ಇಂಧನ ಖನಿಜಗಳು
ಇಂಧನ
ಖನಿಜಗಳು
ಪೆಟ್ರೋಲಿಯಂ
ಪೆಟ್ರೋಲಿಯಂ ಶಿಲೆಗಳ ಮಧ್ಯದಲ್ಲಿ ಉಳಿದುಕೊಂಡಿರುವ ಅಪಾರ ಪ್ರಮಾಣದ ಪೆಟ್ರೋಲಿಯಂ ಭೂಮಿಯ ಸ್ಥರಭಂಗ ಮುಂತಾದ ಕಾರಣಗಳಿಂದ ಒಂದೆಡೆ ಒಟ್ಟುಗೂಡಿ ಸರೋವರದಂತಾಗುತ್ತದೆ. ಇದನ್ನು ಪಿಚ್ ಸರೋವರ ಎನ್ನುವರು.
ಗುರುತ್ವ ಮಾಪಕ ಮತ್ತು ಕಾಂತತ್ವ ಮಾಪಕ ವಿಧಾನಗಳಿಂದ ಪೆಟ್ರೋಲಿಯಂ ನಿಕ್ಷೇಪಗಳನ್ನು ಪತ್ತೆಹಚ್ಚಬಹುದು.
ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ
ಎನ್ನಲಾಗುತ್ತದೆ. ಕಚ್ಚಾರೂಪದ ಪೆಟ್ರೋಲಿಯಂನಲ್ಲಿ ಬೇರೆ ಬೇರೆ ಎಣ್ಣೆಗಳು ಮಿಶ್ರಣವಾಗಿರುತ್ತವೆ.
ಇವುಗಳನ್ನು ಬೇರ್ಪಡಿಸಲು ಆಂಶಿಕಾಸವನ ಮತ್ತು ಅಣುವಿಕ ರಚನೆ ವಿಧಾನಗಳನ್ನು ಬಳಸುವರು.
ಆಂಶಿಕಾಸವನ ಕ್ರಿಯೆಯಲ್ಲಿ ಪೆಟ್ರೋಲಿಯಮ್ಮಿನಲ್ಲಿ ಈಗಾಗಲೇ ಇರುವ ಪೆಟ್ರೋಲನ್ನು ಬೇರ್ಪಡಿಸಿದರೆ, ಆಣವಿಕ ರಚನೆ ವಿಧಾನದಲ್ಲಿ ಪೆಟ್ರೋಲನ್ನು ಒಳಗೊಂಡಿರದ ಪೆಟ್ರೋಲಿಯಮ್ ಉತ್ಪನ್ನಗಳಿಂದ ರಾಸಾಯನಿಕ ಕ್ರಿಯೆಯ ಮೂಲಕ ಪೆಟ್ರೋಲನ್ನು ತಯಾರಿಸುತ್ತಾರೆ.
ಭಾರತದಲ್ಲಿ ಅಸ್ಸಾಂ ನ ದಿಗ್ಬೋಯ್ ಎಂಬಲ್ಲಿ
ಮೊದಲಬಾರಿಗೆ ಪೆಟ್ರೋಲಿಯಂ ನಿಕ್ಷೇಪವನ್ನು ಶೋಧಿಸಲಾಯಿತು.
ಮೊದಲ ತೈಲ ಬಾವಿಯನ್ನು ಗುಜರಾತಿನ ಅಂಕಲೇಶ್ವರ
ಎಂಬಲ್ಲಿ ಕೊರೆಯಲಾಯಿತು.
ರಾಜಸ್ತಾನ ರಾಜ್ಯವು ಅತಿ ಹೆಚ್ಚು ಪೆಟ್ರೋಲಿಯಂ
ಉತ್ಪಾದಿಸುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಗುಜರಾತ್, ಅಸ್ಸಾಂ
ಮತ್ತು ಮಹಾರಾಷ್ಟ್ರಗಳಿವೆ.
