ಹೃದಯ ಮತ್ತು ರಕ್ತಪರಿಚಲನೆ
ಹೃದಯ
ಮತ್ತು ರಕ್ತಪರಿಚಲನೆ
ಸಾಮಾನ್ಯವಾಗಿ ಹೃದಯವು 300 ಗ್ರಾಂ ತೂಕವಿರುತ್ತದೆ. ಇದರಲ್ಲಿ 4 ಕೋಣೆಗಳಿದ್ದು ಅವುಗಳಲ್ಲಿ 2 ಹೃತ್ಕಕ್ಷಿಗಳು ಮತ್ತು 2 ಹೃತ್ಕರ್ಣಗಳಿರುತ್ತವೆ. ಹೃತ್ಕಕ್ಷಿಗಳು ಹೃದಯದ ಕೆಳಭಾಗದಲ್ಲಿದ್ದರೆ ಹೃತ್ಕರ್ಣಗಳು ಹೃದಯದ ಮೇಲ್ಭಾಗದಲ್ಲಿವೆ.
ಹೃದಯದ ಬಲ ಹೃತ್ಕರ್ಣದಲ್ಲಿರುವ
ಸೈನೋ ಆಟ್ರಿಯಲ್ ನೋಡ್ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಇದನ್ನು ಪೇಸ್ ಮೇಕರ್
ಎಂದು ಕರೆಯುವರು. ಈ ವಿದ್ಯುತ್ ತರಂಗಗಳನ್ನಾಧರಿಸಿ ಎಲೆಕ್ಟ್ರೋ ಕಾರ್ಡಿಯಾಗ್ರಫಿ (ಇ.ಸಿ.ಜಿ)
ಮಾಡಲಾಗುತ್ತದೆ.
ಹೃದಯದ ಬಲ ಹೃತ್ಕರ್ಣ ಮತ್ತು ಬಲ ಹೃತ್ಕಕ್ಷಿಯ
ಮಧ್ಯೆ ತ್ರಿದಳ ಕವಾಟವಿರುತ್ತದೆ. ಹಾಗೆಯೇ ಎಡ ಹೃತ್ಕರ್ಣ ಮತ್ತು ಎಡ ಹೃತ್ಕಕ್ಷಿಯ ಮಧ್ಯೆ ದ್ವಿದಳ
ಕವಾಟವಿರುತ್ತದೆ.
ಹೃದಯದಿಂದ ರಕ್ತ ಹೊರಹೋದಾಗ ಹೃದಯದ ಕೋಣೆಗಳು
ಸಂಕುಚಿತಗೊಂಡು ಅದನ್ನು ಸಿಸ್ಟೋಲ್ ಎನ್ನುವರು. ಹೃದಯದೊಳಕ್ಕೆ ರಕ್ತ ಬಂದು ಕೋಣೆಗಳು
ವ್ಯಾಕೋಚನಗೊಂಡರೆ ಅದನ್ನು ಡಯಾಸ್ಟೋಲ್ ಎನ್ನುವರು. ಒಂದು ಸಿಸ್ಟೋಲ್ ಮತ್ತು ಡಯಾಸ್ಟೋಲ್ ಸೇರಿ
ಒಂದು ಹೃದಯದ ಬಡಿತವಾಗುತ್ತದೆ.
ಹೃದಯ ಒಂದು ಬಾರಿ ಹೊಡೆದುಕೊಂಡು ಅದರಿಂದ
ಹೊರಬರುವ ರಕ್ತದ ಪ್ರಮಾಣವನ್ನು ಒಂದು ಸ್ಟ್ರೋಕ್ ವ್ಯಾಲ್ಯೂಂ ಎನ್ನುವರು. ಒಂದು ಸ್ಟ್ರೋಕ್ ವಾಲ್ಯೂಂ
ನಲ್ಲಿ ರಕ್ತದ ಪ್ರಮಾಣವು 70 ಮಿ.ಲೀ ಇರುತ್ತದೆ. ಹೃದಯ 72
ಬಾರಿ ಹೊಡೆದುಕೊಂಡಾಗ ಹೊರಬರುವ ರಕ್ತದ ಪ್ರಮಾಣವನ್ನು ಕಾರ್ಡಿಯಾಕ್ ಔಟ್ಪುಟ್ ಎನ್ನುವರು. ಒಂದು
ಔಟ್ಪುಟ್ ಕಾರ್ಡಿಯಾಕ್ ನ ಪ್ರಮಾಣ ಸುಮಾರು 5040
ಮಿ.ಲೀ ಇರುತ್ತದೆ.
ರಕ್ತ ಪರಿಚಲನೆಯಲ್ಲಿ ಆಮ್ಲಜನಕ ರಹಿತ ಮತ್ತು ಇಂಗಾಲದ ಡೈ ಆಕ್ಸೈಡ್ ಸಹಿತ ರಕ್ತವು ಕರೋನರಿ ಅಭಿಧಮನಿ (ಕರೋನರಿ ಸೈನಸ್) ಮೂಲಕ ದೇಹದ ಇತರ ಭಾಗಗಳಿಂದ ಹರಿದು ಹೃದಯದ ಬಲ ಅಪಧಮನಿಯನ್ನು ಪ್ರವೇಶಿಸುತ್ತದೆ. ಹೃದಯದ ಮೂಲಕ ಶ್ವಾಸಕೋಶಗಳನ್ನು ಪ್ರವೇಶಿಸಿ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸಿ ಅಲ್ಲಿಂದ ಆಮ್ಲಜನಕವನ್ನು ಪಡೆದ ರಕ್ತವು ಮರಳಿ ಹೃದಯಕ್ಕೆ ಪ್ರವೇಶಿಸುತ್ತದೆ. ನಂತರ ಹೃದಯದ ಎಡ ಮಹಾಪಧಮನಿಯ ಮುಖಾ0ತರ ಆಮ್ಲಜನಕ ಸಹಿತ ರಕ್ತವು ದೇಹದ ಎಲ್ಲಾ ಭಾಗಗಳಿಗೂ ಸಾಗಿಸಲ್ಪಡುತ್ತದೆ.
