ಭಾಗ – 2 ಪೌರತ್ವ

ಭಾಗ 2 ಪೌರತ್ವ

ಸಂಸತ್ತು 1955 ರಲ್ಲಿ ಪೌರತ್ವ ಕಾಯ್ದೆಯನ್ನು ರೂಪಿಸಿತು. ಭಾರತದಲ್ಲಿ 2 ರೀತಿಯ ಪೌರತ್ವಗಳಿವೆ. ಭಾರತೀಯ ನಿವಾಸಿಗಳಿಗೆ ಏಕ ಪೌರತ್ವ ಮತ್ತು ಅನಿವಾಸಿ ಭಾರತೀಯರಿಗೆ ದ್ವಿ ಪೌರತ್ವ.

ಅಮೇರಿಕಾ ಮತ್ತು ಸ್ವಿಟ್ಜರ್ಲ್ಯಾಂಡ್ ದ್ವಿ ಪೌರತ್ವ ಹೊಂದಿರುವ ದೇಶಗಳಾಗಿವೆ.

ವಿಧಿಗಳು

ವಿಧಿ 5  ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದರೆ, ವಾಸಿಸುತ್ತಿದ್ದರೆ ಅಥವಾ ಭಾರತದಲ್ಲಿ ಆ ವ್ಯಕ್ತಿಯ ತಂದೆ ತಾಯಿಗಳು ಹುಟ್ಟಿದ್ದರೆ ಆ ವ್ಯಕ್ತಿಯು ಸ್ವಾಭಾವಿಕವಾಗಿ ಭಾರತದ ಪೌರತ್ವ ಪಡೆಯುತ್ತಾನೆ.

ವಿಧಿ 6 - ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ವ್ಯಕ್ತಿಗಳ ಪೌರತ್ವದ ಬಗ್ಗೆ ತಿಳಿಸುತ್ತದೆ.

ವಿಧಿ 7 - ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಪೌರತ್ವದ ಬಗ್ಗೆ ತಿಳಿಸುತ್ತದೆ.

ವಿಧಿ 8 - ಭಾರತದಿಂದ ಹೊರಗೆ ವಾಸಿಸುತ್ತಿರುವ ಭಾರತೀಯ ನಾಗರಿಕರಲ್ಲದವರ ಪೌರತ್ವದ ಬಗ್ಗೆ ತಿಳಿಸುತ್ತದೆ.

ವಿಧಿ 9 ಸ್ವ ಇಚ್ಚೆಯಿಂದ ಭಾರತದ ಪೌರತ್ವ ತೊರೆದವರು ಭಾರತದ ಪೌರರಲ್ಲ ಎಂಬುದನ್ನು ತಿಳಿಸುತ್ತದೆ.

ವಿಧಿ 10 - ಭಾರತದ ಪೌರರಾಗಲು ಇರಬೇಕಾದ ಅರ್ಹತೆಗಳನ್ನು ನಿರ್ಧರಿಸುವ ಅಧಿಕಾರ ಸಂಸತ್ತಿಗಿರುತ್ತದೆ.

ವಿಧಿ 11  ವ್ಯಕ್ತಿ ಪೌರತ್ವವನ್ನು ಪಡೆಯುವ ಹಾಗೂ ಕಳೆದುಕೊಳ್ಳುವ ಕಾನೂನು ಮತ್ತು ವಿಧಾನಗಳ ಬಗ್ಗೆ ತಿಳಿಸುತ್ತದೆ.

1986, 1992, 2003, 2005 ಮತ್ತು 2019 ರಲ್ಲಿ ಒಟ್ಟು 5 ಬಾರಿ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.

ಪೌರತ್ವ ಪಡೆಯುವ ವಿಧಾನಗಳು

1. ಒಬ್ಬ ವ್ಯಕ್ತಿ 1950 ಜನವರಿ 26 ರ ನಂತರ ಮತ್ತು 1987 ಕ್ಕಿಂತ ಮುಂಚೆಯೇ ಭಾರತದಲ್ಲಿ ಜನನವಾಗಿದ್ದರೆ ಆತನ ತಂದೆ ತಾಯಿ ಯಾವ ದೇಶದವರೇ ಆಗಿದ್ದರೂ ಆತನಿಗೆ ಪೌರತ್ವ ದೊರೆಯುತ್ತದೆ.

2. 1950 ರ ನಂತರ ಭಾರತದ ಹೊರಗೆ ಹುಟ್ಟಿದ ಯಾವುದೇ ವ್ಯಕ್ತಿ ಭಾರತದ ಪೌರತ್ವ ಪಡೆಯಲು ಅರ್ಹ. ಆದರೆ ಅವನು ಭಾರತದಲ್ಲಿ ತನ್ನ ವಂಶದವರನ್ನು ಹೊಂದಿದ್ದರೆ ಮಾತ್ರ.

