ಮೈಸೂರು ಒಡೆಯರು

ಮೈಸೂರು ಒಡೆಯರು (ಕ್ರಿ.ಶ 1339-1947)

ಯದುರಾಯ ಮತ್ತು ಕೃಷ್ಣರಾಯರು ಈ ವಂಶದ ಸ್ಥಾಪಕರು. ಮೊದಲು ಶ್ರೀರಂಗಪಟ್ಟಣ ರಾಜಧಾನಿಯಾಗಿತ್ತು ನಂತರ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜಲಾಂಛನ ಗಂಡಭೇರುಂಡ

1ನೇ ರಾಜ ಒಡೆಯರು( 1578-1617)

1ನೇ ರಾಜ ಒಡೆಯರು 1610 ರಲ್ಲಿ ಶ್ರೀರಂಗಪಟ್ಟಣವನ್ನು ಶ್ರೀರಂಗರಾಯ/ತಿರುಮಲರಾಯನಿಂದ ವಶಪಡಿಸಿಕೊಂಡು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತವನ್ನು ಆರಂಭಿಸಿದರು.

ಶ್ರೀರಂಗರಾಯನ ಪತ್ನಿ ಅಲುಮೇಲಮ್ಮ ಮಾಲಂಗಿ ಮಡುವಾಗಲಿ ತಲಕಾಡು ಮರುಳಾಗಲಿ ಮೈಸೂರು ಅರಸರಿಗೆ ಗಂಡು ಮಕ್ಕಳಿಲ್ಲದೆ ಹೋಗಲಿ ಎಂದು ಮೈಸೂರು ಸಂಸ್ಥಾನಕ್ಕೆ ಶಾಪ ನೀಡಿದಳೆಂಬುದು ಪ್ರತೀತಿ.

ರಾಜ ಒಡೆಯರು 1610ರಲ್ಲಿ ಮೈಸೂರಿನ ದಸರಾ ಉತ್ಸವವನ್ನು ಆರಂಭಿಸಿದರು.

6ನೇ ಚಾಮರಾಜ ಒಡೆಯರು( 1617-1637)

ಇವರು ಶ್ರೀರಂಗಪಟ್ಟಣವನ್ನು ತಮ್ಮ ಆಯುಧಗಾರವನ್ನಾಗಿ ನಿರ್ಮಿಸಿದರು. ಷಡ್ ದರ್ಶನ ಸ್ಥಾಪನಾಚಾರ್ಯ ಎಂಬುದು ಇವರಿಗಿದ್ದ ಬಿರುದು. ಶ್ರೀರಂಗಪಟ್ಟಣದ ಹತ್ತಿರ ಕಾವೇರಿ ನದಿಗೆ ಸೇತುವೆ ನಿರ್ಮಿಸಿದರು.

ಚಾಮರಾಜೋಕ್ತಿ ವಿಲಾಸ ಎಂಬುದು ಇವರು ರಚಿಸಿದ ಕೃತಿಯಾಗಿದೆ.

ರಣಧೀರ ಕಂಠೀರವ ನರಸರಾಜ (1638-1659)

ಮೈಸೂರು ಮನೆತನದ ಮೊದಲ ಸ್ವತಂತ್ರ ದೊರೆ ಕಂಠೀರವ ನರಸರಾಜ ಒಡೆಯರು.

1638 ರಲ್ಲಿ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದ ವಿಜಯಪುರದ ರಣದುಲ್ಲಾ ಖಾನನನ್ನು ಸೋಲಿಸಿದರು.

ಕಂಠೀರವ ಪಣ ಎಂಬ ಚಿನ್ನದ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತಂದರು.

ಶ್ರೀರಂಗಪಟ್ಟಣದಲ್ಲಿ ನರಸಿಂಹ ದೇವಾಲಯ ನಿರ್ಮಿಸಿದರು ಮತ್ತು ಬಂಗಾರದೊಡ್ಡಿ ಕಾಲುವೆ ನಿರ್ಮಾಣ ಮಾಡಿದರು.

ದೊಡ್ಡ ದೇವರಾಜ ಒಡೆಯರು (1659-1672)

ಪರರಾಯ ಭಯಂಕರ, ಹಿಂಧೂರಾಯ ಸುರತ್ರಾಣ ಎಂಬುವು ಇವರಿಗಿದ್ದ ಬಿರುದುಗಳು, ಶ್ರೀರಂಗಪಟ್ಟಣದ ಮೇಲೆ ಮುತ್ತಿಗೆ ಇಟ್ಟು ಕೆಳದಿ ಶಿವಪ್ಪ ನಾಯಕನ ದಂಗೆ ಎದುರಿಸಿದರು.