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಪೆಟ್ರೋಲಿಯಂ
ಸಂಶೋಧನಾ ಕೇಂದ್ರವಿದೆ. ಈ ಸಂಸ್ಥೆಯನ್ನು 1960 ರಲ್ಲಿ ಸ್ಥಾಪಿಸಲಾಯಿತು.
1959 ರಲ್ಲಿ ಭಾರತದ ತೈಲ ಮತ್ತು ನೈಸರ್ಗಿಕ
ಅನಿಲ ಮಂಡಳಿ (ONGC) ಅಸ್ಥಿತ್ವಕ್ಕೆ ಬಂದಿತು. ಇದರ ಕೇಂದ್ರ ಕಚೇರಿ
ದೆಹಲಿಯಲ್ಲಿದೆ.
ತೈಲ
ಶುದ್ಧೀಕರಣ ಕೇಂದ್ರಗಳು
ಅಸ್ಸಾಂ - ದಿಗ್ಬಾಯ್, ಗೌಹಾತಿ, ಬೋಂಗೈಗಾನ್, ನುಮಾಲಿಘರ್
ಮಹಾರಾಷ್ಟ್ರ – ಮುಂಬೈ, ಟ್ರಾಂಬೆ
ಗುಜರಾತ್ – ಜಾಮ್ ನಗರ್, ಕೊಯಾಲಿ, ಅಂಕಲೇಶ್ವರ, ಕ್ಯಾಂಬೆ, ಕಲೋಲ್, ಮಥುರಾ
ಆಂಧ್ರಪ್ರದೇಶ – ವಿಶಾಖಪಟ್ಟಣ
ಕೇರಳ – ಕೊಚ್ಚಿ
ಕರ್ನಾಟಕ – ಮಂಗಳೂರು
ಹಿಮಾಚಲ ಪ್ರದೇಶ – ಮನಾಲಿ
ಹರ್ಯಾಣ - ಪಾಣಿಪತ್
ಪಶ್ಚಿಮ ಬಂಗಾಳ - ಹಾಲ್ದಿಯ
ತಮಿಳುನಾಡು - ನಾರಿಮನಮ್
ಪ್ರಪಂಚ
OPEC (ಆರ್ಗನೈಸೇಷನ್ ಆಫ್ ಪೆಟ್ರೋಲಿಯಂ ಎಕ್ಸ್ಪೋರ್ಟ್ ಕಂಟ್ರೀಸ್) ಎಂಬುದು ಅತ್ಯಧಿಕ ಪೆಟ್ರೋಲ್ ಅನ್ನು ರಫ್ತು ಮಾಡುವ ದೇಶಗಳ ಒಕ್ಕೂಟ. ಇದು 1965 ರಲ್ಲಿ ಸ್ಥಾಪನೆಯಾಯಿತು. ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದಲ್ಲಿ ಇದರ ಕೇಂದ್ರ ಕಚೇರಿಯಿದೆ. ಈ ಒಕ್ಕೂಟದಲ್ಲಿ 15 ದೇಶಗಳಿವೆ.
