ಮೈಸೂರು ಸಂಸ್ಥಾನ - ಪ್ರಮುಖ ದಿವಾನರು

 ಮೈಸೂರು ಸಂಸ್ಥಾನ - ಪ್ರಮುಖ ದಿವಾನರು (1746-1812)

ದಿವಾನ್ ಪೂರ್ಣಯ್ಯ

ಮೈಸೂರಿನ ಪ್ರಥಮ ದಿವಾನರಾಗಿ ಟೀಪೂ ಮತ್ತು ಹೈದರ್ ಅಲಿ ಕಾಲದಲ್ಲಿ ಸೇವೆ ಸಲ್ಲಿಸಿದವರು.

ಮೈಸೂರು ಸಂಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಕಂದಾಚಾರ ಎನ್ನುವ ಪಡೆಯನ್ನು ಸ್ಥಾಪಿಸಿದರು.

ಪ್ರತ್ಯೇಕ ನ್ಯಾಯಾಂಗ ಇಲಾಖೆಯನ್ನು ಸ್ಥಾಪಿಸಿದರು.

1801 ರಲ್ಲಿ ಬೆಂಗಳೂರಿನಲ್ಲಿ ಸಂಪಂಗಿ ಕೆರೆಯನ್ನು ನಿರ್ಮಿಸಿದರು.

1808 ರಲ್ಲಿ ಮೊದಲ ಬಾರಿಗೆ ಮೈಸೂರು ರಾಜ್ಯದ ನೀಲ ನಕ್ಷೆಯನ್ನು ತಯಾರಿಸಲಾಯಿತು.

ಸಿ ರಂಗಾಚಾರ್ಲು(1881-1883)

ರಾಜ್ಯ ಪುನರ್ದಾನದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಧಿಕಾರ ವಹಿಸಿಕೊಂಡ ನಂತರ ಸೇವೆಗೆ ಸೇರಿದ ಮೊದಲ ದಿವಾನರು

1881 ಆಗಸ್ಟ್ 25 ರಂದು ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದರು.  1881 ಅಕ್ಟೋಬರ್ 7 ರಂದು ಮೊದಲ ಪ್ರಜಾಪ್ರತಿನಿಧಿ ಸಭೆ ನಡೆಯಿತು.

ಮೈಸೂರಿನಲ್ಲಿ ಮಹಾರಾಣಿ ಕಾಲೇಜ್ ಆರಂಭಿಸಿದರು.

1881 ರಲ್ಲಿ ಬ್ರಿಟನ್ನಿನ ಟ್ರೈಲರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೋಲಾರದಲ್ಲಿ ಚಿನ್ನ ತೆಗೆಯುವ ಗಣಿಗಾರಿಕೆಯನ್ನು ಆರಂಭಿಸಿದರು.

1882 ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ರೈಲು ಮಾರ್ಗ ನಿರ್ಮಾಣ ಮಾಡಿಸಿದರು.

ಇವರ ಸ್ಮರಣೆಗಾಗಿ ಮೈಸೂರಿನಲ್ಲಿ ರಂಗಾಚಾರ್ಲು ಮೆಮೋರಿಯಲ್ ಹಾಲ್ ಸ್ಥಾಪಿಸಲಾಗಿದೆ.

ಕೆ ಶೇಷಾದ್ರಿ ಅಯ್ಯರ್ (1883-1890)

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ವೇದಾವತಿ ನದಿಗೆ ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಎಂಬ ಅಣೆಕಟ್ಟು ಕಟ್ಟಿಸಿದರು

1886ರಲ್ಲಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ಕೃಷಿ ಮೇಳ ಏರ್ಪಡಿಸಿದರು

ರಾಜ್ಯದಲ್ಲಿ ಭೂ ವಿಜ್ಞಾನ ಸಮೀಕ್ಷೆಯನ್ನು ನಡೆಸಲು ಇಲಾಖೆಯನ್ನು ತೆರೆದರು.