ಇವರ ಕಾಲದಲ್ಲಿ ಇವರ ಆಸ್ಥಾನಕ್ಕೆ ಫ್ಲಾಂಕನ್ ಎಂಬ ಫ್ರೆಂಚ್ ಪ್ರತಿನಿಧಿ ಭೇಟಿ ನೀಡಿದನು. ಈ ಮೂಲಕ ಮೊದಲ ಬಾರಿಗೆ ಮೈಸೂರಿಗೆ ಯುರೋಪಿಯನ್ನರ ಆಗಮನವಾಯಿತು.

ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲು ಹಾಕಿಸಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ಇವರು ದೇವರಾಜಪುರ, ಅಗ್ರಹಾರ ಮತ್ತು ದೇವಾಂಬುಧಿ ಕೆರೆಗಳನ್ನು ಕಟ್ಟಿಸಿದರು.

ಚಿಕ್ಕ ದೇವರಾಜ ಒಡೆಯರು (1672-1704)

1677 ರಲ್ಲಿ ಶಿವಾಜಿಯ ದಾಳಿಯನ್ನು ಹಿಮ್ಮೆಟ್ಟಿಸಿದನೆಂದು ಕವಿ ತಿರುಮಲಾರ್ಯ ಬರೆದಿರುವ ಅಪ್ರತಿಮ ವೀರಚರಿತ ಎಂಬ ಕೃತಿಯಿಂದ ತಿಳಿದುಬರುತ್ತದೆ.

1687 ರಲ್ಲಿ ಮೊಘಲ್ ಸರ್ದಾರ್ ಖಾಸಿಂ ಖಾನ್ ನಿಂದ 3 ಲಕ್ಷ ರೂ. ಗೆ ಬೆಂಗಳೂರು ಖರೀದಿಸಿದರು.

ಇವರು 1699 ರಲ್ಲಿ ಮೊಘಲ್  ಸುಲ್ತಾನ್ ಔರಂಗಜೇಬನ ಆಸ್ಥಾನಕ್ಕೆ ಮಂತ್ರಿ ನಿಂಗಣ್ಣಯ್ಯರನ್ನು ರಾಯಭಾರಿಯಾಗಿ ಕಳುಹಿಸಿದರು. ಔರಂಗಜೇಬಿನಿಂದ ರಾಜ ಜಗದೇವ ಎಂಬ ಬಿರುದು ಪಡೆದರು.

ಆಡಳಿತದಲ್ಲಿ ಅನುಕೂಲಕ್ಕಾಗಿ ಅಠಾರ ಕಚೇರಿ ಮತ್ತು ಬಾರಾ ಬಲೂತಿ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದರು.

ಅಂಚೆ ಮತ್ತು ಪೊಲೀಸ್ ಇಲಾಖೆಗಳನ್ನು ಪುನರ್ ಸಂಘಟನೆ ಮಾಡಿದರು. ಅಂಚೆ ಶಬ್ದವನ್ನು ಪರಿಚಯಿಸಿದರು.

ನವಕೋಟಿ ನಾರಾಯಣ, ಮಾಹಾರಾಷ್ಟ ಭೂಪಾಲ  ಜಾಲರಿಪು, ಕರ್ನಾಟಕ ಚಕ್ರವರ್ತಿ, ತೆಂಕಣ ರಾಜ, ಅಪ್ರತಿಮ ವೀರ ಎಂಬುವು ಇವರಿಗಿದ್ದ ಬಿರುದುಗಳು.

ಇವರು ಸ್ವತಃ ಚಿಕ್ಕದೇವರಾಯ ಭಿನ್ನಪಂ, ಗೀತಗೋಪಾಲ ಎಂಬ ಕೃತಿಗಳನ್ನು ರಚಿಸಿದರು.

