ಪರಮಾಣು ಮತ್ತು ಅಣು

ಪರಮಾಣು

ಮಧ್ಯದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಇದ್ದು ಸುತ್ತಲೂ ಎಲೆಕ್ಟ್ರಾನ್ ಗಳು ಸುತ್ತುತ್ತಿವೆ. ಈ ಪರಮಾಣುಗಳು, ಅಣುಗಳು ಮತ್ತು ಅಯಾನುಗಳನ್ನು ಉಂಟುಮಾಡುತ್ತವೆ.

ಪರಮಾಣು ರಚನಾ ಸಿದ್ದಾಂತಗಳು

ಡಾಲ್ಟನ್ ಸಿದ್ದಾಂತ

ಜಾನ್ ಡಾಲ್ಟನ್ ಎಂಬ ವಿಜ್ಞಾನಿ 1803 ರಲ್ಲಿ ಪರಮಾಣು ಸಿದ್ದಾಂತವನ್ನು ಮೊದಲ ಬಾರಿಗೆ ಮಂಡಿಸಿದನು.

ಪರಮಾಣುಗಳು ವಿಭಜಿಸಲಾಗದ ಪದಾರ್ಥಗಳು

ಪರಮಾಣುಗಳು ಅವುಗಳ ಧಾತುಗಳ ಗುಣಲಕ್ಷಣಗಳನ್ನೇ ಹೊಂದಿರುತ್ತವೆ.

ಒಂದು ಧಾತುವಿನ ಪರಮಾಣುಗಳನ್ನು ಇನ್ನೊಂದು ಧಾತುವಿನ ಪರಮಾಣುಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ.

ಬೇರೆ ಬೇರೆ ಪರಮಾಣುಗಳ ಧಾತುಗಳು ನಿರ್ದಿಷ್ಟ ಅನುಪಾತದಲ್ಲಿ ಸೇರಿ ಸಂಯುಕ್ತಗಳಾಗುತ್ತವೆ. 

ಜಲಜನಕದ (ಹೈಡ್ರೋಜನ್)  2 ಅಣುಗಳು ಮತ್ತು ಆಮ್ಲಜನಕದ (ಆಕ್ಸಿಜನ್) 1 ಅಣು ಸೇರಿ ನೀರು ಎಂಬ ಸಂಯುಕ್ತ ಉಂಟಾಗುತ್ತದೆ

ಇಂಗಾಲದ 1 ಅಣು ಮತ್ತು ಆಮ್ಲಜನಕದ (ಆಕ್ಸಿಜನ್) 2 ಅಣು ಸೇರಿ ಇಂಗಾಲದ ಡೈ ಆಕ್ಸೈಡ್ ಎಂಬ ಸಂಯುಕ್ತ ಉಂಟಾಗುತ್ತದೆ.

ಥಾಮ್ಸನ್ ಪರಮಾಣು ರಚನೆಯ ಮಾದರಿಯನ್ನು ಪ್ರಸ್ತಾಪಿಸಿದ ಮೊದಲ ವ್ಯಕ್ತಿ ಸಹ ಆಗಿದ್ದಾನೆ. ಆದರೆ ಈ ವಾದವು ಅಷ್ಟು ಸಮಂಜಸವಾಗಿರಲಿಲ್ಲ.

ಪರಮಾಣುವಿನ ಬೀಜಕೇಂದ್ರ ಮಾದರಿ ಸಿದ್ದಾಂತ

ರುದರ್ ಫೋರ್ಡ್ ಪರಮಾಣು ರಚನೆಯ ಸರಿಯಾದ ಮಾದರಿಯನ್ನು ವಿವರಿಸಿ ಪರಮಾಣು ಬೀಜಕೇಂದ್ರ ಮಾದರಿಯನ್ನು ಪ್ರತಿಪಾದಿಸಿದನು

ಈ ಸಿದ್ಧಾಂತದನ್ವಯ ಪರಮಾಣುವಿನ ಮಧ್ಯದಲ್ಲಿ ಬೀಜಕೇಂದ್ರವಿದ್ದು ಅದು ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳಿಂದಾಗಿರುತ್ತದೆ. ಈ ಬೀಜಕೇಂದ್ರದ ಸುತ್ತಲೂ ಎಲೆಕ್ಟ್ರಾನುಗಳು ತಮ್ಮ ಕಕ್ಷೆಗಳಲ್ಲಿ ಸ್ಥಿರವಾಗಿರುತ್ತವೆ. ಪರಮಾಣುವಿನಲ್ಲಿ 99% ಖಾಲಿ ಸ್ಥಳವಿರುತ್ತದೆ ಎಂದು ಪ್ರತಿಪಾದಿಸಿದನು. ಆದರೆ ಎಲೆಕ್ಟ್ರಾನುಗಳು ಹಾಗೆಯೇ ಸ್ಥಿರವಾಗಿರುತ್ತವೆಂಬ ವಾದ ವಿವಾದಕ್ಕೀಡಾಯಿತು. ಅದನ್ನು ಪರಿಹರಿಸಲು ನೀಲ್ಸ್ ಬೋರ್ ಪ್ರಯೊಗವನ್ನು ಕೈಗೊಂಡನು.

ಬೋರ್ ಪರಮಾಣು ಮಾದರಿ ಸಿದ್ದಾಂತ

ನೀಲ್ಸ್ ಬೋರ್ ಎಂಬ ವಿಜ್ಞಾನಿಯು 1913 ರಲ್ಲಿ ಈ ಸಿದ್ಧಾಂತವನ್ನು ಮಂಡಿಸಿದನು.

ಪರಮಾಣು ಬೀಜ ಕೇಂದ್ರದ ಸುತ್ತಲೂ ಎಲೆಕ್ಟ್ರಾನುಗಳು ನಿರ್ದಿಷ್ಟವಾದ ಕಕ್ಷೆಗಳಲ್ಲಿ ಸುತ್ತುತ್ತಾ ಇರುತ್ತವೆ. ಕ್ರಮವಾಗಿ K L M N O ಎಂದು ಈ ಕಕ್ಷೆಗಳನ್ನು ಹೆಸರಿಸಲಾಗಿದೆ. ಇದರಲ್ಲಿ ಮೊದಲನೆ ಕಕ್ಷೆ K ನಂತರ ಹೀಗೆ ಆ ಧಾತು ಹೊಂದಿರುವ ಎಲೆಕ್ಟ್ರಾನುಗಳ ಆಧಾರದ ಮೇಲೆ ಕಕ್ಷೆಗಳು ನಿರ್ಧಾರವಾಗುತ್ತವೆ. ಪ್ರತಿಯೊಂದು ಕಕ್ಷೆಯಲ್ಲಿ 2N2 ಸೂತ್ರದನ್ವಯ ಎಲೆಕ್ಟ್ರಾನುಗಳು ತುಂಬಿರುತ್ತವೆ.

