ಪೋಸ್ಟ್‌ಗಳು

ಭಾರತೀಯ ಸ್ವಾತಂತ್ರ್ಯ ಹೋರಾಟ

ಇಮೇಜ್
ಭಾರತೀಯ ಸ್ವಾತಂತ್ರ್ಯ ಹೋರಾಟ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (1885) 1857 ರ ಸ್ವಾತಂತ್ರ್ಯ ಸಂಗ್ರಾಮದಂತಹ ಘಟನೆ ಮತ್ತೇ ಮರಕುಳಿಸಬಾರದೆಂದು 1885 ರಲ್ಲಿ ಬ್ರಿಟಿಷ್ ಸರ್ಕಾರವು ಅಲೆನ್ ಆಕ್ಟೇವಿಯನ್ ಹ್ಯೂಮ್ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ಸ್ಥಾಪಿಸಿತು. ಈ ಸಮಯದಲ್ಲಿ ಲಾರ್ಡ್ ಡಫರಿನ್ ವೈಸ್ರಾಯ್ ಆಗಿದ್ದರು.  1885 ಡಿಸೆಂಬರ್ 28 ರಂದು ಮುಂಬೈನ ಗೋಕುಲ್ ದಾಸ್ ತೇಜ್‍ಪಾಲ್ ಸಂಸ್ಕೃತ ವಿದ್ಯಾ ಆವರಣದಲ್ಲಿ ಕಾಂಗ್ರೆಸ್ ಪ್ರಥಮ ಸಭೆ ನಡೆಸಿತು. ಈ ಸಭೆಯಲ್ಲಿ 72 ಜನ ಭಾರತೀಯರು ಭಾಗವಹಿಸಿದ್ದರು. ಈ ಸಭೆಯ ಅಧ್ಯಕ್ಷತೆ ವಹಿಸಿಕೊಂಡವರು ಉಮೇಶ್ ಚಂದ್ರ ಬ್ಯಾನರ್ಜಿ . ಭಾರತದಲ್ಲಿ ಆಡಳಿತದ ಸುಧಾರಣೆ , ಭಾರತೀಯ ಗೃಹ ಕೈಗಾರಿಕೆಗಳ ವಸ್ತುಗಳಿಗೆ ಬೆಲೆ ಮತ್ತು ಬೇಡಿಕೆ ದೊರಕಿಸುವುದು , ಭಾರತೀಯರ ಮೇಲೆ ವಿಧಿಸಿದ ಅತಿಯಾದ ತೆರಿಗೆಗಳ ರದ್ಧು , ಭಾರತದಾಚೆ ಕೆಲಸ ಮಾಡುತ್ತಿರುವ ಕಾರ್ಮಿಕರ ರಕ್ಷಣೆ , ಭಾರತೀಯರಿಗೆ ಕ್ರಮೇಣವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದು ಮುಂತಾದ ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೇಸ್ ಅನ್ನು ಸ್ಥಾಪಿಸಲಾಯಿತು. ಪಟ್ಟಾಭಿ ಸೀತಾರಾಮಯ್ಯ ನವರು ಕಾಂಗ್ರೆಸ್ ಅನ್ನು ಗೂಢತೆಯಲ್ಲಿ ಮುಸುಕಿರುವ ಅಂಶ ಎಂದು ಕರೆದಿದ್ದಾರೆ. ಲಾರ್ಡ್ ಕರ್ಜನ್ ಸಹ   ಕಾಂಗ್ರೆಸ್ಸನ್ನು ಕೊಳಕು ವಸ್ತು ಎಂದಿದ್ದಾರೆ. ಪ್ರಮುಖ ಕಾಂಗ್ರೆಸ್ ಅಧಿವೇಶನಗಳು 1885 - ಮುಂಬೈ (ಮಹಾರಾಷ್ಟ್ರ)...

ಮೈಸೂರು ಸಂಸ್ಥಾನ - ಪ್ರಮುಖ ದಿವಾನರು

ಇಮೇಜ್
 ಮೈಸೂರು ಸಂಸ್ಥಾನ -  ಪ್ರಮುಖ ದಿವಾನರು  (1746-1812) ದಿವಾನ್ ಪೂರ್ಣಯ್ಯ ಮೈಸೂರಿನ ಪ್ರಥಮ ದಿವಾನ ರಾಗಿ ಟೀಪೂ ಮತ್ತು ಹೈದರ್ ಅಲಿ ಕಾಲದಲ್ಲಿ ಸೇವೆ ಸಲ್ಲಿಸಿದವರು. ಮೈಸೂರು ಸಂಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಕಂದಾಚಾರ ಎನ್ನುವ ಪಡೆಯನ್ನು ಸ್ಥಾಪಿಸಿದರು. ಪ್ರತ್ಯೇಕ ನ್ಯಾಯಾಂಗ ಇಲಾಖೆಯನ್ನು ಸ್ಥಾಪಿಸಿದರು. 1801 ರಲ್ಲಿ ಬೆಂಗಳೂರಿನಲ್ಲಿ ಸಂಪಂಗಿ ಕೆರೆ ಯನ್ನು ನಿರ್ಮಿಸಿದರು. 1808 ರಲ್ಲಿ ಮೊದಲ ಬಾರಿಗೆ ಮೈಸೂರು ರಾಜ್ಯದ ನೀಲ ನಕ್ಷೆ ಯನ್ನು ತಯಾರಿಸಲಾಯಿತು. ಸಿ ರಂಗಾಚಾರ್ಲು(1881-1883) ರಾಜ್ಯ ಪುನರ್ದಾನ ದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಧಿಕಾರ ವಹಿಸಿಕೊಂಡ ನಂತರ ಸೇವೆಗೆ ಸೇರಿದ ಮೊದಲ ದಿವಾನ ರು 1881 ಆಗಸ್ಟ್ 25 ರಂದು ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಯನ್ನು ಸ್ಥಾಪಿಸಿದರು.   1881 ಅಕ್ಟೋಬರ್ 7 ರಂದು ಮೊದಲ ಪ್ರಜಾಪ್ರತಿನಿಧಿ ಸಭೆ ನಡೆಯಿತು. ಮೈಸೂರಿನಲ್ಲಿ ಮಹಾರಾಣಿ ಕಾಲೇಜ್ ಆರಂಭಿಸಿದರು. 1881 ರಲ್ಲಿ ಬ್ರಿಟನ್ನಿನ ಟ್ರೈಲರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೋಲಾರ ದಲ್ಲಿ ಚಿನ್ನ ತೆಗೆಯುವ ಗಣಿಗಾರಿಕೆ ಯನ್ನು ಆರಂಭಿಸಿದರು. 1882 ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ರೈಲು ಮಾರ್ಗ ನಿರ್ಮಾಣ ಮಾಡಿಸಿದರು. ಇವರ ಸ್ಮರಣೆಗಾಗಿ ಮೈಸೂರಿನಲ್ಲಿ ರಂಗಾಚಾರ್ಲು ಮೆಮೋರಿಯಲ್ ಹಾಲ್ ಸ್ಥಾಪಿಸಲಾಗಿದೆ. ಕೆ ಶೇಷಾದ್ರಿ ಅಯ್ಯರ್ (1883-1890) ಚಿತ್ರದುರ್ಗ ಜಿಲ...