ಅಲ್ಜಿರಿಯಾ, ಅಂಗೋಲ, ಕಾಂಗೋ, ಈಕ್ವೆಡಾರ್, ಈಕ್ವೆಟೋರಿಯಲ್ ಗಿನಿಯ, ಗ್ಯಾಬೊನ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ವೆನೆಜುವೆಲಾ
ಅಧಿಕ ತೈಲ ನಿಕ್ಷೇಪ ಹೊಂದಿರುವ ದೇಶಗಳು
ಸೌದಿ ಅರೇಬಿಯಾ – ಅಲ್ ಶಬಾ, ಅಲ್
ಘವಾರ್,
ಖುರೇಯ್ಸ್, ಅಬ್ಖಾಯಿಖ್, ಮನೀಫಾ
ವೆನಿಜುವೆಲಾ - ಬೊಯಾಕ, ಜುನಿನ್, ಅಯಕುಚೊ, ಕ್ಯಾರಬೋಬೊ
ಯು.ಎಸ್.ಎ – ಟೆಕ್ಸಾಸ್, ಅಲಾಸ್ಕಾ, ಕ್ಯಾಲಿಫೋರ್ನಿಯಾ, ಲೂಸಿಯಾನಾ, ಓಕ್ಲಾಹಾಮಾ
ಕೆನಡಾ – ಅಲ್ಬರ್ಟಾ, ಸಸ್ಕಾಚೆವಾನ್, ನ್ಯೂಫೌಂಡ್
ಲ್ಯಾಂಡ್,
ಲ್ಯಾಬ್ರಡಾರ್
ರಷ್ಯಾ - ಪಶ್ಚಿಮ ಸರ್ಬಿಯಾ, ಆರ್ಕಟಿಕ್
ಕರಾವಳಿ ತೀರ
ಇರಾನ್ – ಅಫಿಜಾಂ, ನಾಫ್ಟ್
ಸಾಫಿದ್,
ಲಾಲಿ
ಕುವೈತ್ - ಬರ್ಗಾನ್, ಅಹ್ಮದಿ, ಮಾಗ್ವ
ಇರಾಕ್ – ಕಿರ್ಕುಕ್, ರುಮಾಲಿಯ, ಜುಬೈರ್, ಬಾನ್ಹೆ, ಐನ್
ಜಲಾಹ್
ನೈಸರ್ಗಿಕ
ಅನಿಲ
ಭೂಮಿಯ ಒಳಗೆ ಪೆಟ್ರೋಲಿಯಂನೊಂದಿಗೆ ದೊರೆಯುವ
ಅನಿಲ ರೂಪದ ಹೈಡ್ರೋಕಾರ್ಬನ್ ವಸ್ತುವೇ ನೈಸರ್ಗಿಕ ಅನಿಲ. ಇದು ಪೆಟ್ರೋಲಿಯಂನ ಮೇಲೆ ತೇಲುತ್ತಾ
ಇರುತ್ತದೆ.
ಈ ಅನಿಲವು ಸಹ ಪೆಟ್ರೋಲಿಯಂನಂತೆ ಮುಖ್ಯವಾಗಿ
ಹೈಡ್ರೋಜನ್ (ಜಲಜನಕ) ಮತ್ತು ಇಂಗಾಲಗಳಿಂದಾಗಿದೆ. ನೈಸರ್ಗಿಕ ಅನಿಲವು ನಮಗೆ ಮೀಥೇನ್, ಈಥೇನ್, ಬ್ಯೂಟೇನ್
ಮತ್ತು ಪ್ರೊಪೇನ್ ಗಳಂತಹ ಅನಿಲಗಳ ರೂಪದಲ್ಲಿ ದೊರೆಯುತ್ತದೆ.
ಭಾರತದ ಕರಾವಳಿ ತೀರದಲ್ಲಿ ನೈಸರ್ಗಿಕ ಅನಿಲವು
ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದು ಪೂರ್ವ ಕರಾವಳಿಗಿಂತಲೂ ಪಶ್ಚಿಮ ಕರಾವಳಿಯಲ್ಲಿ ಅತಿ
ಹೆಚ್ಚಿನ ನೈಸರ್ಗಿಕ ಅನಿಲ ಕಂಡುಬರುತ್ತದೆ.
ಅಸ್ಸಾಂ ಅತಿ ಹೆಚ್ಚಿನ ನೈಸರ್ಗಿಕ ಅನಿಲ
ಹೊಂದಿದ್ದು ನಂತರದ ಸ್ಥಾನದಲ್ಲಿ ಗುಜರಾತ್, ಮಹಾರಾಷ್ಟ್ರ
ಮತ್ತು ಆಂಧ್ರಪ್ರದೇಶ ರಾಜ್ಯಗಳಿವೆ.
