ಭಾರತದ ಪ್ರಮುಖ ಕ್ರಾಂತಿಗಳು
ಭಾರತದ ಪ್ರಮುಖ ಕ್ರಾಂತಿಗಳು
ಹಸಿರು ಕ್ರಾಂತಿ
ಹಸಿರು ಕ್ರಾಂತಿ ಎಂಬ ಪದವನ್ನು ಮೊದಲಿಗೆ ಬಳಸಿದವನು ಅಮೇರಿಕಾದ ಅಭಿವೃದ್ಧಿ ಏಜೆನ್ಸಿ ಆಡಳಿತಗಾರನಾದ ವಿಲಿಯಮ್ ಎಸ್ ಗಾಡ್.
ನಾರ್ಮನ್ ಬೋರ್ಲಾಗ್ ಮೆಕ್ಸಿಕೋದಲ್ಲಿ ರಾಕ್ ಫೆಲ್ಲರ್ ಫೌಂಡೇಶನ್ ಸಂಸ್ಥೆಯ ಸಹಾಯದಿಂದ ಗೋದಿ ಬೆಳೆಯ ಮೇಲೆ ಸಂಶೋಧನೆ ಕೈಗೊಂಡು ಅತ್ಯಧಿಕ ಇಳುವರಿ ಪಡೆಯುವ ಗೋದಿ ತಳಿಯನ್ನು ಸಂಶೋಧಿಸಿದರು. ಆದ್ದರಿಂದ ಅವರನ್ನು ವಿಶ್ವದ ಹಸಿರು ಕ್ರಾಂತಿಯ ಪಿತಾಮಹ ಎನ್ನುವರು. ಬೋರ್ಲಾಗ್ ಅವರ ಕೃತಿ ನಾರ್ಮನ್ ಬೋರ್ಲಾಗ್ ಆನ್ ವರ್ಡ್ ಹಂಗರ್
ಬೋರ್ಲಾಗ್ ಅವರಿಗೆ 1970 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಹಾಗೂ 2006 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಸ್ವತಃ ಬೋರ್ಲಾಗ್ 1986 ರಿಂದ ವಿಶ್ವ ಆಹಾರ ಪ್ರಶಸ್ತಿ ನೀಡಲು ಪ್ರಾರಂಭಿಸಿದರು. ಇದನ್ನು ಆಹಾರ ಕ್ಷೇತ್ರದ ನೊಬೆಲ್ ಎನ್ನುವರು.
1969 ರಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಹಸಿರು ಕ್ರಾಂತಿಯನ್ನು ಭಾರತದಲ್ಲಿ ಪರಿಚಯಿಸಲಾಯಿತು. ಡಾ. ಎಂ.ಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹಾ ಮತ್ತು ಅರ್ಥಶಾಸ್ತ್ರೀಯ ಪರಿಸರ ಶಾಸ್ತ್ರದ ಪಿತಾಮಹಾ ಎನ್ನುತ್ತಾರೆ. ರಾಕ್ಫೆಲ್ಲರ್ ಫೌಂಡೇಷನ್ ಭಾರತದಲ್ಲಿ ಹಸಿರು ಕ್ರಾಂತಿ ಜಾರಿಯಾಗಲು ಪ್ರಮುಖ ಪಾತ್ರ ವಹಿಸಿತು.
ಸ್ವಾಮಿನಾಥನ್ ಅವರು 1988 ರಲ್ಲಿ ಎಂ.ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸ್ಥಾಪಿಸಿದರು.