1883 ರಲ್ಲಿ ಮೈಸೂರು ಸಿವಿಲ್ ನ್ಯಾಯಾಲಯವನ್ನು ಸ್ಥಾಪಿಸಲಾಯಿತು.

1884 ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ತಾಲ್ಲೂಕು ಬೋರ್ಡುಗಳನ್ನು ಸ್ಥಾಪಿಸಲಾಯಿತು

ಜೀವ ವಿಮಾ ಯೋಜನೆಯನ್ನು ಸಾರ್ವಜನಿಕ ಸೇವೆಗಾಗಿ ವಿಸ್ತರಿಸಿದರು

ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ತಂದರು

1885 ರಲ್ಲಿ ಬಿ.ಎಲ್ ರೈಸ್ ಅವರ ನೇತೃತ್ವದಲ್ಲಿ ಪುರಾತತ್ವ ಇಲಾಖೆ ಆರಂಭಿಸಿದರು

1890 ರಲ್ಲಿ ಮೈಸೂರಿನಲ್ಲಿ ಓರಿಯೆಂಟಲ್ ಲೈಬ್ರರಿ ಆರಂಭಿಸಿದರು

1891 ರಲ್ಲಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಜಾರಿಗೆ ತಂದರು.

ಇವರ ಕೊಡುಗೆ ಗುರುತಿಸಿ ಬ್ರಿಟಿಷ್ ಸರ್ಕಾರವು 1893 ರಲ್ಲಿ K.C.S.I (Knight  Commander) ಬಿರುದನ್ನು ನೀಡಿ ಗೌರವಿಸಿತು.

ಹತ್ತನೆ ಜಯಚಾಮರಾಜೇಂದ್ರ ಒಡೆಯರು ಶೇಷಾದ್ರಿ ಅಯ್ಯರ್ ರಿಗೆ ರಾಜ್ಯದುರಂಧರ ಎಂಬ ಬಿರುದನ್ನು ನೀಡಿದರು

1887 ರಲ್ಲಿ ಬೆಂಗಳೂರಿನಲ್ಲಿ ವಿಕ್ಟೊರಿಯ ಆಸ್ಪತ್ರೆ ಮತ್ತು ಭಾಷೋಜ್ಜಿವಿನಿ ಸಂಸ್ಥೆಯನ್ನುಸ್ಥಾಪನೆ ಮಾಡಲಾಯಿತು

ಬೆಂಗಳೂರಿನಲ್ಲಿ ಆರ್ಯ ಬಾಲಿಕ ಮತ್ತು ತುಮಕೂರಿನಲ್ಲಿ ದಿ ಎಂಪ್ರೆಸ್ ಗರ್ಲ್ಸ್ ಹೈಸ್ಕೊಲ್ ಶಾಲೆಗಳನ್ನು ಸ್ಥಾಪನೆ ಮಾಡಿದರು.

1888 ಭೂ ಕಂದಾಯ ಸಂಹಿತೆಯನ್ನು ಜಾರಿ ಮಾಡಲಾಯಿತು.

1894 ರಲ್ಲಿ ಬ್ಯುಸ್ ಪ್ರೋಟ್ ನೇತೃತ್ವದಲ್ಲಿ ಭೂಗರ್ಭ ಸರ್ವೇಕ್ಷಣೆ ಇಲಾಖೆ ಮತ್ತು ಕೃಷಿ ಬ್ಯಾಂಕನ್ನು ಸ್ಥಾಪಿಸಿದರು.

1894 ರಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದರು.

ಭೂ ವ್ಯಾಜ್ಯಗಳಿಗೆ ಲ್ಯಾಂಡ್ ರೆವಿನ್ಯೂ ಟ್ರಿಬ್ಯುನಲ್ ನ್ಯಾಯಾಲಯವನ್ನು ಸ್ಥಾಪನೆ ಮಾಡಿದರು.