1ನೇ ಕಕ್ಷೆ K = 2(1)2 – 2 ಎಲೆಕ್ಟ್ರಾನ್ಸ್ ವರೆಗೆ ಇರುತ್ತವೆ

2ನೇ ಕಕ್ಷೆ L = 2(2)2 – 8 ಎಲೆಕ್ಟ್ರಾನ್ಸ್ ವರೆಗೆ ಇರುತ್ತವೆ

3ನೇ ಕಕ್ಷೆ M = 2(3)2 – 18 ಎಲೆಕ್ಟ್ರಾನ್ಸ್ ವರೆಗೆ ಇರುತ್ತವೆ

4ನೇ ಕಕ್ಷೆ N = 2(4)2 – 32 ಎಲೆಕ್ಟ್ರಾನ್ಸ್ ವರೆಗೆ ಇರುತ್ತವೆ

ಹೀಲಿಯಂ ಪರಮಾಣು ಸಂಖ್ಯೆ 2 - 1ನೆ ಕಕ್ಷೆ = 2 ಎಲೆಕ್ಟ್ರಾನ್ಸ್

ಲೀಥಿಯಂ ಪರಮಾಣು ಸಂಖ್ಯೆ 3 - 1ನೆ ಕಕ್ಷೆ = 2 ಎಲೆಕ್ಟ್ರಾನ್ಸ್, 2ನೆ ಕಕ್ಷೆ = 1 ಎಲೆಕ್ಟ್ರಾನ್

ನಿಯಾನ್ ಪರಮಾಣು ಸಂಖ್ಯೆ 1- 1ನೆ ಕಕ್ಷೆ = 2 ಎಲೆಕ್ಟ್ರಾನ್ಸ್2ನೆ ಕಕ್ಷೆ = 8 ಎಲೆಕ್ಟ್ರಾನ್ಸ್

ಮೆಗ್ನಿಶಿಯಂ ಪರಮಾಣು ಸಂಖ್ಯೆ 12 - 1ನೆ ಕಕ್ಷೆ = 2 ಎಲೆಕ್ಟ್ರಾನ್ಸ್2ನೆ ಕಕ್ಷೆ = 8 ಎಲೆಕ್ಟ್ರಾನ್ಸ್3ನೆ ಕಕ್ಷೆ = 1ಎಲೆಕ್ಟ್ರಾನ್

ಆರ್ಗಾನ್ ಪರಮಾಣು ಸಂಖ್ಯೆ 18 - 1ನೆ ಕಕ್ಷೆ = 2 ಎಲೆಕ್ಟ್ರಾನ್ಸ್2ನೆ ಕಕ್ಷೆ = 8 ಎಲೆಕ್ಟ್ರಾನ್ಸ್3ನೆ ಕಕ್ಷೆ = 8 ಎಲೆಕ್ಟ್ರಾನ್ಸ್

ಪೊಟ್ಯಾಶಿಯಂ ಪರಮಾಣು ಸಂಖ್ಯೆ 19 - 1ನೆ ಕಕ್ಷೆ = 2 ಎಲೆಕ್ಟ್ರಾನ್ಸ್2ನೆ ಕಕ್ಷೆ = 8 ಎಲೆಕ್ಟ್ರಾನ್ಸ್3ನೆ ಕಕ್ಷೆ = 8 ಎಲೆಕ್ಟ್ರಾನ್ಸ್, 4ನೇ ಕಕ್ಷೆ = 1ಎಲೆಕ್ಟ್ರಾನ್

ಒಗ್ಯಾನಿಸನ್ ಅತಿ ಹೆಚ್ಚಿನ ಎಲೆಕ್ಟ್ರಾನ್ ಕಕ್ಷೆಗಳನ್ನು ಹೊಂದಿರುವ ಧಾತು. K,L,M,N,O,P,Q  ಎಂಬ 7 ಕಕ್ಷೆಗಳನ್ನು ಹೊಂದಿದೆ.

ಎಲೆಕ್ಟ್ರಾನ್ ಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ಇರುವಾಗ ಅವುಗಳ ಶಕ್ತಿ ಸ್ಥಿರವಾಗಿರುತ್ತದೆ. ಈ ಕಕ್ಷೆಗಳನ್ನು ಸ್ಥಿರಶಕ್ತಿಯ ಮಟ್ಟ ( ಚೈತನ್ಯ ಮಟ್ಟ) ಎಂದು ಕರೆಯಲಾಗುತ್ತದೆ.

ಪರಮಾಣುವಿನ ಕಣಗಳು

ಪ್ರೋಟಾನ್

1886 ರಲ್ಲಿ ಗೋಲ್ಡ್ ಸ್ಟೀನ್ ಧನಾಗ್ರ (ಆ್ಯನೋಡ್) ಕಿರಣಗಳನ್ನು ಶೋಧಿಸಿದನು. ಇವು ವಿದ್ಯುತ್ ಕ್ಷೇತ್ರ ಮತ್ತು ಕಾಂತ ಕ್ಷೇತ್ರಗಳಿಂದ ವಿಚಲನೆಗೊಳಗಾಗುತ್ತವೆ.

