು ತರಂಗ ರೂಪದ ಚಲನೆ ಮತ್ತು ಕಣ ರೂಪದ ಚಲನೆ ಎಂಬ ಎರಡು ರೀತಿಯ ಚಲನೆಗಳನ್ನು
ಹೊಂದಿದೆ. ಬೆಳಕಿನ ತರಂಗ ರೂಪದ ಚಲನೆಯ ಪ್ರತಿಪಾದಕ ಹೈಗನ್ಸ್ ಕ್ರಿಶ್ಚಿಯನ್ ಮತ್ತು ಕಣರೂಪದ
ಚಲನೆಯ ಪ್ರತಿಪಾದಕ ಐಸಾಕ್ ನ್ಯೂಟನ್. ಬೆಳಕು ನೇರ ಪ್ರಸರಣವನ್ನು ಹೊಂದಿದೆ.
ಬೆಳಕು ವಿದ್ಯುತ್ಕಾಂತೀಯ ಅಲೆಗಳಂತೆ ವರ್ತಿಸುತ್ತದೆ ಎಂಬ ಪರಿಕಲ್ಪನೆ ನೀಡಿದ ವ್ಯಕ್ತಿ
ಮ್ಯಾಕ್ಸ್ವೆಲ್. ಈ ವಿದ್ಯುತ್ಕಾಂತೀಯ ಅಲೆಗಳ ಪರಿಕಲ್ಪನೆ ಸಹಾಯದಿಂದ ಐನ್ಸ್ಟೈನ್ ದ್ಯುತಿ
ವಿದ್ಯುತ್ ಪರಿಣಾಮವನ್ನು (ಫೋಟೊ ಎಲೆಕ್ಟ್ರಿಸಿಟಿ ಎಫೆಕ್ಟ್) ಕಂಡುಹಿಡಿದರು. ಈ ಶೋಧನೆಗೆ ಐನ್
ಸ್ಟೈನ್ 1905 ರಲ್ಲಿ ನೋಬೆಲ್ ಪ್ರಶಸ್ತಿ ಪಡೆದರು. ಐನ್ ಸ್ಟೈನ್ ಈ
ಪ್ರಶಸ್ತಿ ಪಡೆದ 100 ವರ್ಷದ ನಂತರ 2005
ಅನ್ನು ಅಂತರಾಷ್ಟ್ರೀಯ ಭೌತವರ್ಷ ಎಂದು ಕರೆಯಲಾಯಿತು.
ನಿರ್ವಾತ ಪ್ರದೇಶದಲ್ಲಿ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿ.ಮೀ ಇರುತ್ತದೆ. ಈ ವೇಗವು ಮೀಟರ್ ನಲ್ಲಿ C=3x108 m/s ಆಗಿರುತ್ತದೆ. ಬೆಳಕು ಒಂದು ವರ್ಷದಲ್ಲಿ ಚಲಿಸಬಹುದಾದ ದೂರವನ್ನು ಬೆಳಕಿನ ವರ್ಷ
(ಜ್ಯೋತಿರ್ವರ್ಷ) ಎನ್ನುವರು. ಬೆಳಕು ಒಂದು ವರ್ಷಕ್ಕೆ 9461 ಬಿಲಿಯನ್
ಕಿ.ಮೀ ದೂರ ಚಲಿಸುತ್ತದೆ.
ಬೆಳಕಿನ ರೋಹಿತವನ್ನು ಅಧ್ಯಯನ ಮಾಡಲು ರೋಹಿತ ದರ್ಶಕ ಎಂಬ ಉಪಕರಣವನ್ನು ಬಳಸುತ್ತಾರೆ. ಈ
ರೋಹಿತ ದರ್ಶಕವನ್ನು ವಸ್ತುವಿನಲ್ಲಿರುವ ಧಾತುಗಳನ್ನು ಪತ್ತೆಹಚ್ಚಲು, ಆಕಾಶಕಾಯಗಳ ಅಧ್ಯಯನದಲ್ಲಿ, ಅಪರಾಧಶಾಸ್ತ್ರ
ವಿಭಾಗದಲ್ಲಿ ಬಳಸುತ್ತಾರೆ.
