ಕರ್ನಾಟಕ ಏಕೀಕರಣ

ಕರ್ನಾಟಕ ಏಕೀಕರಣ

ಭಾರತ ಸ್ವಾತಂತ್ರ್ಯವಾದಾಗ ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಆಗಿನ್ನೂ ಕರ್ನಾಟಕ ಏಕೀಕರಣಗೊಂಡಿರಲಿಲ್ಲ. ಏಕೀಕರಣದ ಕಲ್ಪನೆಯನ್ನು ಮೊದಲಿಗೆ ಹಾಕಿಕೊಟ್ಟವರು ಡೆಪ್ಯುಟಿ ಚನ್ನಬಸಪ್ಪನವರು.

1856 ರಲ್ಲಿ ಧಾರವಾಡದಲ್ಲಿ ನಾರ್ಮಲ್ ಸ್ಕೂಲ್ ಪ್ರಾರಂಭವಾಯಿತು. ಇದರ ಉದ್ದೇಶ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಕರುನಾಡನ್ನು ಅಸ್ಥಿತ್ವಕ್ಕೆ ತರುವುದು. ಡೆಪ್ಯುಟಿ ಚೆನ್ನಬಸಪ್ಪನವರು ಇದರ ಮೊದಲ ಪ್ರಾಂಶುಪಾಲರಾಗಿದ್ದರು.

ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮತ್ತೋರ್ವ ಮಹನೀಯರು ಆಲೂರು ವೆಂಕಟರಾಯರು. ಕರ್ನಾಟಕದ ಇತಿಹಾಸವನ್ನು ಕನ್ನಡಿಗರ ಎದುರಿಗೆ ತಂದು ಕನ್ನಡ ಭಾಷೆ, ಸಂಸ್ಕøತಿ, ಜನಾಂಗಗಳನ್ನು ಒಳಗೊಂಡ ನೆಲದ ಏಕೀಕರಣದ ಮಹತ್ವವನ್ನು ತಿಳಿಸಿಕೊಡಲು 1910 ರಲ್ಲಿ ಕರ್ನಾಟಕ ಗತವೈಭವ ಎಂಬ ಕೃತಿಯನ್ನು ರಚಿಸಿದರು.

ಏಕೀಕರಣಕ್ಕೂ ಮುನ್ನ ಇದ್ದ ಮೈಸೂರು ರಾಜ್ಯ ಮತ್ತು ಇತರ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳು

ಮೈಸೂರು ಸಂಸ್ಥಾನ : ಬೆಂಗಳೂರು, ಚಿತ್ರದುರ್ಗ, ತುಮಕೂರು, ಮೈಸೂರು, ಕೋಲಾರ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಡ್ಯ

ಹೈದ್ರಾಬಾದ್ ಸಂಸ್ಥಾನ : ಬೀದರ್, ಕಲುಬುರ್ಗಿ, ರಾಯಚೂರು

ಮುಂಬೈ ಪ್ರಾಂತ್ಯ : ಧಾರವಾಡ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ

ಮದ್ರಾಸ್ ಪ್ರಾಂತ್ಯ : ನೀಲಗಿರಿ, ದಕ್ಷಿಣ ಕನ್ನಡ, ಬಳ್ಳಾರಿ

ಕೊಡಗು : ಬ್ರಿಟೀಷ್ ಚೀಫ್ ಕಮಿಷನರ್

ಕೊಲ್ಲಾಪುರ ಪ್ರಾಂತ್ಯ : ರಾಯಭಾಗ, ತೋರಣಗಲ್ಲು

ಮೀರಜ್ : ಲಕ್ಷ್ಮೇಶ್ವರ

ಪ್ರಮುಖ ಸಂಘ ಸಂಸ್ಥೆಗಳು

1887 ರಲ್ಲಿ ಕೆ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಕರ್ನಾಟಕ ಭಾಷೋಜಿನಿ ಸಭಾ ಸ್ಥಾಪನೆ

ಕರ್ನಾಟಕ ವಿದ್ಯಾವರ್ಧಕ ಸಂಘ

1890 ಜುಲೈ 20 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ರಾ.ಹ ದೇಶಪಾಂಡೆಯವರು ಪ್ರಾರಂಭಿಸಿದರು. ಶ್ಯಾಮರಾವ್ ಕೈಕಿಣಿ ಅವರು ಇದರ ಮೊದಲ ಅಧ್ಯಕ್ಷರಾಗಿದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಸದಸ್ಯರಾಗಿದ್ದ ಆಲೂರು ವೆಂಕಟರಾಯರು 1906 ರಲ್ಲಿ ವಾಗ್ಭೂಷಣ ಎಂಬ ಮಾಸಪತ್ರಿಕೆಯನ್ನು ಹೊರಡಿಸಿದರು.