ಲಕ್ಷ್ಮೀಶಜೈಮಿನಿ ಭಾರತ ಮತ್ತು ಕನ್ನಡದ ಮೊದಲ ನಾಟಕ ಎನಿಸಿದ ಸಿಂಗಾರಾರ್ಯಮಿತ್ರಾವಿಂದ ಗೋವಿಂದ ಕೃತಿಗಳು ಇವರ ಕಾಲದಲ್ಲಿ ರಚನೆಯಾದವು. ಕವಯಿತ್ರಿಯರಾದ ಸಂಚಿ ಹೊನ್ನಮ್ಮ ಎಂಬಾಕೆ ಹದಿಬದೆಯಧರ್ಮ ಎಂಬ ಕೃತಿಯನ್ನು ಮತ್ತು ಸಿಂಗಾರಮ್ಮ ಎಂಬಾಕೆ ಪದ್ಮಿನಿ ಕಲ್ಯಾಣ ಎಂಬ ಕೃತಿಯನ್ನು ರಚಿಸಿದರು.

ತಮ್ಮ ಕಾಲಾವಧಿಯಲ್ಲಿ ಒಡೆಯರು ಸತಿ ಪದ್ದತಿಯನ್ನು ನಿಷೇಧಿಸಿದರು.

ಕಾವೇರಿ ನದಿಗೆ ಚಿಕ್ಕದೇವರಾಜ ನಾಲೆ & ದೊಡ್ಡ ದೇವರಾಜ ನಾಲೆಗಳನ್ನು ನಿರ್ಮಿಸಿದರು.

ಚಿಕ್ಕದೇವರಾಜ ಒಡೆಯರ ನಂತರ 2ನೇ ಕಂಠೀರವ ನರಸರಾಜ ಒಡೆಯರು 1ನೇ ಕೃಷ್ಣರಾಜ ಒಡೆಯರು ಆಳ್ವಿಕೆ ನಡೆಸಿದರು. ನಂತರ ಬಂದ ಅರಸರು ದುರ್ಬಲರಾಗಿದ್ದ ಕಾರಣ ಇವರ ನಂತರ 1761 ರಿಂದ 1799 ರವರೆಗೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಮೈಸೂರನ್ನು ಆಳಿದರು.

ಮುಮ್ಮಡಿ ಕೃಷ್ಣರಾಜ ಒಡೆಯರು (1799-1831)

ಟಿಪ್ಪು ನಿಧನದ ನಂತರ ಹೊಸ ಮೈಸೂರು ನಿರ್ಮಾಣಗೊಂಡಿತು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತಕ್ಕೆ ಬಂದರು.

ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತದಲ್ಲಿ 1831 ಅಕ್ಟೋಬರ್ 19 ರಲ್ಲಿ ಆದ ಬೂದಿ ಬಸಪ್ಪನ ದಂಗೆಯ ಕಾರಣದಿಂದಾಗಿ ಲಾರ್ಡ್ ವಿಲಿಯಂ ಬೆಂಟಿಂಕ್ ಮೈಸೂರನ್ನು ಕಮೀಷನರ್ ಆಳ್ವಿಕೆಗೆ ಒಳಪಡಿಸಿದನು.

ದಿವಾನ್ ಪೂರ್ಣಯ್ಯನವರು 1799 ರಿಂದ 1811 ರವರೆಗೆ ಮೈಸೂರಿನ ಮೊದಲ ದಿವಾನರಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಕೆಲಸ ಮಾಡಿದರು.

ಪೂರ್ಣಯ್ಯನವರು ಪ್ರವಾಸಿಗರಿಗೆ ಮತ್ತು ಜನರಿಗೆ ಅನೇಕ ಛತ್ರಗಳನ್ನು ನಿರ್ಮಾಣ ಮಾಡಿದರು ಅವು ದಿವಾನ್ ಪೂರ್ಣಯ್ಯ ಛತ್ರಗಳೆಂದು ಹೆಸರಾಗಿವೆ.

ಕಮೀಷನರ್ಸ್  ಆಳ್ವಿಕೆ

ಮೈಸೂರಿನಲ್ಲಿ 50 ವರ್ಷಗಳ ಕಾಲ 7 ಜನ ಕಮೀಷನರ್ಸ್ ಆಳ್ವಿಕೆ ಮಾಡಿದರು.

ಪ್ರಥಮ ಕಮೀಷನರ್ ಕರ್ನಲ್ ಬ್ರಿಕ್ಸ್ (1831-32)

ಪ್ರಮುಖ ಕಮೀಷನರ್ಸ್

ಮಾರ್ಕ್ ಕಬ್ಬನ್ (1834-1861)

ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿಯನ್ನು ವರ್ಗಾಯಿಸಿದನು

ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದನು. ಆದರೆ ಆಂಗ್ಲ ಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಿದನು.