ಆಪ್ಟಿಕಲ್ ಫೈಬರ್ ಕೇಬಲ್ (ಒ ಎಫ್ ಸಿ) ಇವುಗಳನ್ನು ಸಂದೇಶಗಳನ್ನು ಕಳುಹಿಸಲು
ಬಳಸುತ್ತಾರೆ. ಇವು ಒಂದು ಬಾರಿಗೆ ಸು. 10000 ಸಂದೇಶಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿವೆ.
ಬೆಳಕಿನ ವಕ್ರೀಭವನ
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಾಗ ದಿಕ್ಕು ಬದಲಿಸುತ್ತದೆ ಅಂದರೆ ಬೆಳಕು ಸ್ವಲ್ಪ ಬಾಗಿ ಓರೆಯಾಗಿ ಚಲಿಸುತ್ತದೆ ಇದಕ್ಕೆ ಬೆಳಕಿನ ವಕ್ರೀಭವನ ಎಂದು ಹೆಸರು.
ಗಾಜಿನ
ಲೋಟವೊಂದರಲ್ಲಿ ನೀರನ್ನು ತುಂಬಿಸಿ ಅದರೊಳಗೆ ಕಡ್ಡಿ,
ತಂತಿ, ಪೆನ್ ಏನಾದರೂ ಇಟ್ಟಾಗ ಅದು ಓರೆಯಾಗಿ
ಕಾಣುವುದು, ಗಾಜಿನ ಲೋಟದಲ್ಲಿ ನೀರು ತುಂಬಿ ಅದರ ತಳದಲ್ಲಿ
ನಾಣ್ಯವೊಂದನ್ನು ಇಟ್ಟಾಗ ಅದು ವಾಸ್ತವಕ್ಕಿಂತಲೂ ಸ್ವಲ್ಪ ಮೇಲಕ್ಕೆ ಬಂದಂತೆ ಗೋಚರಿಸುವಿಕೆ,
ನಕ್ಷತ್ರಗಳು ವಾಸ್ತವಕ್ಕಿಂತ ವಿಭಿನ್ನ ಜಾಗದಲ್ಲಿ ಕಾಣಿಸುವುದು ಇವೇ ಮುಂತಾದವು
ವಕ್ರೀಭವನದ ನಿದರ್ಶನಗಳು.
ಕೆಲವು ಪ್ರಮುಖ ವಸ್ತುಗಳಲ್ಲಿ ಬೆಳಕಿನ ವಕ್ರೀಭವನ ಸೂಚ್ಯಂಕಗಳು
ಗಾಜು, ನೀರು, ವಾತಾವರಣ ಇತ್ಯಾದಿಗಳಲ್ಲಿ ಚಲಿಸುವಾಗ ಬೆಳಕಿನ ವೇಗ ಒಂದಕ್ಕಿಂತ ಇನ್ನೊಂದರಲ್ಲಿ
ಭಿನ್ನವಾಗಿರುತ್ತದೆ. ಹಾಗೆಯೆ ನಿರ್ವಾತದಲ್ಲಿ ಚಲಿಸುವಾಗ ಬೆಳಕಿನ ವೇಗ ಅತಿ ಹೆಚ್ಚು ಇದ್ದು ಇತರ
ಮಾಧ್ಯಮಗಳಲ್ಲಿ ಬೆಳಕಿನ ವೇಗ ಸ್ವಲ್ಪ ಕಡಿಮೆ ಇರುತ್ತದೆ. ನಿರ್ವಾತ ಎಂದರೆ ಗಾಳಿ, ನೀರು, ತೇವಾಂಶ, ದೂಳು ಇಲ್ಲದ
ವಾತಾವರಣ.
ಒಂದು ಮಾಧ್ಯಮದಲ್ಲಿ ಬೆಳಕು ಚಲಿಸುವ ವೇಗ ಕಡಿಮೆಯಿದ್ದಷ್ಟು ಆ ಮಾಧ್ಯಮದ ವಕ್ರೀಭವನ ಸೂಚ್ಯಂಕ ಹೆಚ್ಚಾಗಿರುತ್ತದೆ. ಈ ಕೆಳಗಿನವುಗಳಲ್ಲಿ ಅತಿ ಕಡಿಮೆ ವಕ್ರೀಭವನ ಸೂಚ್ಯಂಕ ಹೊಂದಿರುವ ಗಾಳಿಯಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸಿದರೆ, ಅತಿ ಹೆಚ್ಚು ವಕ್ರೀಭವನ ಸೂಚ್ಯಂಕ ಹೊಂದಿರುವ ವಜ್ರದಲ್ಲಿ ಬೆಳಕು ಅತ್ಯಂತ ನಿಧಾನವಾಗಿ ಚಲಿಸುತ್ತದೆ.