ಈ ಸಂಘವು 1907 ಜೂನ್ 2 ಮತ್ತು 3 ರಂದು ಮೊದಲ ಗ್ರಂಥಕರ್ತರ ಸಮ್ಮೇಳನವನ್ನು ನಡೆಸಿತು. ಈ ಸಮ್ಮೇಳನದಲ್ಲಿ ಕರ್ನಾಟಕ ಪುಸ್ತಕಮಾಲೆ ಎಂಬ ಗ್ರಂಥವನ್ನು ಹೊರ ತರಲಾಯಿತು.

1939 ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಯಿತು. ಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ನಡೆಯಿತು. ಕಡೆಂಗೊಡ್ಲು ಶಂಕರಭಟ್ಟರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು

1915 ರಲ್ಲಿ ಹಾಸನದಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತಿಗಳ ಸಭೆ ನಡೆದು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಸರ್.ಎಂ ವಿಶ್ವೇಶ್ವರಯ್ಯ ಅವರು 1915 ಮೆ 15 ರಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಸಮ್ಮೇಳನ ನಡೆಯಿತು. ಎಚ್.ವಿ ನಂಜುಂಡಯ್ಯ  ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನುಡಿ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿತು.

1916 ರಲ್ಲಿ ಧಾರವಾಡದಲ್ಲಿ ಕರ್ನಾಟಕ ಸಭಾ ಸ್ಥಾಪನೆಯಾಯಿತು

1918 ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆಯಾಯಿತು. ದಿವಾನ್ ವಿ.ಪಿ ಮಾಧವರಾವ್ ಅವರು 1920 ರಲ್ಲಿ ಧಾರವಾಡದಲ್ಲಿ ನಡೆದ ಈ ಪರಿಷತ್ತಿನ ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.

1920 ರಲ್ಲಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷ ಸ್ಥಾಪನೆಯಾಯಿತು. ಕರ್ನಾಟಕ ಕೇಸರಿ ಎಂದೇ ಖ್ಯಾತರಾಗಿದ್ದ ಗಂಗಾಧರರಾವ್ ದೇಶಪಾಂಡೆ ಅವರು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು.

ಕರ್ನಾಟಕ ಏಕೀಕರಣ ಸಭಾ

1924 ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕದ ಮೊದಲ ಏಕೀಕರಣ ಅಧಿವೇಶನ ನಡೆಯಿತು. ಸಿದ್ದಪ್ಪ ಕಂಬಳಿಯವರು ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಈ ಸಮ್ಮೇಳನದಲ್ಲಿ ಹುಯಿಲಗೊಳ ನಾರಾಯಣರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಹಾಡಿದರು.

ಕರ್ನಾಟಕ ಏಕೀಕರಣ ಸಭೆಯ ಅಧಿವೇಶನಗಳು

1926 - ಬಳ್ಳಾರಿ ಚಿಕ್ಕೋಡಿ

1928ಧಾರವಾಡ - ಫ.ಗು ಹಳಕಟ್ಟಿ

1931 - ಹುಕ್ಕೇರಿ (ಬೆಳಗಾವಿ) - ಪಟ್ಟಾಭಿ ಸೀತಾರಾಮಯ್ಯ

1933ಧಾರವಾಡ - ಬಿಳವಿ

1936 - ಬೆಳಗಾವಿ - ರಾಮರಾವ್

1940 - ಸೊಲ್ಲಾಪುರ (ಬೆಳಗಾವಿ) ಡಾ ನಾಗನಗೌಡ

1944ಧಾರವಾಡ - ಹೆಗಡೆ

1946ಮುಂಬೈ ಬಾಲಾಸಾಹೇಬ್ ಗಂಗಾಧರ ಕೇರ್

1947ಕಾಸರಗೋಡು ಆರ್ ಆರ್ ದಿವಾಕರ್

1924 ರಲ್ಲಿ ನಾ.ಸು ಹರ್ಡೀಕರ್ ಅವರು ಹಿಂದೂಸ್ತಾನ ಸೇವಾದಳವನ್ನು ಸ್ಥಾಪಿಸಿದರು.