ಸ್ವಾಮಿನಾಥನ್ ಅವರ ಪ್ರಮುಖ ಕೃತಿಗಳು
Fifty years of Green Revolution
M.S Swaminathan legend in Science and Beyond
Science and Sustainable Food Security
An Evergreen Revolution
Sustainable Agriculture Towards food Security
Agrobiodiversity and Farmers Rights
In search of Bio happiness
HYVP (High Yielding Variety Programme - ಅಧಿಕ ಇಳುವರಿ ವೈವಿಧ್ಯತಾ ಕಾರ್ಯಕ್ರಮ) ಮತ್ತು IADP (Intensive Agriculture Developement Programme - ಸಾಂದ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ) ಈ ಯೋಜನೆಗಳ ಮೂಲಕ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಹಸಿರು ಕ್ರಾಂತಿಯನ್ನು ಜಾರಿಗೆ ತರಲಾಯಿತು. 1991 ರಲ್ಲಿ ಹೊಸ ಆರ್ಥಿಕ ನೀತಿಯ ಜಾರಿಯಿಂದಾಗಿ 2ನೇ ಹಂತದ ಹಸಿರು ಕ್ರಾಂತಿ ಜಾರಿಗೆ ಬಂದಿತು.
1981 ಅಕ್ಟೊಬರ್ 16 ರಂದು ವಿಶ್ವ ಆಹಾರ ದಿನವನ್ನು ಜಾರಿಗೆ ತರಲಾಯಿತು. ಅಕ್ಟೊಬರ್ 16 ರಂದು ವಿಶ್ವ ಆಹಾರ ದಿನವನ್ನು ಮತ್ತು ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುವರು.
ಶ್ವೇತ ಕ್ರಾಂತಿ (ಕ್ಷೀರ ಕ್ರಾಂತಿ)
ಶ್ವೇತ ಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು. 1970 ರ ದಶಕದಲ್ಲಿ ಹೈನುಗಾರಿಕಾ ಉತ್ಪಾದನೆಗೆ ಪ್ರಾಧಾನ್ಯತೆ ನೀಡಿ ಈ ಕ್ರಾಂತಿಯನ್ನು ತರಲಾಯಿತು.
ವರ್ಗಿಸ್ ಕುರಿಯನ್ ಅವರನ್ನು ಭಾರತದ ಶ್ವೇತಕ್ರಾಂತಿಯ ಪಿತಾಮಹಾ ಮತ್ತು ಮಿಲ್ಕ್ ಮ್ಯಾನ್ ಆಫ್ ಇಂಡಿಯಾ ಎನ್ನುವರು.
ವರ್ಗಿಸ್ ಕುರಿಯನ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ನವೆಂಬರ್ 26 ಅನ್ನು ರಾಷ್ಟೀಯ ಕ್ಷೀರ ದಿನವನ್ನಾಗಿ ಆಚರಿಸುವರು
ಪ್ರತಿ ವರ್ಷ ಜೂನ್ 1 ಅನ್ನು ವಿಶ್ವ ಕ್ಷೀರ ದಿನವನ್ನಾಗಿ ಆಚರಿಸುವರು
ನೀಲಿಕ್ರಾಂತಿ
ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ. ಡಾ. ಅರುಣ್ ಕೃಷ್ಣನ್ ಅವರನ್ನು ನೀಲಿ ಕ್ರಾಂತಿಯ ಪಿತಾಮಹ ಎನ್ನುವರು
ಹಳದಿ ಕ್ರಾಂತಿ
ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ. ಮೊದಲಿಗೆ ಸೂರ್ಯಕಾಂತಿ ಮತ್ತು ಸಾಸಿವೆ ಎಣ್ಣೆಯ ಉತ್ಪಾದನೆಗೆ ಪ್ರಾಧಾನ್ಯತೆ ನೀಡಲಾಯಿತು. ಹಳದಿ ಕ್ರಾಂತಿಯ ಕಾರಣದಿಂದ ಭಾರತವು ಎಣ್ಣೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಸ್ಯಾಮ್ ಪಿತ್ರೋಡ ಅವರನ್ನು ಹಳದಿ ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತದೆ.
ಕಪ್ಪುಕ್ರಾಂತಿ
ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.