ಗಾಳಿ - 1
ಮಂಜುಗಡ್ಡೆ – 1.31
ನೀರು – 1.33
ಆಲ್ಕೋಹಾಲ್ – 1.36
ಸೀಮೆ ಎಣ್ಣೆ – 1.44
ಸ್ಫಟಿಕ ಶಿಲೆ _ 1.46
ಟರ್ಪೆಂಟೈನ್ ಎಣ್ಣೆ – 1.47
ಬೆಂಜೀನ್ – 1.50
ಕ್ರೌನ್ ಗಾಜು – 1.52
ಕಲ್ಲುಪ್ಪು – 1.54
ಇಂಗಾಲದ ಡೈ ಸಲ್ಫೈಡ್ – 1.63
ಸಾಂದ್ರ ಫ್ಲಿಂಟ್ ಗಾಜು – 1.65
ವಜ್ರ – 1.42
ಬೆಳಕಿನ ಪ್ರತಿಫಲನ
ಬೆಳಕು ಒಂದು ಮಾಧ್ಯಮದಲ್ಲಿ ಚಲಿಸುವಾಗ ಯಾವುದಾದರೊಂದು ವಸ್ತುವಿನ ಮೇಲೆ ಬಿದ್ದು ನಂತರ ಬಂದ ಮಾಧ್ಯಮದಲ್ಲಿಯೆ ಹಿಂದಿರುಗಿದರೆ ಇದನ್ನು ಬೆಳಕಿನ ಪ್ರತಿಫಲನ ಎನ್ನುವರು.
ಬೆಳಕಿನ ಪ್ರತಿಫಲನ
ಕ್ರಿಯೆಯಿಂದಲೇ ವಸ್ತುಗಳು ನಮ್ಮ ಕಣ್ಣಿಗೆ ಕಾಣಿಸುವುದು. ಸಾಮಾನ್ಯವಾಗಿ ದರ್ಪಣಗಳಲ್ಲಿ, ಸಮತಟ್ಟಾದ ಲೋಹಗಳ ಮೇಲ್ಮೈ, ನೀರಿನ
ಮೇಲ್ಮೈ ಮುಂತಾದವುಗಳಲ್ಲಿ ಇಂತಹ ವಿದ್ಯಮಾನ ಜರುಗುತ್ತದೆ.
ಪ್ರತಿಫಲನ ಕ್ರಿಯೆಯ 2 ನಿಯಮಗಳು
ಬೆಳಕಿನ ಪ್ರತಿಫಲನದಲ್ಲಿ ಪತನ ಕೋನ ಮತ್ತು ಪ್ರತಿಫಲನದ ಕೋನ ಸಮನಾಗಿರುತ್ತವೆ.
ಪತನ ಕಿರಣ, ಪ್ರತಿಫಲನ
ಕಿರಣ ಮತ್ತು ಸರಳ ರೇಖೆಗಳು ಒಂದೇ ಮೇಲ್ಮೈನ ಪ್ರತಿಫಲನ ಬಿಂದುವಿನಲ್ಲಿ ಸಂಧಿಸುತ್ತವೆ.
ಬೆಳಕಿನ ಚದುರುವಿಕೆ
ಬೆಳಕಿನ ಚದುರುವಿಕೆ ಎಂಬುದು ಬೆಳಕಿನಲ್ಲಿನ ಬಣ್ಣಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬಣ್ಣಗಳು ವಾತಾವರಣದಲ್ಲಿ ಕಾಣಿಸುವ ವಿದ್ಯಮಾನವಾಗಿದೆ.
ನೀರು ಮತ್ತು ಆಕಾಶ ನೀಲಿಯಾಗಿ
ಕಾಣಲು, ಕಾಮನಬಿಲ್ಲು ಮೂಡಲು, ಧ್ರುವ
ಪ್ರದೇಶಗಳಲ್ಲಿನ ಅರೋರಾ ಮೂಡುವುದು, ಸೂರ್ಯ ಬೆಳಗ್ಗೆ ಮತ್ತು ಸಂಜೆ
ಹೊತ್ತು ಕೆಂಪಾಗಿ ಕಾಣುವುದು ಈ ಎಲ್ಲಾ ವಿದ್ಯಮಾನಗಳಿಗೆ ಬೆಳಕಿನ ಚದುರುವಿಕೆಯೆ ಕಾರಣವಾಗಿದೆ.