ಅಠಾರ ಕಚೇರಿಯನ್ನು ರದ್ಧು ಮಾಡಿ ಅದರ ಬದಲಾಗಿ 9 ಶಾಖೆಗಳು ಆರಂಭಿಸಿದನು

1834ರಲ್ಲಿ ದುಷ್ಟ ಸಮಯಾಚಾರ ಪದ್ದತಿಯನ್ನು ರದ್ಧುಮಾಡಿದನು.

1851 ರಲ್ಲಿ ಟ್ರಿನಿಟಿ ಚರ್ಚ್ ಸ್ಥಾಪನೆ ಮಾಡಲಾಯಿತು.

1853ರಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಟೆಲಿಗ್ರಾಪ್ ಸಂಪರ್ಕ ಹಾಕಿಸಿದನು.

ಹಳೆಯ ಪಗೋಡಗಳ (ವರಾಹ) ಬದಲಿಗೆ ಬ್ರಿಟಿಷರ ಹೊಸ ಬೆಳ್ಳಿ ರೂಪಾಯಿಯನ್ನು 1854ರಲ್ಲಿ ಚಲಾವಣೆಗೆ ತರಲಾಯಿತು.

1859 ರಲ್ಲಿ ತಮಿಳುನಾಡಿನ ಜೋಲಾರ್ ಪೇಠೇಯಿಂದ ಬೆಂಗಳೂರಿಗೆ ರೈಲು ಮಾರ್ಗ ಆರಂಭಿಸಿದನು. 1882 ರಲ್ಲಿ ಮೈಸೂರು - ಬೆಂಗಳೂರು ನಡುವೆ ರೈಲು ಮಾರ್ಗ ಹಾಕಿಸಿದನು.

ಬೆಂಗಳೂರು ಮತ್ತು ಮದ್ರಾಸ್ ಮದ್ಯೆ 1864ರಲ್ಲಿ ರಸ್ತೆ ಮಾರ್ಗ ಹಾಕಿಸಿದನು.

ಎಲ್.ಬಿ ಬೌರಿಂಗ್ (1861-1870)

ಪೊಲೀಸ್ ವ್ಯವಸ್ಥೆಯನ್ನು ಸಂಸ್ಥಾನದಲ್ಲಿ ಜಾರಿಗೆ ತಂದು ಬೆಂಗಳೂರಿನಲ್ಲಿ 1863ರಲ್ಲಿ ಕೇಂದ್ರ ಕಾರಾಗೃಹ ಸ್ಥಾಪನೆ ಮಾಡಿದನು.

1863ರಲ್ಲಿ ದತ್ತಿ ಭೂಮಿ ಅಭಿವೃದ್ಧಿಗಾಗಿ ಇನಾಮ್ ಕಮಿಷನ್ ನೇಮಕ ಮಾಡಿದನು

1864ರಲ್ಲಿ ನೋಂದಣಿ ಕಾಯ್ದೆಯನ್ನು ಜಾರಿಗೆ ತಂದನು.

1866 ರಲ್ಲಿ ಸರ್ಕಾರಿ ಮುದ್ರಣಾಲಯ ಸ್ಥಾಪನೆ ಮಾಡಲಾಯಿತು.

ಶಿಕ್ಷಣದ ಅಭಿವೃದ್ಧಿಗಾಗಿ ಸೆಂಟ್ರಲ್ ಎಜುಕೇಷನ್ ಏಜೆನ್ಸಿ ಮತ್ತು ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯಗಳನ್ನು ಸ್ಥಾಪಿಸಲಾಯಿತು.

ಬೆಂಗಳೂರಿನಲ್ಲಿ ಮಾರ್ಕ್ ಕಬ್ಬನ್ ನೆನಪಿಗಾಗಿ ಕಬ್ಬನ್ ಪಾರ್ಕ್ ನಿರ್ಮಿಸಿದನು.

ಈತನ ಪತ್ನಿ ಲೇಡಿ ಬೌರಿಂಗ್ ಈಸ್ಟರ್ನ್ ಎಕ್ಸ್ ಪಿರಿಯನ್ಸ್ ಎಂಬ ಆತ್ಮ ಕಥೆಯನ್ನು ಬರೆದಿದ್ದಾಳೆ.