ಪ್ರೋಟಾನ್ ಗಳು ಎಲೆಕ್ಟ್ರಾನ್ ಗಳಿಗಿಂತಲೂ ಭಾರವಾದ ಕಣಗಳಾಗಿರುವುದರಿಂದ ಇವುಗಳ ವಿಚಲನೆ ಎಲೆಕ್ಟ್ರಾನ್ ಗಳಿಗಿಂತಲೂ ಕಡಿಮೆಯಿರುತ್ತದೆ. ಪ್ರೋಟಾನ್ ಗಳ ವಿಚಲನೆಯಲ್ಲಿ ಅನಿಲರಾಶಿಯು ಸಹ ಪರಿಣಾಮ ಬಿರುತ್ತದೆ. ಅನಿಲರಾಶಿ ಹೆಚ್ಚಿದ್ದಷ್ಟೂ ವಿಚಲನೆ ಕಡಿಮೆ ಇರುತ್ತದೆ ಮತ್ತು ಅನಿಲರಾಶಿ ಕಡಿಮೆ ಇದ್ದಷ್ಟೂ ವಿಚಲನೆ ಹೆಚ್ಚಾಗಿರುತ್ತದೆ.

ಒಂದು ಪ್ರೋಟಾನ್ 1840 ಎಲೆಕ್ಟ್ರಾನ್ ಗಳಿಗೆ ಸಮವಾಗಿರುತ್ತದೆ. ಆದರೆ ಪ್ರೋಟಾನ್ ನ ಆವೇಶ ಎಲೆಕ್ಟಾನಿನ ಆವೇಶಕ್ಕೆ ಸಮನಾಗಿಯೂ ಮತ್ತು ಎಲೆಕ್ಟ್ರಾನಿನ ಆವೇಶಕ್ಕೆ ವಿರೋಧವಾಗಿಯೂ ಇರುತ್ತದೆ. ಪ್ರೋಟಾನಿನ ಆವೇಶ ಸಂಖ್ಯೆ +1

ಒಂದು ಪ್ರೋಟಾನಿನ ತೂಕ 1.67262 x 10-27 kg

ಎಲೆಕ್ಟ್ರಾನ್

ಜೆ.ಜೆ ಥಾಮ್ಸನ್ 1897 ರಲ್ಲಿ ಎಲೆಕ್ಟ್ರಾನ್ ಅನ್ನು ಸಂಶೋಧಿಸಿದನು. ಎಲೆಕ್ಟ್ರಾನ್ ಕಿರಣಗಳನ್ನು ಕ್ಯಾಥೋಡ್ (ಋಣಾಗ್ರ) ಕಿರಣಗಳೆನ್ನುವರು. ಋಣಾಗ್ರ ಕಿರಣಗಳನ್ನು ವಿದ್ಯುತ್ ಕ್ಷೇತ್ರಕ್ಕೆ ಒಳಪಡಿಸಿದಾಗ ಅವು ಧನಾಗ್ರದ ಕಡೆಗೆ ಚಲಿಸುತ್ತವೆ. ಪ್ರಯೋಗದಲ್ಲಿ ಯಾವ ಅನಿಲವನ್ನು ಬಳಸಿದ್ದರೂ ಅವುಗಳ ವಿಚಲನೆ ಒಂದೇ ರೀತಿಯದ್ದಾಗಿರುತ್ತದೆ. ಎಲೆಕ್ಟ್ರಾನ್ ಆವೇಶ ಸಂಖ್ಯೆ -1

ಎಲೆಕ್ಟ್ರಾನ್ ಕಣವು ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳಿಗಿಂತ ಹೆಚ್ಚು ಹಗುರವಾಗಿರುತ್ತದೆ. ಇದರ ತೂಕ 9.11x10-31 kg

ಯಾವುದೇ ಧಾತುವು ಇನ್ನೊಂದು ಧಾತುವಿನ ಜೊತೆಗೆ ಸೇರಿ ಸಂಯುಕ್ತವಾಗುವಾಗ ತಮ್ಮ ಕೊನೆಯ ಕಕ್ಷೆಯಲ್ಲಿರುವ ಎಲೆಕ್ಟ್ರಾನುಗಳನ್ನು ಪರಸ್ಪರ ಕೊಡು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ ಇದನ್ನು ವೇಲೆನ್ಸ್ ಎನ್ನುವರು. ಅತ್ಯಂತ ಹೊರ ಕವಚದಲ್ಲಿರುವ ಎಲೆಕ್ಟ್ರಾನುಗಳನ್ನು ವೇಲೆನ್ಸ್ ಎಲೆಕ್ಟ್ರಾನುಗಳೆನ್ನುವರು.

ರುದರ್ ಫೋರ್ಡ್ ಪ್ರಯೋಗ

ಒಂದು ಪರಮಾಣುವಿನಲ್ಲಿ ಪ್ರೋಟಾನ್ ಮತ್ತು ಎಲೆಕ್ಟ್ರಾನುಗಳು ಹೇಗೆ ಹಂಚಿಕೆಯಾಗಿವೆ ಎಂಬುದನ್ನು ತೋರಿಸಿಕೊಟ್ಟವನು ರುದರ್ ಫೋರ್ಡ್.

ಸೋಡಿಯಂ ಪರಮಾಣು

ರುದರ್ ಫೋರ್ಡ್ ಪ್ರಯೋಗದ ಫಲಿತಾಂಶ

ಪರಮಾಣುವಿನ ಮಧ್ಯದಲ್ಲಿ ಪ್ರೋಟಾನ್ ಗಳಿವೆ ಮತ್ತು ಅವುಗಳ ಸುತ್ತಲೂ ಎಲೆಕ್ಟ್ರಾನುಗಳು ಸುತ್ತುತ್ತಿವೆ.

ಪರಮಾಣುವಿನಲ್ಲಿ ಬೀಜಕೇಂದ್ರವು ಅತಿ ಚಿಕ್ಕದಾಗಿದ್ದು 99% ಖಾಲಿ ಸ್ಥಳವಿರುತ್ತದೆ. ಪರಮಾಣುವಿನ ಹೆಚ್ಚಿನ ದ್ರವ್ಯರಾಶಿಯು ಅದರ ಬೀಜಕೇಂದ್ರದಲ್ಲಿರುತ್ತದೆ.

ಪ್ರತಿಯೊಂದು ಪರಮಾಣುವಿನ ಬೀಜಕೇಂದ್ರವು ಧನಾತ್ಮಕವಾಗಿದ್ದು ಇದು ಒಂದು ಧಾತುವಿನಿಂದ ಇನ್ನೊಂದು ಧಾತುವಿಗೆ ಭಿನ್ನವಾಗಿರುತ್ತದೆ.