ಬಣ್ಣಗಳಲ್ಲಿ ಅತಿ ಕಡಿಮೆ ತರಂಗಾಂತರ ಹೊಂದಿರುವ ನೇರಳೆ ಬಣ್ಣ ಅತಿ ಹೆಚ್ಚು ಬಾಗುತ್ತದೆ ಮತ್ತು ನಿಧಾನವಾಗಿ ಚಲಿಸುತ್ತದೆ. ಅತಿ ದೀರ್ಘ ತರಂಗಾಂತರ ಹೊಂದಿರುವ ಕೆಂಪು ಬಣ್ಣ ಅತಿ ಕಡಿಮೆ ಬಾಗುತ್ತದೆ ಮತ್ತು ವೇಗವಾಗಿ ಚಲಿಸುತ್ತದೆ.
ತೇವಾಂಶ, ದೂಳಿನ ಕಣಗಳು,
ಹೊಗೆ ಮುಂತಾದ ಕಲಿಲ ಪದಾರ್ಥಗಳಿಂದ ಬೆಳಕು ಚದುರುವುದನ್ನು ಟಿಂಡಾಲ್ ಪರಿಣಾಮ
ಎನ್ನುವರು. 400 - 750 ಹರ್ಟ್ಜ್ ಒಳಗಿನ ಕಣ್ಣಿಗೆ ಕಾಣುವ ಬೆಳಕು
ಚದುರಿದಾಗ ಮಾತ್ರ ಈ ಟಿಂಡಾಲ್ ಪರಿಣಾಮ ಉಂಟಾಗುತ್ತದೆ.
ಅತಿ ಕಡಿಮೆ ಚದುರುವಿಕೆಯ ಕಾರಣ ಕೆಂಪು ಬಣ್ಣವನ್ನು ಸಿಗ್ನಲ್ ದ್ವೀಪಗಳಲ್ಲಿ ಎಚ್ಚರಿಕೆಯ
ಸಂಕೇತವಾಗಿ ಬಳಸಲಾಗುತ್ತದೆ.
ಬೆಳಕಿನ ಚದುರುವಿಕೆಯ ಇನ್ನೊಂದು ಪರಿಣಾಮ ಬೆಳಕಿನ ವ್ಯತೀಕರಣ. ಬೆಳಕಿನ ಅಲೆಗಳು ಒಂದರ ಮೇಲೆ ಇನ್ನೊಂದು ಚಲಿಸಿದಾಗ ಈ ಪರಿಣಾಮ ಉಂಟಾಗುತ್ತದೆ.
ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ ಎಂಬುದು ಪಾರದರ್ಶಕ ವಸ್ತುಗಳಲ್ಲಿ ನಡೆಯುವ ಪ್ರಕ್ರಿಯೆ. ಇಲ್ಲಿ ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸುತ್ತದೆ.
ವಜ್ರ
ಹೊಳೆಯುವಿಕೆ, ಗಾಜಿನ ಅಲಂಕೃತ
ವಸ್ತುಗಳು, ಬೈಸಿಕಲ್ ಹಿಂದೆ ಹಾಕುವ ಪ್ಲಾಸ್ಟಿಕ್ ನ ಅಶ್ರಗಗಳು ಹೊಳೆಯುವಿಕೆ ಇತ್ಯಾದಿಗಳು ಬೆಳಕಿನ ಸಂಪೂರ್ಣ ಆಂತರಿಕ
ಪ್ರತಿಫಲನದ ಪರಿಣಾಮಗಳು.
ವಿದ್ಯುತ್ಕಾಂತಿಯ ತರಂಗಗಳು
400 ರಿಂದ 750 ಹರ್ಟ್ಜ್ ವರೆಗಿನ ಬೆಳಕನ್ನು ಮಾತ್ರ ನಾವು ನೋಡಲು ಸಾಧ್ಯ. ನಮ್ಮ ಕಣ್ಣಿಗೆ ಗೋಚರಿಸದ ಬೆಳಕಿನ ಕಿರಣಗಳನ್ನು ವಿದ್ಯುತ್ ಕಾಂತೀಯ ತರಂಗಗಳೆನ್ನುತ್ತಾರೆ. ಇವು 400ಕ್ಕಿಂತ ಕಡಿಮೆ ಮತ್ತು 750ಕ್ಕಿಂತ ಹೆಚ್ಚಿರುತ್ತವೆ.