3. ನೋಂದಣಿ ಮಾಡಿಕೊಳ್ಳುವ ಮೂಲಕ ಪೌರತ್ವ

ವಿದೇಶಿ ಪ್ರಜೆಯು ಭಾರತೀಯ ವ್ಯಕ್ತಿಯನ್ನು ವಿವಾಹವಾಗುವ ಮೂಲಕ, 

ಕಾಮನ್ವೆಲ್ತ್ ದೇಶಗಳ ಪ್ರಜೆಗಳು 

ಅನಿವಾಸಿ ಭಾರತೀಯರು ಅರ್ಜಿ ಸಲ್ಲಿಸುವುದಕ್ಕಿಂತ ಏಳು ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ. 

4. ಸಹಜೀಕೃತ ವಿಧಾನ 

ಭಾರತದ ಯಾವುದಾದರೂ ಒಂದು ಭಾಷೆಯ ಬಗ್ಗೆ ಪಾಂಡಿತ್ಯ ಪಡೆಯುವ ಮೂಲಕ

ಯಾವ ದೇಶದಲ್ಲಿ ಭಾರತದ ಪ್ರಜೆಗಳಿಗೆ ಆ ದೇಶದ ಪೌರರಾಗಲು ಅನುಮತಿ ಇರುತ್ತದೋ ಆ ದೇಶದ ವ್ಯಕ್ತಿಯಾಗಿದ್ದಾರೆ

ಅರ್ಜಿ ಸಲ್ಲಿಸುವ 1 ವರ್ಷದ ಮುಂಚೆ ಭಾರತದಲ್ಲಿ ವಾಸವಾಗಿರಬೇಕು ಅಥವಾ ಭಾರತ ಸರ್ಕಾರದ ಸೇವೆಯಲ್ಲಿರಬೇಕು.

5. ಒಂದು ಭೂ ಪ್ರದೇಶವು ಭಾರತದೊಳಗೆ ವಿಲೀನವಾಗುವ ಮೂಲಕ

ದ್ವಿ ಪೌರತ್ವ

2005 ಜನವರಿ 7 ರಂದು ಎಲ್.ಎಂ ಸಿಂಘ್ವಿ ಆಯೋಗದ ವರದಿಯನ್ನು ಆಧರಿಸಿ ದ್ವಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲಾಯಿತು. 

ಈ ಕಾಯ್ದೆಯನ್ವಯ ವಿದೇಶಿದಲ್ಲಿ ನೆಲಸಿರುವ ಭಾರತೀಯರು ಭಾರತದಲ್ಲಿ ಬಂದ ಎಷ್ಟು ವರ್ಷ ಬೇಕಾದರೂ ಇರಬಹುದು ಮತ್ತು ಇಲ್ಲಿ ಆಸ್ತಿಯನ್ನು ಮಾಡಬಹುದು.  ಆದರೆ ಅವರಿಗೆ ಮತದಾನದ ಹಕ್ಕು ಮತ್ತು ಯಾವುದೇ ಸರ್ಕಾರಿ ನೌಕರಿ ಹೊಂದುವ ಹಕ್ಕಿರುವುದಿಲ್ಲ

ಭಾರತವು 16 ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ದ್ವಿಪೌರತ್ವವನ್ನು ನೀಡಿದೆ.

ಆಸ್ಟ್ರೇಲಿಯಾ, ಅಮೇರಿಕ, ಬ್ರಿಟನ್, ಫ಼ಿನ್ ಲ್ಯಾಂಡ್, ಫ್ರಾನ್ಸ್, ಗ್ರೀಕ್, ಐರ್ ಲೆಂಡ್, ಇಸ್ರೇಲ್, ಇಟಲಿ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್, ಸೈಪ್ರಸ್, ಸ್ವೀಡನ್, ಸ್ವಿಡ್ಜರ್ಲ್ಯಾಂಡ್ 

ಗಾಂಧಿ 1915 ಜನವರಿ 9 ರಂದು ದಕ್ಷಿಣ ಆಫ್ರಿಕಾದಿಂದ  ಭಾರತಕ್ಕೆ ಬಂದ ನೆನಪಿಗೆ ಪ್ರತಿ ವರ್ಷ ಜನವರಿ 9 ರಂದು ಪ್ರವಾಸಿ ಭಾರತೀಯ್ ದಿವಸ್ ಅನ್ನು ಆಚರಿಸಲಾಗುತ್ತದೆ.

ಕಾಮೆಂಟ್‌ಗಳು