ಹೆಚ್ಚಿನ ಕಚ್ಚಾತೈಲ ಉತ್ಪಾದನೆಗಾಗಿ ಈ ಕ್ರಾಂತಿಯನ್ನು ಜಾರಿಗೆ ತಂದಿದ್ದರೂ ಅದರ ಜೊತೆಗೆ ಪೆಟ್ರೋಲ್ ಮತ್ತು ಇತರ ಸಾಂಪ್ರದಾಯಿಕ ತೈಲ ಇಂಧನಗಳಿಗಿಂತ ಪರಿಸರ ಸ್ನೇಹಿಯಾದ ಎಥೆನಾಲ್ ಉತ್ಪಾದನೆಗೂ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.
ಕೆಂಪು ಕ್ರಾಂತಿ
ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು
ವೃತ್ತಕ್ರಾಂತಿ
ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.
ಗುಲಾಬಿ ಕ್ರಾಂತಿ
ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ. ದುರ್ಗೇಶ್ ಪಟೇಲ್ ಅವರನ್ನು ಗುಲಾಬಿ ಕ್ರಾಂತಿಯ ಪಿತಾಮಹಾ ಎನ್ನಲಾಗಿದೆ.
ಕಂದು ಕ್ರಾಂತಿ
ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ. ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಈ ಕ್ರಾಂತಿಯ ಇತರ ಪ್ರಮುಖ ಉದ್ದೇಶಗಳು
ಹೀರಾಲಾಲ್ ಚೌಧರಿಯವರನ್ನು ಕಂದು ಕ್ರಾಂತಿಯ ಪಿತಾಮಹಾ ಎನ್ನುವರು.
ಸ್ವರ್ಣ ಕ್ರಾಂತಿ
ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು. ಈ ಕ್ರಾಂತಿಯ ಭಾಗವಾಗಿ ಭಾರತ ಸರ್ಕಾರ 2005-06 ರಲ್ಲಿ ರಾಷ್ಟೀಯ ತೋಟಗಾರಿಕಾ ಅಭಿಯಾನವನ್ನು ಆರಂಭಿಸಿತು
ನಿರ್ಪಾಕ್ ಟ್ಯೂಟೇಜ್ ಅವರನ್ನು ಭಾರತದ ಸ್ವರ್ಣ ಕ್ರಾಂತಿಯ ಪಿತಾಮಹ ಎನ್ನುವರು
ಸ್ವರ್ಣನಾರು ಕ್ರಾಂತಿ
ಚಿನ್ನದ ನಾರು ಕ್ರಾಂತಿಯು ಸೆಣಬು
ಸೆಣಬಿನ ಕೇಂದ್ರ ಕಚೇರಿಯು ಪ.ಬಂಗಾಳದ ಬ್ಯಾರಕ್ ಪುರ್ ನಲ್ಲಿದೆ. ಭಾರತವು ಇಂದು ಸೆಣಬಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
2009 ಅನ್ನು ಅಂತರರಾಷ್ಟ್ರೀಯ ಸೆಣಬು ವರ್ಷ ಎಂದು ಘೋಷಿಸಲಾಗಿದೆ.
ಬೂದು ಕ್ರಾಂತಿ
ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
ರಜತ ಕ್ರಾಂತಿ
ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು. ಇಂದಿರಾಗಾಂದಿಯವರನ್ನು ರಜತ ಕ್ರಾಂತಿಯ ಪಿತಾಮಹಾ ಎನ್ನುವರು
ಬೆಳ್ಳಿನಾರು (ರಜತನಾರು) ಕ್ರಾಂತಿ
ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
ಪ್ರತ್ಯುತ್ತರಅಳಿಸಿಅದ್ಮುಂತವಾದ ಮಾಹಿತಿ 🙏ಧನ್ಯವಾದಗಳು sir
ನಿಮ್ಮ ಮಾಹಿತಿಗಳು ಸೂಪರ್ ಸರ್
ಪ್ರತ್ಯುತ್ತರಅಳಿಸಿ