ಸೂಕ್ಷ್ಮ ತರಂಗಗಳು
ಸೂಕ್ಷ್ಮ ತರಂಗಗಳನ್ನು ಮೊದಲ ಬಾರಿಗೆ 1887 ರಲ್ಲಿ ಹೆನ್ರಿಕ್ ಹರ್ಟ್ಜ್ ಎಂಬಾತ ಆವಿಷ್ಕರಿಸಿದ. ದೂರಸಂಪರ್ಕ
ವ್ಯವಸ್ಥೆಯಲ್ಲಿ, ಸೂಕ್ಷ್ಮ ತರಂಗ ಒಲೆಗಳಲ್ಲಿ ಈ ತರಂಗಗಳನ್ನು
ಬಳಸುತ್ತಾರೆ.
ಅವಕೆಂಪು ಕಿರಣಗಳು
ಈ ತರಂಗಗಳನ್ನು ಸಂಶೋಧಿಸಿದವನು ಹರ್ಷಲ್. ಶತ್ರು ಶಿಬಿರಗಳನ್ನು
ಪತ್ತೆಹಚ್ಚಲು, ರಕ್ತ
ಪರಿಚಲನೆಯನ್ನು ಪ್ರಚೋದಿಸಲು, ರಿಮೋಟ್ ಕಂಟ್ರೋಲ್ ಗಳಲ್ಲಿ ಬಳಸಲು ಇವು
ಸಹಾಯಕವಾಗಿವೆ.
ನೇರಳಾತೀತ ಕಿರಣಗಳು
ಜೆ.ಡಬ್ಲ್ಯು ರಿಟ್ಟರ್ ಎಂಬ ವಿಜ್ಞಾನಿ ಈ ತರಂಗವನ್ನು ಕಂಡುಹಿಡಿದನು. ಚರ್ಮ ಹಾಗೂ ಮೂಳೆ ರೋಗದ ಚಿಕಿತ್ಸೆಗಾಗಿ, ನಕಲಿ ಮತ್ತು ಅಸಲಿ ರತ್ನಗಳನ್ನು ಪತ್ತೆಹಚ್ಚಲು ಈ ವಿಕಿರಣಗಳನ್ನು ಬಳಸುವರು.
ಕ್ಷ-ಕಿರಣಗಳು
ವಿಲಿಯಂ ರಾಂಟ್ಜನ್ ಎಂಬಾತ ಈ ತರಂಗಗಳನ್ನು ಸಂಶೋಧಿಸಿದನು.
ರೇಡಿಯೋಗ್ರಾಫಿಯಲ್ಲಿ, ಮೂಳೆಮುರಿತ
ಕಂಡುಹಿಡಿಯಲು, ದೇಹದೊಳಗೆ ಹೊಕ್ಕ ವಸ್ತುಗಳನ್ನು ಕಂಡುಹಿಡಿಯಲು ಈ
ವಿಕಿರಣಗಳನ್ನು ಬಳಸುವರು.
ಗಾಮಾ ಕಿರಣಗಳು
ಪಾಲ್ ಉಲ್ ರೀಚ್ ಎಡ್ವರ್ಡ್ ಎಂಬಾತ ಈ ತರಂಗಗಳನ್ನು ಸಂಶೋಧಿಸಿದನು.
ಚರ್ಮರೋಗದ ಚಿಕಿತ್ಸೆ, ಕ್ಯಾನ್ಸರ್
ಚಿಕಿತ್ಸೆ, ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು, ಯಂತ್ರಗಳ ಪರಿವೀಕ್ಷಣೆಗಾಗಿ, ರೇಡಿಯೋಗ್ರಾಫಿ
ಮುಂತಾದವುಗಳಲ್ಲಿ ಗಾಮಾ ಕಿರಣಗಳನ್ನು ಬಳಸುತ್ತಾರೆ.