1924 ರಲ್ಲಿ ಬೆಳಗಾವಿಯಲ್ಲಿ ಅಖಿಲ ಬಾರತ ಕಾಂಗ್ರೆಸ್ ಅಧಿವೇಶನ ನಡೆದಾಗ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದರು. ಈ ಸಮಯದಲ್ಲಿ ಕನಾಟಕ ಕೈಪಿಡಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

1946 ರಲ್ಲಿ ಮುಂಬೈನಲ್ಲಿ ಬಿ ಜಿ ಖೇರ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಭಾದ ಸಮ್ಮೇಳನ ನಡೆದಾಗ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾಷಾವಾರು ಪ್ರಾಂತ್ಯಗಳ ರಚನೆಯೇ ಸ್ವತಂತ್ರ ಭಾರತದ ಮೊದಲ ಕರ್ತವ್ಯ ಎಂದು ಘೋಷಿಸಿದರು.

1947 ರಲ್ಲಿ ಎಸ್ ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಮಹಾಸಮಿತಿ ರಚನೆಯಾಯಿತು.

1948 ಜನವರಿ 25 ರಂದು ಗಾಂಧೀಜಿ ಸಹ ಕರ್ನಾಟಕದ ಏಕೀಕರಣಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಆಯೋಗಗಳು

ದಕ್ಸಿಣ ಭಾರತದಲ್ಲಿ ಭಾಷಾಧಾರಿತ ಪ್ರಾಂತ್ಯಗಳಾಗಿ ವಿಂಗಡಿಸಬೇಕೆಂಬ ಕೂಗು ಎಲ್ಲೆಡೆಯಿಂದಲೂ ಕೇಳಿಬಂದಾಗ ಸರ್ಕಾರವು ಈ ನಿಟ್ಟಿನಲ್ಲಿ ಅನೇಕ ಸಮಿತಿಗಳನ್ನು ರಚಿಸಿತು

ಧಾರ್ ಆಯೋಗ (1948)

1948 ರಲ್ಲಿ ಬಂದ ಧಾರ್ ಆಯೋಗ ಮೊದಲ ರಾಜ್ಯ ಪುನರ್ವಿಂಗಡಣಾ ಆಯೋಗವಾಗಿದೆ. ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಸುಮನ್ ಕುಮಾರ್ ಧಾರ್ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಡಾ. ಪನ್ನಾಲಾಲ್ ಮತ್ತು ಜಗತ್ ನಾರಾಯಣ ಲಾಲ್ ಸದಸ್ಯರಾಗಿದ್ದರು. ಬಿ ಸಿ ಬೆನರ್ಜಿ ಕಾರ್ಯದರ್ಶಿಯಾಗಿದ್ದರು. ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ವಿಂಗಡಣೆ ಮಾಡುವುದು ಸರಿಯಲ್ಲವೆಂದು ಬದಲಾಗಿ ಆಡಳಿತಕ್ಕನುಗುಣವಾಗಿ ವಿಭಾಗಿಸಬೇಕೆಂದು ಈ ಸಮಿತಿಯು ವರದಿ ನೀಡಿತು. ಆದರೆ ಈ ಸಮಿತಿ ವಿಫಲವಾಯಿತು.

ಜೆ.ವಿ.ಪಿ ಸಮಿತಿ (1948)

1948 ರಲ್ಲಿ ಬಂದ ಜೆ.ವಿ.ಪಿ ಸಮಿತಿ ಜವಾಹರ ಲಾಲ್ ನೆಹರು, ವಲ್ಲಭಬಾಯಿ ಪಟೆಲ್, ಪಟ್ಟಾಭಿ ಸೀತಾರಾಮಯ್ಯ ಇವರನ್ನು ಒಳಗೊಂಡಿತ್ತು. ಈ ಸಮಿತಿಯು ಸಹ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ವಿಂಗಡಣೆ ಮಾಡುವುದು ಉಚಿತವೆಲ್ಲವೆಂದು ಆಡಳಿತಕ್ಕನುಗುಣವಾಗಿಯೇ ವಿಭಾಗ ಮಾಡಬೇಕೆಂದು ತೀರ್ಮಾನಿಸಿ ವರದಿ ನೀಡಿತು.