ಪ್ರಪಂಚ
ಅಮೇರಿಕಾ (ಅತಿ ಹೆಚ್ಚಿನ ನೈಸರ್ಗಿಕ ಅನಿಲ
ಉತ್ಪಾದಿಸುವ ದೇಶ) –
ಟೆಕ್ಸಾಸ್, ಕಾನ್ಸಸ್, ಲೂಸಿಯಾನ, ಓಕ್ಲಹಾಮ, ನ್ಯೂ
ಮೆಕ್ಸಿಕೊ,
ಕ್ಯಾಲಿಫೋರ್ನಿಯಾ
ರಷ್ಯಾ - (ಅತಿ ಹೆಚ್ಚಿನ ನೈಸರ್ಗಿಕ ಅನಿಲ
ನಿಕ್ಷೇಪ ಹೊಂದಿರುವ ದೇಶ) –
ಮೆಡ್
ವೆಜಿ,
ಓರೆನ್
ಬರ್ಗ್,
ತೈಯುಮೆನ್, ಓಬ್ಲಾಸ್ಟ್, ಯುರೆನ್ಗೋಯ್
ಕೆನಡಾ - ಬ್ರಿಟನ್ ಕೊಲಂಬಿಯಾ, ಮಾನಿಟೋಬ, ಮೆಕೆಂಜಿ
ಕಲ್ಲಿದ್ದಲು
ಭೂಮಿಯ ಮೇಲ್ಪದರದಲ್ಲಿ ಪೀಟ್ ಅದರ ಕೆಳಗೆ ಲಿಗ್ನೈಟ್ ನಂತರ ಬಿಟುಮಿನಸ್ ಕೊನೆಯದಾಗಿ ಅತ್ಯಂತ ಕೆಳಗೆ ಆಂತ್ರಸೈಟ್ ಕಲ್ಲಿದ್ದಲು ರೂಪುಗೊಂಡಿರುತ್ತವೆ
ಕಲ್ಲಿದ್ದಲ್ಲನ್ನು ಕಪ್ಪುವಜ್ರವೆನ್ನುವರು, ಇದು
ಪದರು ಶಿಲೆಗಳಲ್ಲಿ ಮಾತ್ರ ದೊರೆಯುತ್ತದೆ. ಸಾಮಾನ್ಯವಾಗಿ ಇದರ ಬಣ್ಣ ಹಳದಿ ಅಥವಾ ಕಪ್ಪು
ಇರುತ್ತದೆ.
ಗೋಂಡ್ವಾನಾ ಯುಗದಲ್ಲಿದ್ದ ಸಸ್ಯಪ್ರಬೇಧ ಭೂಮಿಯ
ಒಳಗೆ ಹೂತುಹೋಗಿ ಭೂಮಿಯ ಒತ್ತಡ ಮತ್ತು ರಾಸಾಯನಿಕ ಕ್ರಿಯೆಗಳಿಂದ ಕಲ್ಲಿದ್ದಲಾಗಿ ಮಾರ್ಪಟ್ಟಿತು.
ಭಾರತದ ದಾಮೋದರ ನದಿ ಕಣಿವೆಯಲ್ಲಿ ಕಲ್ಲಿದ್ದಲು ಹೆಚ್ಚಿನ ಪ್ರಮಾಣದಲ್ಲಿದೆ. ಛೋಟಾನಾಗಪುರ್ ಪ್ರಸ್ಥಭೂಮಿ ಎಂತಲೂ ಹೆಸರು ಪಡೆದ ಈ ಪ್ರದೇಶವನ್ನು ಭಾರತದ ರ್ಹೂರ್ ಎನ್ನುವರು.