ಪರಮಾಣುವಿನ ಬೀಜಕೇಂದ್ರದಲ್ಲಿ ಧನಾತ್ಮಕ ಕಣಗಳಾದ ಪ್ರೋಟಾನುಗಳ ಜೊತೆಗೆ ತಟಸ್ಥ ಕಣಗಳಾದ ನ್ಯೂಟ್ರಾನುಗಳು ಸಹ ಇರುತ್ತವೆ. ನ್ಯೂಟ್ರಾನ್ ಮತ್ತು ಪ್ರೋಟಾನ್ ಗಳು ಸಮಪ್ರಮಾಣದಲ್ಲಿರುತ್ತವೆ.

ನ್ಯೂಟ್ರಾನ್

ರುದರ್ ಫೋರ್ಡ್ ನ ಪ್ರಯೋಗದ ಆಧಾರದ ಮೇಲೆ 1932 ರಲ್ಲಿ  ಜೇಮ್ಸ್ ಚಾಡ್ವಿಕ್ ತಟಸ್ಥ ಕಣಗಳಾದ ನ್ಯೂಟ್ರಾನ್ ಗಳನ್ನು ಸಂಶೋಧಿಸಿದನು.

ಪರಮಾಣು ಬೀಜಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳಿದ್ದು ಅವುಗಳ ಸುತ್ತ ಎಲೆಕ್ಟ್ರಾನುಗಳು ಸುತ್ತುತ್ತಾ ಇರುತ್ತವೆಂಬುದು ಈ ಪ್ರಯೋಗದ ಮೂಲಕ ಪ್ರತಿಪಾದಿತವಾಯಿತು.

ನ್ಯೂಟ್ರಾನ್ ನ ತೂಕ 1,6929 x 10-27 kg

ಪರಮಾಣು ಸಂಖ್ಯೆ ಮತ್ತು ಪರಮಾಣು ರಾಶಿ ಸಂಖ್ಯೆ

ಪರಮಾಣುವಿನ ಬೀಜಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಇರುತ್ತವೆ. ಪ್ರೋಟಾನ್ ಗಳ ಸಂಖ್ಯೆಯನ್ನು ಪರಮಾಣು ಸಂಖ್ಯೆ ಎನ್ನುವರು. ಪರಮಾಣು ಸಂಖ್ಯೆಯನ್ನು Z ಸಂಕೇತದಿಂದ ಸೂಚಿಸುವರು.

ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳ ಒಟ್ಟು ಸಂಖ್ಯೆಯನ್ನು ಪರಮಾಣು ರಾಶಿ ಸಂಖ್ಯೆ ಎನ್ನುವರು. ಪರಮಾಣು ರಾಶಿ ಸಂಖ್ಯೆಯ ಸಂಕೇತ A. ಪರಮಾಣು ರಾಶಿಯನ್ನು, ರಾಶಿ ಮಾನ (a.m.u), ಡಾಲ್ಟನ್ (da), ಅಥವಾ ಏಕೀಕೃತ ರಾಶಿ (u) ಎನ್ನುವರು.

ಒಂದು ಪ್ರೋಟಾನಿನ ರಾಶಿಯು 1.007 a.m.u ಮತ್ತು ನ್ಯೂಟ್ರಾನ್ ನ ರಾಶಿಯು a.m.u 1.0087

ಪರಮಾಣು ಸಂಖ್ಯೆ ಮತ್ತು ಪರಮಾಣು ರಾಶಿ ಸಂಖ್ಯೆಯನ್ನು ಒಟ್ಟಿಗೆ zXA ಸಂಕೇತದಿಂದ ಸೂಚಿಸುವರು.

ಉದಾ : zXA = ಮೆಗ್ನೀಷಿಯಂ ಪರಮಾಣು ಸಂಖ್ಯೆ 12, ರಾಶಿ ಸಂಖ್ಯೆ 24 = 12Mg24

ರಾಶಿ ಸಂಯೋಜನೆಯ ನಿಯಮಗಳು

ಲೆವೋಸಿಯರ್ ಮತ್ತು ಜೋಸೆಫ್ ಎಲ್ ಪ್ರೌಸ್ಟ್ ಈ ನಿಯಮವನ್ನು ಪ್ರತಿಪಾದಿಸಿದರು

ರಾಶಿ ಸಂರಕ್ಷಣಾ ನಿಯಮ : ರಾಶಿಯನ್ನು ಸೃಷ್ಟಿಸುವುದು ಅಥವಾ ನಾಶಪಡಿಸುವುದು ಸಾಧ್ಯವಿಲ್ಲ.

ಸ್ಥಿರ ಅನುಪಾತಗಳ ನಿಯಮ : ಒಂದು ಸಂಯುಕ್ತದಲ್ಲಿರುವ ಧಾತು ಅಥವಾ ಸಂಯುಕ್ತಗಳ ಅನುಪಾತವು ಯಾವ ಕಾಲದಲ್ಲಿಯೂ ಒಂದೇ ಆಗಿರುತ್ತದೆ.

ಸಮಸ್ಥಾನಿಗಳು (ಐಸೋಟೋಪ್ಸ್)

ಬೇರೆ ಬೇರೆ ರಾಶಿ ಸಂಖ್ಯೆಯನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳು

ಹೈಡ್ರೋಜನ್

1H1 = ಪ್ರೋಟಿಯಂ/ಹೈಡ್ರೋಜನ್

1H2 = ಡ್ಯುಟೇರಿಯಂ (ಭಾರಜಲ)

1H3 = ಟ್ರೀಷಿಯಂ

ಕಾರ್ಬನ್ (ಇಂಗಾಲ) ನ ಪರಮಾಣು ರಾಶಿ 6 ಮತ್ತು ಪರಮಾಣು ರಾಶಿ ಸಂಖ್ಯೆ 24.