1875-76 ರಲ್ಲಿ ಮೈಸೂರು ಸಂಸ್ಥಾನದಲ್ಲಿ ತೀವ್ರವಾಗಿ ಕ್ಷಾಮ ಬಂದಾಗ ಗವರ್ನರ್ ಜನರಲ್ ಲಾರ್ಡ್ ಲಿಟ್ಟನ್ ಮೈಸೂರಿಗೆ ಭೇಟಿ ನೀಡಿದರು.

ಜೆ.ಡಿ ಗೋರ್ಡನ್ (1878-1881)

ಜೇಮ್ಸ್ ಗೋರ್ಡನ್ ಮೈಸೂರಿನ ಕೊನೆಯ ಕಮೀಷನರ್

ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜ್ ಸ್ಥಾಪನೆ ಆರಂಭಿಸಿದನು. ಮುಂದೆ ಇದು 1886 ರಲ್ಲಿ ಹತ್ತನೇ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ಪೂರ್ಣಗೊಂಡಿತು.

ಹೈದರ್ ಮತ್ತು ಟಿಪ್ಪುವಿನ ಕುರಿತು ಗೋರ್ಡನ್ ರೂಲರ್ಸ್ ಆಫ್ ಇಂಡಿಯಾ ಎಂಬ ಕೃತಿ ರಚಿಸಿದನು

1881 ರಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆ ಮಾಡಲಾಯಿತು.

ಗೋರ್ಡನ್ ನಂತರ 1881 ಸೆಪ್ಟೆಂಬರ್ 23 ರಂದು 10 ನೇ ಜಯಚಾಮರಾಜೇಂದ್ರ ಒಡೆಯರಿಗೆ ಪಟ್ಟಾಭಿಷೇಕ ನಡೆಸಿ ಸಂಸ್ಥಾನವನ್ನು ಒಡೆಯರಿಗೆ ವಾಪಸ್ಸು ಬಿಟ್ಟುಕೊಡಲಾಯಿತು

ಹತ್ತನೇ ಜಯಚಾಮರಾಜೇಂದ್ರ ಒಡೆಯರ್ (1881-1895)

1881 ಸೆಪ್ಟೆಂಬರ್ 23 ರಂದು ಮತ್ತೊಮ್ಮೆ ಅಧಿಕೃತವಾಗಿ ಸಿಂಹಾಸನವನ್ನೇರಿದರು.

ಇವರು ಆಡಳಿತದ ಅನುಕೂಲಕ್ಕಾಗಿ ದಿವಾನ್ ಹುದ್ದೆಯನ್ನು ಅಧಿಕೃತವಾಗಿ ಮತ್ತೊಮ್ಮೆ ಜಾರಿ ಮಾಡಿದರು

ಇವರ ಕಾಲದಲ್ಲಿ ದಿವಾನರುಗಳಾಗಿ ಸಿ.ರಂಗಾಚಾರ್ಲು ಮತ್ತು ಶೇಷಾದ್ರಿ ಅಯ್ಯರ್ ಅಯ್ಯರ್ ಅವರು ಸೇವೆಯಲ್ಲಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್ (1895- 1940)

1895 ಫೆಬ್ರವರಿ 01 ರಂದು ಸಿಂಹಾಸನವೇರಿದರು. ಇವರು ಅಪ್ರಾಪ್ತರಾಗಿದ್ದ ಕಾರಣ ರಾಜಪ್ರತಿನಿಧಿಯಾಗಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅಧಿಕಾರ ವಹಿಸಿಕೊಂಡಿದ್ದರು.

ಪ್ರಾಪ್ತ ವಯಸ್ಸಿಗೆ ಬಂದ ನಂತರ 1902 ಆಗಸ್ಟ್ 8 ರಂದು ವೈಸ್ ರಾಯ್ ಲಾರ್ಡ್ ಕರ್ಜನ್ ಸಮ್ಮುಖದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು.

1907 ರಲ್ಲಿ ಮಾರಿ ಕಣಿವೆ ಜಲಾಶಯವನ್ನು ನಿರ್ಮಿಸಿದರು.

1911 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು.

1916 ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.