ರೇಡಿಯೊ ತರಂಗಗಳು
1920 ರಲ್ಲಿ ಕ್ಲ್ಯಾವಿಯರ್ ಎಂಬ ವಿಜ್ಞಾನಿ ಈ ತರಂಗಗಳನ್ನು ಸಂಶೋಧಿಸಿದನು. ಈ ತರಂಗಗಳನ್ನು
ಉಪಗ್ರಹ ಸಂಪರ್ಕ ವ್ಯವಸ್ಥೆಯಲ್ಲಿ, ರೇಡಾರ್ ಗಳಲ್ಲಿ, ದೂರದರ್ಶನ ಹಾಗೂ ರೇಡಿಯೋ ಪ್ರಸಾರಗಳಲ್ಲಿ ಬಳಸುತ್ತಾರೆ
ದ್ಯುತಿ ವಿದ್ಯುತ್ ಪರಿಣಾಮ
ಕೆಲವೊಂದು ವಸ್ತುಗಳ ಮೇಲೆ ಬೆಳಕು ಬಿದ್ದಾಗ ಆ ವಸ್ತುಗಳು ಎಲೆಕ್ಟ್ರಾನ್ಗಳನ್ನು ಬಿಡುಗಡೆ ಮಾಡುತ್ತವೆ. ಇದನ್ನು ದ್ಯುತಿ ವಿದ್ಯುತ್ ಪರಿಣಾಮ ಎನ್ನುವರು. ಇದರ ಆವಿಷ್ಕಾರಕ ಹೆನ್ರಿಕ್ ಹರ್ಟ್ಜ್. ಆದರೆ ಈ ದ್ಯುತಿ ವಿದ್ಯುತ್ ಪರಿಣಾಮಕ್ಕೆ ಒಂದು ಸಿದ್ದಾಂತವನ್ನು ರಚಿಸಿದವನು ಮ್ಯಾಕ್ಸ್ ಫ್ಲಾಂಕ್.
ಈ ದ್ಯುತಿ ವಿದ್ಯುತ್ ಪರಿಣಾಮವನ್ನು ಸ್ವಯಂಚಾಲಿತ ಬೀದಿ ದೀಪಗಳಲ್ಲಿ, ಎಣಿಕೆ ಯಂತ್ರಗಳಲ್ಲಿ, ಸಿನೆಮಾಟೊಗ್ರಫಿಯಲ್ಲಿ,
ಲೇಸರ್ ಗಳಲ್ಲಿ, ಕಳ್ಳತನ ಎಚ್ಚರಿಕೆ ಗಂಟೆಗಳಲ್ಲಿ
ಇನ್ನೂ ಮುಂತಾದ ಸ್ಥಳಗಳಲ್ಲಿ ಬಳಸುತ್ತಾರೆ.
ಲೇಸರ್
ಲೇಸರ್ ನ ವಿಸ್ತಾರ ರೂಪ ಲೈಟ್ ಆಂಪ್ಲಿಫಿಕೇಷನ್ ಬೈ ಸಿಮ್ಯುಲೇಟೆಡ್ ಎಮಿಷನ್ ಆಫ್ ರೇಡಿಯೇಷನ್, ಲೇಸರ್ ಎಂಬುದು ಒಂದೇ ಬಣ್ಣದ ಬೆಳಕಿನ ಪುಂಜವಾಗಿದೆ. ಇದನ್ನು ಕಂಡುಹಿಡಿದವನು ಟಿ ಎಚ್ ಮೈಮನ್.
ಲೋಹವನ್ನು ಬೆಸುಗೆ ಹಾಕಲು ಅಥವಾ ಕತ್ತರಿಸಲು, ಕಣ್ಣಿನ ಮತ್ತು ಇತರ ಶಸ್ತ್ರಚಿಕಿತ್ಸೆಗಳಲ್ಲಿ, ವಾತಾವರಣದಲ್ಲಿ
ಮಲೀನಕಾರಕಗಳನ್ನು ಅಳೆಯಲು, ಆಕಾಶಕಾಯಗಳ ದೂರವನ್ನು ಪತ್ತೆಹಚ್ಚಲು
ಹಾಲೋಗ್ರಪಿಯಲ್ಲಿ ಇನ್ನೂ ಮುಂತಾದ ಕೆಲಸಗಳಿಗೆ ಲೇಸರ್ ಅನ್ನು ಬಳಸುವರು.



















ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