ಇಂಗಾಲದ ಐಸೋಟೋಪ್ಸ್ 6C12, 6C13, 6C14

ಸಾಪೇಕ್ಷ ಪರಮಾಣು ರಾಶಿ

ಇತರ ಧಾತುಗಳ ಸಾಪೇಕ್ಷ ಪರಮಾಣು ರಾಶಿಯನ್ನು ಕಂಡುಹಿಡಿಯಲು ಕಾರ್ಬನ್ 6H12 ಅನ್ನು ಬಳಸುವರು. ಇದರ ಪರಮಾಣು ರಾಶಿಯ ರಾಶಿಮಾನ 12.01 u

                              ಧಾತುವಿನ ಒಂದು ಪರಮಾಣು ರಾಶಿ

ಸಾಪೇಕ್ಷ ಪರಮಾಣು ರಾಶಿ =------------------------------------------------------

                                            1/12 x 6C12 ಐಸೋಟೊಪ್ ನ ಪರಮಾಣು ರಾಶಿ

ಪ್ರಸ್ತುತ ರಾಶಿ ರೊಹಿತ ದರ್ಶಕದಿಂದ ಪರಮಾಣು ರಾಶಿಯನ್ನು ಕಂಡುಹಿಡಿಯಲಾಗುತ್ತದೆ.

ಗ್ರಾಂ ಪರಮಾಣು ರಾಶಿ

ಯಾವುದೇ ಒಂದು ಧಾತುವಿನ ಸಾಪೇಕ್ಷ ಪರಮಾಣು ರಾಶಿಯನ್ನೇ ಗ್ರಾಂ ಪರಮಾಣು ರಾಶಿ ಎನ್ನುವರು.

ಹೈಡ್ರೋಜನ್ ಸಾಪೇಕ್ಷ ಪರಮಾಣು ರಾಶಿ 1.008 = ಗ್ರಾಂ ಪರಮಾಣು ರಾಶಿ 1.008 ಗ್ರಾಂ

ಆಕ್ಸಿಜನ್ ಸಾಪೇಕ್ಷ ಪರಮಾಣು ರಾಶಿ 16 = ಗ್ರಾಂ ಪರಮಾಣು ರಾಶಿ 16 ಗ್ರಾಂ

ಕ್ಲೋರಿನ್ ಸಾಪೇಕ್ಷ ಪರಮಾಣು ರಾಶಿ 71 = ಗ್ರಾಂ ಪರಮಾಣು ರಾಶಿ 71 ಗ್ರಾಂ

ನೀರು ಸಾಪೇಕ್ಷ ಪರಮಾಣು ರಾಶಿ 18 = ಗ್ರಾಂ ಪರಮಾಣು ರಾಶಿ 18 ಗ್ರಾಂ

ಸರಾಸರಿ ಪರಮಾಣು ರಾಶಿ/ಪರಮಾಣು ತೂಕ

ಒಂದು ಧಾತುವಿನ ಎಲ್ಲಾ ಸಮಸ್ಥಾನೀಯಗಳ ಒಟ್ಟು ಪರಮಾಣು ರಾಶಿಯ ತೂಕವೇ ಸರಾಸರಿ ಪರಮಾಣು ರಾಶಿಯಾಗಿರುತ್ತದೆ.

ಉದಾ : ಕ್ಲೋರಿನ್ (Cl) ಇದರ ಐಸೋಟೋಪ್ಸ್ 3:1 ಅನುಪಾತದಲ್ಲಿ ಸಿಗುತ್ತವೆ

Cl 35 (75.5%) ಮತ್ತು Cl 37 (24.5%) = 3:1 ಅನುಪಾತ

                        3(35)+1(37)        142

Cl ಪರಮಾಣು ತೂಕ = ----------------------- = ------ = 35.5

                                         3+1                   4

ಕ್ಲೋರಿನ್ ಸರಾಸರಿ ಪರಮಾಣು ರಾಶಿ = 35.5

ಐಸೋಬಾರ್

ಬೇರೆ ಬೇರೆ ಪರಮಾಣು ಸಂಖ್ಯೆಯುಳ್ಳ ಬೇರೆ ಬೇರೆ ಧಾತುಗಳು ಒಂದೇ ಪರಮಾಣು ರಾಶಿಯನ್ನು ಹೊಂದಿದ್ದರೆ ಅದನ್ನು ಐಸೋಬಾರ್ ಎನ್ನುವರು

ಕ್ಯಾಲ್ಷಿಯಂ ನ ಪರಮಾಣು ಸಂಖ್ಯೆ 20 ಮತ್ತು ಆರ್ಗಾನ್ ಪರಮಾಣು ಸಂಖ್ಯೆ 18. ಆದರೆ ಅವೆರಡರ ಪರಮಾಣುರಾಶಿ ಸಂಖ್ಯೆ 40.

ಪರಮಾಣುಗಳ ವಿಕಿರಣ

118 ಮೂಲ ಧಾತುಗಳಲ್ಲಿ 80 ಮೂಲ ಧಾತುಗಳು ಸ್ಥಿರ ಗುಣವುಳ್ಳವು. ಉಳಿದ 38 ಮೂಲಧಾತುಗಳು ಮತ್ತು ಅವುಗಳ ಸಮಸ್ಥಾನಿಯ ಧಾತುಗಳು (ಐಸೊಟೋಪ್) ವಿಕಿರಣಶೀಲತೆ (radioactive) ಹೊಂದಿವೆ. 

ಪರಮಾಣು ಸಂಖ್ಯೆಯ 80ರ ನಂತರದ ಧಾತುಗಳ ಬೀಜಗಳು ಕೆಲವು ತಾವಾಗಿಯೇ ಸಿಡಿದು ಕಣಗಳನ್ನು ಚಿಮ್ಮುತ್ತವೆ. ಈ ಬಗೆಯ ಪರಮಾಣುಗಳಿಗೆ (ಧಾತುಗಳಿಗೆ) ಸಹಜ ವಿಕಿರಣ ಕ್ರಿಯಾಶೀಲ ಪರಮಾಣುಗಳೆಂದು (radioactive elements or Atoms) ಹೆಸರು.