ಮಹಾತ್ಮ ಗಾಂಧೀಜಿಯವರು ಇವರಿಗೆ ರಾಜರ್ಷಿ ಎಂಬ ಬಿರುದು ನೀಡಿದ್ದರು ಅಲ್ಲದೆ ತಮ್ಮ ಹರಿಜನ ಪತ್ರಿಕೆಯಲ್ಲಿ ಇವರ ಕಾಲವನ್ನ ರಾಮರಾಜ್ಯ ಎಂದು ವರ್ಣಿಸಿದ್ದರು. ನಾಲ್ವಡಿ  ಒಡೆಯರು ಇದ್ದಲ್ಲಿ ನಮಗೆ ಪ್ರಜಾಪ್ರಭುತ್ವದ ಅವಶ್ಯಕತೆಯೇ ಇಲ್ಲವೆಂದು ಗಾಂಧಿ ಹೇಳಿದ್ದರು. ಉತ್ತಮ ಆಡಳಿತದ ಕಾರಣ ಇವರ ಕಾಲವನ್ನು ಮೈಸೂರಿನ ಸುವರ್ಣ ಯುಗ ಎಂದು ಕರೆಯಲಾಗುತ್ತದೆ.

ಇವರ ಕಾಲದಲ್ಲಿನ ದಿವಾನರುಗಳು

ಶೇಷಾದ್ರಿ ಅಯ್ಯರ್-( 1883-1901)

ಪಿ.ಎನ್.ಕೃಷ್ಣ ಮೂರ್ತಿ-( 1901-1906)

ಪಿ.ವಿ.ಮಾಧವರಾವ್-( 1906-1909)

ಟಿ.ಆನಂದರಾವ್ -( 1909-1912)

ಸರ್.ಎಂ.ವಿಶ್ವೇಶ್ವರಯ್ಯ-( 1912-1918)

ಕಾಂತರಾಜ್ ಅರಸ್-( 1918-1922)

ಸರ್.ಅಲ್ಬಿಯನ್ ಬ್ಯಾನರ್ಜಿ-( 1922-1926)

ಸರ್.ಮಿರ್ಜಾ ಇಸ್ಮಾಯಿಲ್-( 1926-1941)

ಜಯ ಚಾಮರಾಜ ಒಡೆಯರ್ (1940-1947)

1940 ಸೆಪ್ಟೆಂಬರ್ 8 ರಂದು ಒಡೆಯರಾಗಿ ಅಧಿಕಾರ ಸ್ವೀಕಾರ ಮಾಡಿದರು. ಬ್ರಿಟಿಷ್ ಸರ್ಕಾರವು GCSI (Knight Grand Commander of the Order of the Star of India - Knight Grand Commander) GCB (Knight Grand Cross) ಎಂಬ ಬಿರುದುಗಳನ್ನು ನೀಡಿ ಗೌರವಿಸಿತು.

ಇವರಿಗೆ ಸಂಗೀತದಲ್ಲಿ ಲಂಡನ್ನಿನ ಹೆಸರಾಂತ ಸಂಸ್ಥೆ ಗಿಲ್ಡ್ ಹಾಲ್ ಸ್ಕೂಲ್ ಆಫ್  ಮ್ಯೂಸಿಕ್ ನಿಂದ ಲೈಸೆನ್ಸಿಯೇಟ್ ಪದವಿ ಲಭಿಸಿತು.

ಇವರ ಕಾಲದಲ್ಲಿ ಕೆ.ಸಿ ರೆಡ್ಡಿ (ಕೆ ಚಂಗಲರಾಯ ರೆಡ್ಡಿ) ಅವರ ನೇತೃತ್ವದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ 1947 ಸೆಪ್ಟೆಂಬರ್ 14 ರಂದು ಅರಮನೆ ಸತ್ಯಾಗ್ರಹ (ಮೈಸೂರು ಛಲೋ ಚಳುವಳಿ) ಚಳುವಳಿ ನಡೆಯಿತು.

1947 ರಿಂದ 1957 ರವರೆಗೆ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದರು. ನಂತರ ಮೈಸೂರಿನ ರಾಜ್ಯಪಾಲರಾಗಿ ನೇಮಕಗೊಂಡರು.

ದತ್ತಾತ್ರೇಯ ಮಾರ್ಗ ಮತ್ತು ಧ್ಯೇಯ ಎಂಬುದು ಇವರ ಕೃತಿ.

ಕಾಮೆಂಟ್‌ಗಳು