ಈ ವರದಿಯು ಬಳ್ಳಾರಿಯನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂದು ಮತ್ತು ಕರ್ನೂಲನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ತನ್ನ ವರದಿಯಲ್ಲಿ ತಿಳಿಸಿತು. ಆದರೆ ಈ ಆಯೋಗವು ಸಹ ವಿಫಲವಾಯಿತು.

ಫಜಲ್ ಅಲಿ ಆಯೋಗ (1956)

ಆಂಧ್ರಪ್ರದೇಶದಲ್ಲಿ ಪೊಟ್ಟಿ ಶ್ರೀರಾಮುಲು ಎಂಬುವವರು ತೆಲುಗು ಭಾಷೆಯ ಆಧಾರಿತ ರಾಷ್ಟ್ರಕ್ಕಾಗಿ 58 ದಿನಗಳ ಆಮರಣ ಉಪವಾಸ ಸತ್ಯಾಗ್ರಹ ನಡೆಸಿ ಮರಣ ಹೊಂದಿದರು. ಈ ಘಟನೆಯಿಂದ ಆಂಧ್ರಪ್ರದೇಶದಾದ್ಯಂತ ಪ್ರತಿಭಟನೆಗಳಾದವು. ಕೊನೆಗೆ ಕೆಂದ್ರ ಸರ್ಕಾರವು 1952 ಡಿಸೆಂಬರ್ 19 ರಂದು ಆಂಧ್ರಪ್ರದೇಶ ರಚನೆಗೆ ಒಪ್ಪಿಗೆ ನೀಡಿತು. 1953 ಆಗಸ್ಟ್ ತಿಂಗಳಿನಲ್ಲಿ ಆಂಧ್ರಪ್ರದೇಶ ರಾಜ್ಯ ರಚನೆಯ ಮಸೂದೆ ಅಂಗೀಕಾರವಾಯಿತು. ಈ ಮೂಲಕ ಆಂಧ್ರಪ್ರದೇಶ ಭಾಷಾಧಾರಿತವಾಗಿ ಅಸ್ತಿತ್ವಕ್ಕೆ ಬಂದ ಮೊದಲ ರಾಜ್ಯವಾಯಿತು.

1953 ಅಕ್ಟೋಬರ್ 2 ರಂದು ಬಳ್ಳಾರಿ ಮೈಸೂರು ಪ್ರಾಂತ್ಯದಲ್ಲಿ ವಿಲೀನವಾಯಿತು. ಇದು ಕರ್ನಾಟಕ ಏಕೀಕರಣದ ಮೊದಲ ಹಂತ.

1953 ಡಿಸೆಂಬರ್ 29 ರಂದು ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಇದರಲ್ಲಿ ಕೆ.ಎಂ ಫಣಿಕ್ಕರ್ ಮತ್ತು ಎಚ್.ಎನ್ ಕುಂಜ್ರು ಸದಸ್ಯರಾಗಿದ್ದರು. ಈ ಆಯೋಗವು 1955 ಅಕ್ಟೋಬರ್ 10 ರಂದು ತನ್ನ ವರದಿಯನ್ನು ಸಲ್ಲಿಸಿತು.

1956 ಆಗಸ್ಟ್ 31 ರಂದು ಲೋಕಸಭೆಯಲ್ಲಿ ಮೈಸೂರು ರಾಜ್ಯದ ಮಸೂದೆ ಜಾರಿಗೆ ಬಂದಿತು.

ಫಜಲ್ ಅಲಿ ಆಯೋಗದ ಶಿಫಾರಸ್ಸಿನ ಅನ್ವಯ ಭಾರತದಲ್ಲಿ ಭಾಷಾವಾರು ರಾಜ್ಯಗಳನ್ನು ವಿಂಗಡಿಸಲಾಯಿತು. 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು.

ಮೈಸೂರು ರಾಜ್ಯ

1956 ನವೆಂಬರ್ 1 ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಎಸ್ ನಿಜಲಿಂಗಪ್ಪ ಅಧಿಕಾರ ವಹಿಸಿಕೊಂಡಿದ್ದರು. ಜಯಚಾಮರಾಜ ಒಡೆಯರ್ ಅವರು ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು.

1973 ನವೆಂಬರ್ 1 ರಂದು ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಆ ಸಮಯದಲ್ಲಿ ದೇವರಾಜ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು ಮತ್ತು ಮೋಹನಲಾಲ್ ಸುಖಾಡಿಯಾ ಅವರು ರಾಜ್ಯಪಾಲರಾಗಿದ್ದರು.

ಕಾಮೆಂಟ್‌ಗಳು