ಝಾರ್ಖಾಂಡ್ (ಅತಿ ಹೆಚ್ಚಿನ ಕಲ್ಲಿದ್ದಿಲಿನ
ನಿಕ್ಷೇಪ ಮತ್ತು ಉತ್ಪಾದನೆ) –
ಝರಿಯಾ, ಬೊಕಾರೊ, ಗಿರಿಧ್, ಕರಣ್‍ಪುರ್, ಔರಂಗಾ, ಹುತೂರ್
ಒಡಿಶಾ – ಚಂಡಿಪಾದ, ಮಚ್ಚಕಾಟ, ರಾಧಿಕಾಪುರ್, ಬ್ರಾಹ್ಮಣ್‍ಬಿಲ್, ಕರ್ದಾಬಹಲ್, ಕುರ್ಲೋಯಿ, ಪುಲ್‍ಜ್ಹಾರಿ
ಛತ್ತೀಸ್‍ಘರ್ – ರಾಯ್‍ಘರ್, ಸುರ್ಗುಜಾ, ಕೊರಿಯಾ, ಕೊರ್ಬಾ
ಪಶ್ಚಿಮ ಬಂಗಾಳ – ರಾಣಿಗಂಜ್, ಬರ್ಧ್‍ಮನ್, ಡಾರ್ಜಿಲಿಂಗ್, ಬಂಕೂರ, ಜಲ್ಪೈಗಿರಿ, ಪುರ್ಲಿಯಾ
ಮಧ್ಯಪ್ರದೇಶ - ಸಿಂಗ್ರೌಲಿ, ಮುಹ್ಪಾನಿ, ಸಾತ್ಪುರ, ಪೆಂಚ್
ಕನ್ಹನ್,
ಸೋಹಾಗ್ಪುರ್
ಪ್ರಪಂಚ
ಚೀನಾ (ಕಲ್ಲಿದ್ದಿಲಿನ ನಿಕ್ಷೇಪ ಮತ್ತು
ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ) - ಹೊನಾನ್, ಸಿಕಿಯಾಂಗ್, ಶಾನ್ಸಿ, ಶೆನ್ಸಿ, ಹೂಪಿ, ಶಾಂಬುಂಗ್, ಕಾನ್ಸು
ಭಾರತ – ಝಾರ್ಖಾಂಡ್, ಒಡಿಶಾ, ಛತ್ತೀಸ್‍ಘರ್, ಪ.ಬಂಗಾಳ, ಮಧ್ಯಪ್ರದೇಶ
ಯು.ಎಸ್.ಎ - ಪೆನ್ಸಿಲ್ವೇನಿಯಾ, ಕೆಂಟಕಿ, ವರ್ಜೀನಿಯಾ, ಅಲಬಾಮ, ಅರ್ಕಾನ್ಸಾಸ್, ಮಿಸ್ಸೌರಿ, ಓಕ್ಲಾಹಾಮಾ, ನ್ಯೂ
ಮೆಕ್ಸಿಕೋ,
ಡಕೋಟಾ, ಕೊಲರಾಡೊ, ವರ್ಜಿನಿಯಾ, ಕ್ಯಾಲಿಫೋರ್ನಿಯಾ, ವಾಷಿಂಗ್‍ಟನ್
ಇಂಡೋನೇಷಿಯಾ - ಸುಮಾತ್ರಾ, ಕಾಲಿಮಂಟನ್
ರಷ್ಯಾ – ಕುಜೆನೆಟ್ಸ್, ಮಾಸ್ಕೋ, ಯೂರಲ್ಸ್, ಲೀನಾ, ಸಕಾಲಿನ್, ಯೂಕುಟ್ಸ್, ಸೈಬೀರಿಯಾ
ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನೆಯಲ್ಲಿ, ಲೋಹಗಳ ಶುದ್ದೀಕರಣ ಅದರಲ್ಲೂ ವಿಶೇಷವಾಗಿ ಉಕ್ಕಿನ ತಯಾರಿಕೆಯಲ್ಲಿ, ಸಿಮೆಂಟ್
ತಯಾರಿಕೆಯಲ್ಲಿ ಮತ್ತು ರಾಸಾಯನಿಕ
ಕ್ರಿಯೆಗಳಲ್ಲಿ ಬಳಸುವರು
ಕಲ್ಲಿದ್ದಿಲನ
ಪ್ರಕಾರಗಳು
ಆಂತ್ರಸೈಟ್
ಉತ್ತಮ ದರ್ಜೆಯ ಕಲ್ಲಿದ್ದಿಲಾದ ಇದರಲ್ಲಿ 80% -
95% ವರೆಗೆ ಇಂಗಾಲದ ಅಂಶವಿರುತ್ತದೆ. ಕಪ್ಪು ಬಣ್ಣದಲ್ಲಿದ್ದು ಬಿರುಸಾಗಿರುವ ಇದು ಕಡಿಮೆ ಹೊಗೆ
ಮತ್ತು ಹೆಚ್ಚಿನ ಶಾಖ ನೀಡುತ್ತದೆ. ಹಾಗಾಗಿ ಇದನ್ನು ಕಿಟ್ ಕಲ್ಲಿದ್ದಲು/ಕೋಕಿಂಗ್ ಕಲ್ಲಿದ್ದಲು
ಎನ್ನುವರು. ಈ ಕಲ್ಲಿದ್ದಲು ಭಾರತ ಮತ್ತು ಪ್ರಪಂಚದಲ್ಲಿ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ.