1900 ರಲ್ಲಿ ಮಂಡ್ಯದ ಶಿವನಸಮುದ್ರಲ್ಲಿ ಜಲವಿದ್ಯುತ್ ಕೇಂದ್ರ ಸ್ಥಾಪನೆ ಮಾಡಿದರು. ಇಲ್ಲಿಂದಲೇ KGF ಗಣಿಗೆ 1902 ವಿದ್ಯುತ್ ಸಂಪರ್ಕ ನೀಡಲಾಯಿತು. ಇದು ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ಪಡೆದ ಸ್ಥಳವಾಗಿದೆ.

ವಿ.ಪಿ ಮಾಧವ ರಾವ್ (1905- 1909)

1905 ರಲ್ಲಿ ಸೆಂಟ್ರಲ್ ಕೋ ಅಪರೇಟಿವ್ ಬ್ಯಾಂಕ್ ಸ್ಥಾಪನೆ ಮಾಡಲಾಯಿತು.

1907 ರಲ್ಲಿ ಲೇಜಿಸ್ಲೇಟಿವ್ ಕೌನ್ಸಿಲನ್ನು ಸ್ಥಾಪನೆ ಮಾಡಿದರು.

ಬ್ರಿಟಿಷ್ ಸರ್ಕಾರವು ಖೈಸರ್ ಎ ಹಿಂದ್ ಎಂಬ ಬಿರುದು ನೀಡಿ ಗೌರವಿಸಿತು.

ಟಿ ಆನಂದರಾವ್ (1909-1912)

ಇವರ ಆಡಳಿತಾವಧಿಯಲ್ಲಿ 1910 ಜೂನ್ 10 ರಂದು ಮೊದಲ ಎಕನಾಮಿಕ್ ಕಾನ್ಫರೆನ್ಸ್ (ಆರ್ಥಿಕ ಸಮಾವೇಶ) ನಡೆಸಲಾಯಿತು.

1911 ರಲ್ಲಿ ಮುಖ್ಯ ಇಂಜಿನಿಯರ್ ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ಕನ್ನಂಬಾಡಿ ಆಣೆಕಟ್ಟು ಕಟ್ಟಲು ಕಾರ್ಯಾರಂಭ ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಇವರಿಗೆ ಪ್ರಧಾನ ಶಿರೋಮಣಿ ಎಂಬ ಬಿರುದು ನೀಡಿ ಗೌರವಿಸಿದರು.

ಸರ್.ಎಂ ವಿಶ್ವೇಶ್ವರಯ್ಯ (1912-1918)

ಇವರು ಜನಿಸಿದ ದಿನವಾದ ಸೆಪ್ಟೆಂಬರ್ 15 ಅನ್ನು ರಾಷ್ಟ್ರೀಯ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ. ಇವರನ್ನು ಆಧುನಿಕ ಮೈಸೂರಿನ ಶಿಲ್ಪಿ ಎಂದು ಸಹ ಕರೆಯಲಾಗುತ್ತದೆ.

ಇಂಜಿನಿಯರ್ ಮತ್ತು ದಿವಾನರೂ ಆಗಿದ್ದ ಇವರನ್ನು ಭಾರತದ ಯೋಜನೆಗಳ ಪಿತಾಮಹಾ ಎಂದು ಕರೆಯುತ್ತಾರೆ.

ಬ್ರಿಟಿಷ್ ಸರ್ಕಾರವು ಇವರಿಗೆ The night commander ಎಂಬ ಬಿರುದು ನೀಡಿ ಗೌರವಿಸಿತು.

1913 ರಲ್ಲಿ ಹೆಬ್ಬಾಳದಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಮೈಸೂರು ಬ್ಯಾಂಕನ್ನು ಸ್ಥಾಪನೆ ಮಾಡಿದರು.