ವಿಕಿರಣಶೀಲ ಧಾತುವಾದ ರೇಡಿಯಂ ಧಾತು 88 ಪ್ರೋಟಾನ್ ಮತ್ತು 138 ನ್ಯೂಟ್ರಾನ್ ಗಳನ್ನು ಒಳಗೊಂಡಿರುತ್ತದೆ. ಆಗ ಇದರ ಪರಮಾಣು ಸಂಖ್ಯೆ (ಪ್ರೋಟಾನ್ಸ್) 88 ಮತ್ತು ಪರಮಾಣು ರಾಶಿ ಸಂಖ್ಯೆ (ಪ್ರೋಟಾನ್ಸ್+ನ್ಯೂಟ್ರಾನ್ಸ್) 226 ಆಗುತ್ತದೆ. ರೇಡಿಯಂ 2 ಪ್ರೋಟಾನ್ ಮತ್ತು 2 ನ್ಯೂಟ್ರಾನ್ ಗಳನ್ನು ಒಳಗೊಂಡ alpha ಕಣವನ್ನು  ಹೊರಹಾಕಿದಾಗ 88 ಪ್ರೋಟಾನ್ ಗಳಲ್ಲಿ 2 ಪ್ರೋಟಾನ್ ಗಳು ಮತ್ತು 138 ನ್ಯೂಟ್ರಾನ್ ಗಳಲ್ಲಿ 2 ನ್ಯೂಟ್ರಾನ್ ಗಳು ಕಡಿಮೆಯಾಗಿ ಕ್ರಮವಾಗಿ 86 ಪ್ರೋಟಾನ್ ಮತ್ತು 136 ನ್ಯೂಟ್ರಾನ್ ಉಳ್ಳ ರೇಡಾನ್ ಆಗಿ ಪರಿವರ್ತನೆಯಾಗುತ್ತದೆ. ರೇಡಾನ್ ನ ಪರಮಾಣು ಸಂಖ್ಯೆ (ಪ್ರೋಟಾನ್ಸ್) 86 ಮತ್ತು ಪರಮಾಣು ರಾಶಿ ಸಂಖ್ಯೆ (ಪ್ರೋಟಾನ್ಸ್+ನ್ಯೂಟ್ರಾನ್ಸ್) 222 ಆಗುತ್ತದೆ.

ಯುರೇನಿಯಮ್  ಒಂದು ಸ್ವಯಂ ಸ್ಪೋಟಕ ಪರಮಾಣು. ಇದರ ಪರಮಾಣು ಸಂಖ್ಯೆ 92 ಮತ್ತು ಪರಮಾಣು ರಾಶಿ ಸಂಖ್ಯೆ 238. ಈ ಪರಮಾಣು ಸಿಡಿದಾಗ ಒಂದು ಆಲ್ಫಾ (ಹೀಲಿಯಂ ಪರಮಾಣು) ಕಣವನ್ನು ತನ್ನ ಬೀಜದಿಂದ ಹೊರ ನೂಕುವುದು. ಆಲ್ಫಾ ಎರಡು ಪ್ರೊಟಾನ್ ಮತ್ತು ಎರಡು ನ್ಯೂಟ್ರಾನ್ ಗಳಿರುತ್ತವೆ. ಹೀಲಿಯಂ ಅನ್ನು ಕಳೆದುಕೊಂಡ ಯುರೇನಿಯಮ್ ಪರಮಾಣು ಭಾರಾಂಕ 234 ಮತ್ತು ಪರಮಾಣು ಅಂಕ 90 ಆಗುತ್ತದೆ. 

ಹೀಗೆ ಪರಮಾಣ್ವಂಕ ಬದಲಾದಾಗ ಯುರೇನಿಯಂ ಅಥವಾ ರೇಡಿಯಂ ಗಳು ಬೇರೊಂದು ಧಾತುಗಳಾಗಿ ಬದಲಾಗುತ್ತವೆ. ಅದನ್ನು ಯುರೇನಿಯಮ್/ರೇಡಿಯಂ  Χ1 ಎನ್ನುವರು. ಈ ವಿಕಿರಣಶೀಲ ಧಾತುಗಳು ಹೀಗೆ ವಿಕಿರಣದಿಂದ ಕಣಗಳನ್ನು ಕಳೆದುಕೊಳ್ಳುತ್ತಾ ಕೊನೆಯದಾಗಿ ಸಿಡಿಯದ ವಿಕಿರಣವಲ್ಲದ ಸೀಸವಾಗುತ್ತದೆ. ಈ ಸೀಸದ ಪರಮಾಣು ರಾಶಿ ಸಂಖ್ಯೆ 206 ಪರಮಾಣು ಸಂಖ್ಯೆ 82. ಇದು ಸ್ಥಿರ ಪರಮಾಣುವಾಗಿದ್ದು ವಿಕಿರಣ ಸೂಸುವುದಿಲ್ಲ. ಹೀಗೆ ವಿಕಿರಣ ಧಾತುಗಳು ಸಿಡಿದು ಸಿಡಿದು ಬದಲಾವಣೆ ಹೊಂದಿ ಕಡೆಗೆ ಸ್ಥಿರ ಧಾತುವಾದ ಸೀಸವಾಗುತ್ತವೆ ಅಥವಾ ಸೀಸದ ಸಮಸ್ಥಾಯಿ ಧಾತುವಾಗುತ್ತವೆ.

ಪರಮಾಣುವಿನ ಅರ್ಧಾಯು

ವಿಕಿರಣ ಧಾತುಗಳ ಸಿಡಿಯುವಿಕೆಯಲ್ಲಿ (Natural Radio-activity) ಒಂದು ನಿಯಮವಿದೆ. ನಮ್ಮಲ್ಲಿ 10 ಗ್ರಾಂ ರೇಡಿಯಂ ಇದ್ದರೆ 1590 ವರ್ಷ ಕಳೆದ ಮೇಲೆ ಅದು 5 ಗ್ರಾಮ್ ಆಗುವುದು. 3180 ವರ್ಷಗಳ ನಂತರ ಅದು 2.5 ಗ್ರಾಂ ಆಗುವುದು. 6360 ವರ್ಷಗಳ ನಂತರ 1.25 ಗ್ರಾಂ ಆಗುವುದು. ಹೀಗೆ 12,720ವರ್ಷಗಳನಂತರ ಕೇವಲ 0.625 ಗ್ರಾಮ್ ಮಾತ್ರಾ ಉಳಿಯುವುದು. ಇದು ಹೀಗೆ ಕಡಿಮೆಯಾಗಿತ್ತಾ ಹೋಗುವುದೇ ವಿನಃ ಪೂರ್ಣ ನಾಶವೆಂಬುದು ಇಲ್ಲ. ಇದು ಅನಂತ ಕಾಲದ ಕ್ರಿಯೆ. 