ಬಿಟುಮಿನಸ್
ಇದು ಸಹ ಬಿರುಸಾದ ಕಪ್ಪುಬಣ್ಣದ
ಕಲ್ಲಿದ್ದಲಾಗಿದ್ದು 60% - 80% ಇಂಗಾಲವನ್ನು ಹೊಂದಿರುತ್ತದೆ. ಭಾರತದಲ್ಲಿ ಮಾತ್ರವಲ್ಲದೆ
ಪ್ರಪಂಚದಾದ್ಯಂತ ಈ ಕಲ್ಲಿದ್ದಲು ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.
ಲಿಗ್ನೈಟ್
ಬೂದು ಅಥವಾ ಕಂದು ಬಣ್ಣದ ಮೃದುವಾದ ಗುಣ
ಹೊಂದಿರುವ ಇದು 40% - 60% ಇಂಗಾಲವನ್ನು ಹೊಂದಿದೆ. ಕಡಿಮೆ ಪ್ರಮಾಣದ ಇಂಗಾಲವನ್ನು ಹೊಂದಿರುವ
ಕಾರಣ ಹೆಚ್ಚಿನ ಹೊಗೆ ಮತ್ತು ಮಧ್ಯಮ ಪ್ರಮಾಣದ ಶಾಖವನ್ನು ನೀಡುತ್ತದೆ.
ಪ್ರಪಂಚದಲ್ಲಿ 15% ಪ್ರಮಾಣ ಹೊಂದಿರುವ ಇದನ್ನು
ಹೆಚ್ಚಾಗಿ ಕೃತಕ ಗೊಬ್ಬರ, ಕೃತಕ ಎಣ್ಣೆ ಮತ್ತು ಕೈಗಾರಿಕೆಗಳಲ್ಲಿ
ಶಾಖೋತ್ಪತ್ತಿಗಾಗಿ ಬಳಸಲಾಗುತ್ತದೆ.
ಪೀಟ್
40% ಕಿಂತಲೂ ಕಡಿಮೆ ಪ್ರಮಾಣದ ಇಂಗಾಲವನ್ನು
ಹೊಂದಿರುವ ಇದನ್ನು ಅಮೋನಿಯ ಹಾಗೂ ಟಾರ್ ಗಳಲ್ಲಿ ಬಳಸುವರು.
ಪರಮಾಣು
ಖನಿಜಗಳು
ವಿದ್ಯುತ್ ಆಧಾರಿತ ರಿಯಾಕ್ಟರ್ ಗಳಲ್ಲಿ ಕೆಲವು
ಪರಮಾಣುಗಳನ್ನು ನಿಯಂತ್ರಿತ ಅಣು ವಿಕಿರಣ ಕ್ರಿಯೆಯಿಂದ ಅಣು ವಿದಳನ ಕ್ರಿಯೆಗೆ ಒಳಪಡಿಸಿದಾಗ ಆ
ಪರಮಾಣುಗಳು ನೀರನ್ನು ಬಿಸಿ ಮಾಡಿ ಹಬೆಯನ್ನು ಉಂಟುಮಾಡಿ ವಿದ್ಯುತ್ ಉತ್ಪಾದಿಸುತ್ತವೆ.