1916 ರಲ್ಲಿ ಸಹಕಾರಿ ಇಲಾಖೆ ಮತ್ತು ಮೈಸೂರು ಛೇ0ಬರ್ಸ್ ಆಫ್ ಕಾಮರ್ಸ್ ಅನ್ನು ಸ್ಥಾಪಿಸಿದರು

1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

ಕೈಗಾರಿಕಿಕರಣ ಇಲ್ಲವೇ ವಿನಾಶ ಎಂಬುದು ಇವರ ಪ್ರಸಿದ್ಧ ಘೋಷವಾಕ್ಯ

1916 ರಲ್ಲಿ ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆ, ಭದ್ರಾವತಿಯಲ್ಲಿ ಕಬ್ಬಿಣ್ಣ ಮತ್ತು ಉಕ್ಕಿನ ಕಾರ್ಖಾನೆ ಮತ್ತು 1917 ರಲ್ಲಿ ಚೆನ್ನಪಟ್ಟಣದಲ್ಲಿ ರೇಷ್ಮೆ ಬೆಳೆ ಸಂಶೋಧನಾ ಕೇಂದ್ರಗಳನ್ನು ಆರಂಭಿಸಿದರು. ಮತ್ತು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜ್ ಮತ್ತು ವೈದ್ಯಕೀಯ ಶಾಲೆಗಳನ್ನು ಸ್ಥಾಪನೆ ಮಾಡಿದರು.

1917 ಪ್ರಜಾಮಿತ್ರ ಮಂಡಳಿಯನ್ನು ಸ್ಥಾಪಿಸಿದರು.

ಇವರ ಕಾಲದಲ್ಲಿ 1919 ರಲ್ಲಿ ಹಿಂದುಳಿದ ವರ್ಗಗಳ ಸುಧಾರಣೆಗಾಗಿ ಮಿಲ್ಲರ್ ಸಮಿತಿಯನ್ನು ಸ್ಥಾಪಿಸಲಾಯಿತು.

ಕೃತಿಗಳು

The economic development of india

planned economy for india

Memories of my working life

ದಿವಾನ್ ಕಾಂತರಾಜ್ ಅರಸ್ (1918-1922)

ಹಿಂದುಳಿದ ವರ್ಗಕ್ಕೆ ಸೇರಿದ ಪ್ರಥಮ ಬ್ರಾಹ್ಮಣೇತರ ದಿವಾನರು.

ಮಿಲ್ಲರ್ ಸಮಿತಿಯ ಶಿಫಾರಿಸ್ಸಿನಲ್ಲಿ ಸರ್ಕಾರಿ ನೌಕರಿಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಘೋಷಸಿದರು

ಇವರ ಕಾಲದಲ್ಲಿ ಅಪೆಕ್ಸ್ ಬ್ಯಾಂಕ್ ಸ್ಥಾಪನೆಯಾಯಿತು.

ಮಿರ್ಜಾ ಇಸ್ಮಾಯಿಲ್ (1926-1941)

ಅಮೀನ್-ಉಲ್-ಮುಲ್ಕ್ ಎಂಬುದು ಇವರಿಗಿದ್ದ ಬಿರುದು

ಜೋಗ ಮತ್ತು ಶಿ0ಷಾಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಾವರಗಳನ್ನು ನಿರ್ಮಿಸಿದರು

1933 ರಲ್ಲಿ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, 1935 ರಲ್ಲಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ, 1937 ರಲ್ಲಿ ಶಿವಮೊಗ್ಗದಲ್ಲಿ ಬೆಂಕಿಪೊಟ್ಟಣ ಕಾರ್ಖಾನೆ, 1938 ರಲ್ಲಿ ಭದ್ರಾವತಿಯಲ್ಲಿ ಕಾಗದ ಕಾರ್ಖಾನೆ, ಬೆಂಗಳೂರಿನಲ್ಲಿ ಹಿಂದೂಸ್ತಾನ ಏರೋನಾಟಿಕಲ್ ಲಿಮಿಟೆಡ್, 1939 ರಲ್ಲಿ ದಾವಣಗೆರೆಯಲ್ಲಿ ಹತ್ತಿ ಮಿಲ್ ಗಳನ್ನು ಸ್ಥಾಪಿಸಿದರು.

ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಕರ್ನಾಟಕದ ಶಾಲಿಮರ್ ತೋಟವಾದ ಬೃಂದಾವನವನ್ನು ನಿರ್ಮಿಸಿದರು

1940 ರಲ್ಲಿ ಹಿಂದೂಸ್ತಾನ್ ಏರ್ ಕ್ರಾಫ್ಟ್ ಮತ್ತು 1941 ರಲ್ಲಿ ಮೈಸೂರ್ ಕಿರ್ಲೋಸ್ಕರ್ ಮಿಷನ್ ಗಳನ್ನು ಸ್ಥಾಪನೆ ಮಾಡಿದರು.

1927 ರಲ್ಲಿ ವೈಸ್ ರಾಯ್ ಲಾರ್ಡ್ ಇರ್ವಿನ್ ನೆನಪಿಗಾಗಿ KRS ನ ಪ್ರಧಾನ ನಾಲೆಗೆ ಇರ್ವಿನ್ ನಾಲೆ ಎಂದು ಹೆಸರು ಇಡಲಾಯಿತು, ಮಹಾತ್ಮಾ ಗಾಂಧೀ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ನಂದಿ ಬೆಟ್ಟದಲ್ಲಿ ತಂಗುವ ವ್ಯವಸ್ಥೆ ಮಾಡಿದ್ದರು.

ಮೈಸೂರು ಸಂಸ್ಥಾನದ ಪರವಾಗಿ ದುಂಡುಮೇಜಿನ ಪರಿಷತ್ ಅಲ್ಲಿ ಭಾಗವಹಿಸಿದ ದಿವಾನರಾಗಿದ್ದರು

ಬ್ರಿಟಿಷ್ ಸರ್ಕಾರ 1930 ರಲ್ಲಿ ಮಿರ್ಜಾ ಇಸ್ಮಾಯಿಲ್ ರಿಗೆ K.C.I.E (Knight Commander of Indian Empire) ಬಿರುದು ನೀಡಿ ಗೌರವಿಸಿತು.

ಎನ್ ಮಾಧವರಾವ್ (1941-1946)

ಮೈಸೂರಿನಲ್ಲಿ ವಿಧಾನ ಪರಿಷತ್ ಮತ್ತು ಮೈಸೂರು ರೆಪ್ರೆಸೆಂಟೇಟಿವ್  ಅಸೆಂಬ್ಲಿ ಸೇರಿಸಿ ನೂತನ ವಿಧಾನ ಪರಿಷತ್ ಕೌನ್ಸಿಲ್ಲನ್ನು ರಚಿಸಿದರು.

ಇವರ ಅವಧಿಯಲ್ಲಿ ಮೊದಲ ಬಾರಿಗೆ 1941 ಫೆಬ್ರವರಿಯಲ್ಲಿ ಚುನಾವಣೆ ನಡೆಯಿತು.

ಜಯಚಾಮ ಒಡೆಯರು ಮಾಧವರಾಯರಿಗೆ ರಾಜಮಾತ್ರ ಪ್ರವೀಣ ಮತ್ತು ಪ್ರಧಾನ ಶಿರೋಮಣಿ ಎಂಬ ಬಿರುದು ನೀಡಿ ಗೌರವಿಸಿದ್ದರು.

ಸರ್ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ (1946-1947)

ಮೈಸೂರು ಸಂಸ್ಥಾನದ ಕೊನೆಯ ದಿವಾನರಾದ ಇವರು ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ 1946 ರಿಂದ 1947 ರ ವರೆಗೆ ಕಾರ್ಯನಿರ್ವಹಿಸಿದರು.

ಕಾಮೆಂಟ್‌ಗಳು