ಬೇರೆ ಬೇರೆ ಸಹಜ ವಿಕಿರಣ (ಸ್ವಯಂ ಸ್ಪೋಟಕ) ಧಾತುಗಳು ಬೇರೆ ಬೇರೆ ಅರ್ಧಾಯುಗಳನ್ನು ಹೊಂದಿವೆ. ಈ ಅರ್ಧಾಯುವು ಪ್ರತಿ ಧಾತುವಿಗೆ ಬೇರೆಬೇರೆ ಇದ್ದೂ ಅವು ನಿಯತವಾದ ಕಾಲವನ್ನು ಹೊಂದಿವೆ. ಯಾವುದೇ ಸನ್ನಿವೇಶಗಳಲ್ಲಿ ( ಉಷ್ಣಾಂಶ, ಒತ್ತಡ, ವಿದ್ಯುತ್ ಕ್ಷೇತ್ರ, ಅಥವಾ ರಸಾಯನಿಕ ಸನ್ನಿವೇಶ) ಸ್ಪೋಟನ ಈ ಕ್ರಿಯೆ ವ್ಯತ್ಯಾಸವಾಗುವುದಿಲ್ಲ.

ಧಾತುಗಳ ವಿಕಿರಣ (radioactiveity) ಕ್ರಿಯೆಯಿಂದ ಬಿಡುಗಡೆಯಾಗುವ ಕಣಗಳಿಗೆ ವಿಸರಣ (radiation) ಎನ್ನಬಹುದು.  ಈ ಕಣಗಳಿಗೆ ವಸ್ತುಗಳನ್ನು ತೂರಿಹೋಗುವ ಶಕ್ತಿ ಇದೆ. ತೂರಿಹೋದ ಕಣಗಳು ದೂರ ಹೋದಂತೆ ಶಕ್ತಿ ಕಡಿಮೆಯಾಗಿ ಕಣವು ವಸ್ತುವಿನಲ್ಲಿ ಲೀನವಾಗುತ್ತವೆ. ಈ ದೂರಕ್ಕೆ ಕಣದ ಬೇಧನ ದೂರ (Range of penetration) ಎಂದು ಹೆಸರು. ಈ ಬೇಧನ ದೂರದ ಲೆಕ್ಕದಿಂದ ವಿಕಿರಣ ಧಾತುವಿನ ಅರ್ಧಾಯುವನ್ನು ಕಂಡುಹಿಡಿಯುವರು.

ವಿಸರಣ ಕಿರಣಗಳು.

ಆಲ್ಫಾ : 2 ಪ್ರೋಟಾನ್ ಮತ್ತು 2 ನ್ಯೂಟ್ರಾನ್ ಸೇರಿರುತ್ತವೆ. ಪರಮಾಣು ಬೀಜ ಒಡೆಯುವಾಗ ಈ ಕಿರಣ ಸಿಡಿಯುವುದು. ಈ ಕಿರಣದ ಚಲನೆ ಕೇವಲ 2-3 ಸೆಂ.ಮೀ.ನಷ್ಟು ಉದ್ದ.

ಬೀಟಾ : ಪರಮಾಣು ಬೀಜದಿಂದ ಹೊರಡುವ ಇವು ಎಲೆಕ್ಟ್ರಾನ್ ಕಣಗಳು. ಗಾಳಿಯಲ್ಲಿ ಸುಮಾರು 2-3 ಮೀಟರ್ ದೂರ ಚಲಿಸಬಲ್ಲವು. ಸುಮಾರ 2 ಸೆ.ಮೀ. ಗಿಂತ ಹೆಚ್ಚಿನ ದಪ್ಪದ ಹಲಗೆಯನ್ನು ದಾಟುವುದಿಲ್ಲ. ಇದು ನಮ್ಮ ದೇಹದ ಮೇಲ್ಪದರಕ್ಕೆ ಹಾನಿ ಮಾಡಬಲ್ಲದು. ಮತ್ತು ನಮ್ಮ ಜೀವಿಯ ರಕ್ತ ಕಣಗಳನ್ನು ಒಡೆಯಬಲ್ಲದು.

ಗಾಮಾ ಇವು ನ್ಯೂಟ್ರಾನ್ ಕಣಗಳ ಪ್ರವಾಹವಾಗಿದ್ದು ಬಹಳ ಅಪಾಯಕಾರಿ. ಇದು ನಮ್ಮ ದೇಹದೊಳಕ್ಕೆ ಆಳವಾಗಿ ಇಳಿಯಬಲ್ಲದು. ಇದನ್ನು ತಡೆಯಲು ದಪ್ಪ ಸೀಸದ ಹಾಳೆ ಅಥವಾ ಒಂದು ಅಡಿದಪ್ಪದ ಕಾಂಕ್ರೀಟು ಗೋಡೆ ಅಗತ್ಯ. 

ಫಾಸ್ಟ್ ಬ್ರೀಡರ್ ಪರಮಾಣು ತಂತ್ರಜ್ಞಾನ

ಫಾಸ್ಟ್ ಬ್ರೀಡರ್ ತಂತ್ರಜ್ಞಾನದಲ್ಲಿ ಬಳಸಿದ ಇಂಧನಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುಲಾಗುತ್ತದೆ. ಅಂದರೆ ಹತ್ತು ಕಿಲೊ ಕೆಂಡದಿಂದ 17 ಕಿಲೊ ಇದ್ದಿಲನ್ನು ಪಡೆದ ಹಾಗೆ. ಹತ್ತು ಕಿಲೊ ಪರಮಾಣು ಪ್ಲುಟೋನಿಯಂ ಅಥವಾ ಯುರೇನಿಯಂ ಬಳಸಿದಾಗ ಅದರ ಜೊತೆಗೆ ಇಂಧನವಲ್ಲದ ಥೋರಿಯಂ ಅನ್ನು ಸೇರಿಸಿರುತ್ತಾರೆ. ಆಗ ಥೋರಿಯಮ್ ಸಹ ಪ್ಲುಟೋನಿಯಮ್ ಅಥವಾ ಯುರೇನಿಯಂ ಆಗಿ ಬದಲಾಗಿ ಇಂಧನವಾಗುತ್ತದೆ. ಈ ವಿಧಾನದ ಮೂಲಕ ಪರಮಾಣು ತ್ಯಾಜ್ಯಗಳನ್ನೇ ಉರಿಸಿ ಶಕ್ತಿ ಪಡೆಯುವುದರಿಂದ ತ್ಯಾಜ್ಯದ ವಿಲೆವಾರಿಯ ಸಮಸ್ಯೆಯೇ ಇರುವುದಿಲ್ಲ. ಮತ್ತು ದೀರ್ಘಾವಧಿಯವರೆಗೆ (200 ಕಿಂತ ಹೆಚ್ಚು ವರ್ಷಗಳು) ಇಂಧನವನ್ನು ಸೃಷ್ಟಿಸಿಕೊಳ್ಳಬಹುದು.