ವಿಕಿರಣಶೀಲ ಸಾಮರ್ಥ್ಯವಿರುವ ಯುರೇನಿಯಂ, ಥೋರಿಯಂ, ಬೆರಿಲಿಯಂ, ಪ್ಲುಟೋನಿಯಂ, ಕ್ಯೂರಿಯಂ
ಮುಂತಾದ ಪರಮಾಣುಗಳು ಪರಮಾಣು ಆಧಾರಿತ ವಿದ್ಯುತ್ ಉತ್ಪಾದನೆಯಲ್ಲಿ ಬಳಕೆಯಾಗುವ ಧಾತುಗಳಾಗಿವೆ.
ಭಾರತ
ಯುರೇನಿಯಂ - ಸಿಂಗಭೂಮ್ (ಝಾರ್ಖಾಂಡ್), ಆಂಧ್ರಪ್ರದೇಶ
ಥೋರಿಯಂ – ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ
ಮತ್ತು ಕೇರಳ ರಾಜ್ಯಗಳ ಕರಾವಳಿ ತೀರ
ಬೆರಿಲಿಯಂ – ಆಂಧ್ರಪ್ರದೇಶ, ರಾಜಸ್ತಾನ
ಮತ್ತು ಬಿಹಾರ
ಪ್ರಪಂಚ
ಯುರೇನಿಯಂ
ಆಸ್ಟ್ರೇಲಿಯಾ – ಒಲಿಂಪಿಕ್ ಡ್ಯಾಂ, ಬೇವರ್ಲಿ, ಹನಿಮೂನ್, ರೇಂಜರ್, ಜಬಿಲುಕಾ, ಯೀಲಿರ್ರಿ
ಕಝಕಸ್ತಾನ್ – ಚು ಸರೈಸು, ಅಸ್ತಾನಾ, ಸಿರ್ದಾರ್ಯ, ಅಲ್ಮಟಿ, ಕ್ಯಾಸ್ಪಿಯನ್, ಬಾಲ್ಖಾಶ್,
ಕೆನಡಾ – ಸಸ್ಕಾಚೆವಾನ್, ನುನಾವಾಟ್, ಒಂಟಾರಿಯೋ, ಕ್ಯೂಬೆಕ್
ರಷ್ಯಾ – ಯೂರಲ್ಸ್, ಸೈಬೀರಿಯಾ
ಥೋರಿಯಂ
ಭಾರತ – ಥೋರಿಯಂ ನಿಕ್ಷೇಪದಲ್ಲಿ ಮೊದಲ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ – ಮುರ್ರೆ ಜಲಾಶಯದ ವಿಕ್ಟೋರಿಯಾ ಮತ್ತು ನ್ಯೂ
ಸೌತ್ ವೇಲ್ಸ್, ಯೂಕ್ಲ, ಪರ್ತ್
ಬ್ರೆಜಿಲ್ - ಪ್ರಾದೊ, ಬ್ರಾಹಿಯಾ
ರಷ್ಯಾ – ಮುರ್ಮಾನ್ಸ್ಕ್ ಒಬ್ಲಾಸ್ಟ್
ಬೆರಿಲಿಯಂ
ಯು.ಎಸ್.ಎ – ಉಟಾಹ್
ಚೀನಾ – ಕ್ಸಿನ್ ಜಿಯಾಂಗ್
ಪ್ಲುಟೋನಿಯಂ
ಯು.ಎಸ್.ಎ, ರಷ್ಯಾ, ಫ್ರಾನ್ಸ್
ಅತಿ ಹೆಚ್ಚಿನ ಪ್ಲುಟೋನಿಯಂ ನಿಕ್ಷೇಪ ಹೊಂದಿರುವ ದೇಶಗಳಾಗಿವೆ.






ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