ಅಣು

ಒಂದು ಧಾತುವಿನ ಅಥವಾ ಸಂಯುಕ್ತ ವಸ್ತುವಿನ 2 ಅಥವಾ 2 ಕ್ಕಿಂತ ಹೆಚ್ಚು ಪರಮಾಣುಗಳಿಂದಾಗಿದ್ದು ಅತ್ಯಂತ ಸಣ್ಣ ಕಣವಾಗಿರುತ್ತದೆ. ಅಣು ಆ ಧಾತು ಅಥವಾ ಸಂಯುಕ್ತದ ಎಲ್ಲಾ ಗುಣಗಳನ್ನು ಹೊಂದಿರುತ್ತದೆ.

ಧಾತುಗಳ ಅಣುಗಳ ಜೋಡಣೆಗೆ ಉದಾ.. ಜಲಜನಕ (ಹೈಡ್ರೋಜನ್), ಆಮ್ಲಜನಕ (ಆಕ್ಸಿಜನ್) 

ಸಂಯುಕ್ತಗಳ ಅಣುಗಳ ಜೋಡಣೆಗೆ ಉದಾ..

H2O (ನೀರು) = 2 ಹೈಡ್ರೋಜನ್ (ಜಲಜನಕ) ಅಣು ಮತ್ತು 1 ಆಮ್ಲಜನಕ ಅಣು

ಅಣುರಾಶಿ

ಒಂದು ಧಾತು ಅಥವಾ ಸಂಯುಕ್ತದಲ್ಲಿರುವ ಎಲ್ಲಾ ಅಣುಗಳ ಒಟ್ಟು ಪರಮಾಣು ರಾಶಿಯನ್ನು ಅಣುರಾಶಿ ಎನ್ನುವರು

ಧಾತು ಅಣುರಾಶಿ

O2 = 2 ಆಮ್ಲಜನಕದ ಅಣುಗಳಿವೆ, 1 ಅಣುವಿನ ಅಣುರಾಶಿ 16 ಆದರೆ, 2 ಅಣುಗಳ ಅಣುರಾಶಿ 32 ಆಗುತ್ತದೆ

2x16=32 ಅಣುರಾಶಿ

ಸಂಯುಕ್ತ ಅಣುರಾಶಿ

CO2 = ಇಂಗಾಲದ 1 ಅಣುವಿನ ಅಣುರಾಶಿ 12 ಮತ್ತು ಆಮ್ಲಜನಕದ 2 ಅಣುವಿನ ಅಣುರಾಶಿ 32

ಇಂಗಾಲ 12 + ಆಮ್ಲಜನಕ 32 = 44.

CO2 ನ ಅಣುರಾಶಿ 44

ಸಾಪೇಕ್ಷ ಅಣುರಾಶಿ

ಒಂದು ವಸ್ತುವಿನ ಸಾಪೇಕ್ಷ ಅಣುರಾಶಿಯು, ಆ ವಸ್ತುವಿನ ಒಂದು ಅಣುವಿನ ರಾಶಿ ಮತ್ತು 6C12 ಐಸೋಟೋಪ್ ನ ಒಂದು ಪರಮಾಣು ರಾಶಿಯ 1/12 ಅನುಪಾತದಲ್ಲಿರುತ್ತದೆ.

                   ಧಾತುವಿನ ಒಂದು ಅಣುರಾಶಿ

ಸಾಪೇಕ್ಷ ಅಣುರಾಶಿ =-----------------------------------------------------------

                             1/12 x 6C12ಐಸೋಟೊಪ್ ನ ಪರಮಾಣು ರಾಶಿ

ಗ್ರಾಂ ಅಣುರಾಶಿ

ಒಂದು ಧಾತುವಿನ ಅಥವಾ ಸಂಯುಕ್ತದ ಸಾಪೇಕ್ಷ ಅಣುರಾಶಿಯನ್ನು ಗ್ರಾಂ ಗಳಲ್ಲಿ ಹೇಳುವುದು.

F ಫ್ಲೋರಿನ್ ಅಣುರಾಶಿ 19 = ಗ್ರಾಂ ಅಣುರಾಶಿ 19 ಗ್ರಾಂ

Hg ಪಾದರಸದ ಅಣುರಾಶಿ 20ಗ್ರಾಂ ಅಣುರಾಶಿ 200 ಗ್ರಾಂ

CO2 ಕಾರ್ಬನ್ ಡೈ ಆಕ್ಸೈಡ್ ಅಣುರಾಶಿ 44 = ಗ್ರಾಂ ಅಣುರಾಶಿ 44 ಗ್ರಾಂ

Cl2 ಕ್ಲೋರಿನ್ ಸಾಪೇಕ್ಷ ಅಣುರಾಶಿ 71 = ಗ್ರಾಂ ಅಣುರಾಶಿ 71 ಗ್ರಾಂ

ಮೋಲ್ ಪರಿಕಲ್ಪನೆ

ಪರಮಾಣು ಅಥವಾ ಅಣುಗಳ ಸಂಖ್ಯೆಯನ್ನು ಸೂಚಿಸಲು ಮೋಲ್ ಎಂಬ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಒಂದು ಮೋಲ್ ಎಂದರೆ 6.023x1023. ಈ ಸಂಖ್ಯೆಯನ್ನು ಅವೊಗ್ಯಾಡ್ರೊ ಸಂಖ್ಯೆ ಎನ್ನುವರು. ಮತ್ತು ಸಂಖ್ಯೆಯನ್ನು Nಸಂಖೇತದಿಂದ ಸೂಚಿಸುವರು.

ಕಾಮೆಂಟ್‌ಗಳು