ಹಿಮೋಸಯನಿನ್ ಎಂಬ ಅಣುವು ಆಕ್ಸಿಜನ್ ನ ಪ್ರಧಾನ
ನಿರ್ವಾಹಕವಾಗಿ ಕೆಲಸ ಮಾಡುತ್ತದೆ.
ಈ ಕಾರ್ಯದಲ್ಲಿ ಹೃದಯವು ಸಹ ಆಮ್ಲಜನಕಯುಕ್ತ
ರಕ್ತವನ್ನು ಪಡೆಯುತ್ತದೆ. ಕರೋನರಿ ಅಪಧಮನಿ (ಆರ್ಟರಿ) ಹೃದಯಕ್ಕೆ ಆಮ್ಲಜನಕ ಸಹಿತ
ರಕ್ತ ಸಾಗಿಸುವ ನಾಳವಾಗಿದೆ.
ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡವು 120/80 (ಸಿಸ್ಟೋಲಿಕ್-120, ಡಯಾಸ್ಟೋಲಿಕ್-80) ಇರುತ್ತದೆ. ರಕ್ತದ ಒತ್ತಡವನ್ನು ಅಳೆಯುವ ಸಾಧನ ಸ್ಪಿಗ್ಮೋಮಾನೋಮೀಟರ್
ರಕ್ತನಾಳದಲ್ಲಿ
3
ವಿಧಗಳು
ಅಭಿದಮನಿ : ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು
ಹೃದಯಕ್ಕೆ ತರುವ ರಕ್ತನಾಳವಾಗಿದೆ. ಈ ರಕ್ತನಾಳಗಳ ಒಳ ಆವರಣವು ವಿಶಾಲವಾಗಿರುವುದರಿಂದ ರಕ್ತದ
ಒತ್ತಡವು ಕಡಿಮೆಯಾಗಿರುತ್ತದೆ. ಇವುಗಳಲ್ಲಿ ಅಧೋ ಅಭಿದಮನಿ ದೊಡ್ಡದಾದುದು
ಅಪದಮನಿ : ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ
ರಕ್ತವನ್ನು ಸಾಗಿಸುವ ನಾಳಗಳು. ಈ ರಕ್ತನಾಳಗಳ ಒಳ ಆವರಣವು ಕಿರಿದಾಗಿರುವುದರಿಂದ ರಕ್ತದ ಒತ್ತಡವು
ಹೆಚ್ಚಾಗಿರುತ್ತದೆ. ಇವುಗಳಲ್ಲಿ ಮಹಾ ಅಪಧಮನಿಯು ದೊಡ್ಡದಾದುದು.
ಲೋಮನಾಳಗಳು : ಅಪಧಮನಿ ಮತ್ತು ಅಭಿದಮನಿಗಳನ್ನು
ಸೇರಿಸುವ ಸೂಕ್ಷ್ಮ ರಕ್ತನಾಳಗಳು.
ರಕ್ತವು ಅಮೈನೊ ಆಮ್ಲ, ಎಲೆಕ್ಟ್ರೋಲೈಟ್ಸ್, ಹಾರ್ಮೋನುಗಳು, ರಕ್ತ ಕೋಶಗಳನ್ನು ದೇಹದ ಎಲ್ಲಾ ಭಾಗಗಳಿಗೂ ಪೂರೈಸುತ್ತದೆ. ಇದರಿಂದಾಗಿ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಕ್ಷಮತೆ ದೊರೆಯುತ್ತದೆ, ಹಾಗು ದೇಹದ ಉಷ್ಣತೆ ಮತ್ತು pH ಗಳು ಸಮಪ್ರಮಾಣದಲ್ಲಿರುತ್ತವೆ.
ಮಾನವ ರಕ್ತಪರಿಚಲನಾ ವ್ಯವಸ್ಥೆಯ ಪ್ರಮುಖ
ಭಾಗಗಳೆ0ದರೆ
ಹೃದಯ,
ರಕ್ತ
ಹಾಗೂ ರಕ್ತ ನಾಳಗಳು. ರಕ್ತದಲ್ಲಿ, ಪ್ಲಾಸ್ಮಾ, ಕೆ0ಪು
ರಕ್ತ ಕಣಗಳು, ಬಿಳಿ ರಕ್ತ ಕಣಗಳು ಹಾಗು ಪ್ಲೇಟ್ ಲೆಟ್‌ಗಳು ಇರುತ್ತವೆ. ಜೀರ್ಣಾಂಗ
ವ್ಯವಸ್ಥೆಯು ರಕ್ತಪರಿಚಲನ ಕಾರ್ಯಕ್ಕೆ ಅವಶ್ಯಕವಾಗಿರುವ ಪೋಷಕಾ0ಶಗಳನ್ನು
ಒದಗಿಸುತ್ತದೆ.
ರಕ್ತಪರಿಚಲನ ವ್ಯವಸ್ಥೆಯಲ್ಲಿ ರಕ್ತ ಹಾಗು
ಬಿಳಿದ್ರವ ಎಂಬ ಎರಡು ತರಹದ ದ್ರವ ಪದಾರ್ಥಗಳು ಕ0ಡುಬರುತ್ತವೆ.
ಹೃದಯನಾಳದ ವ್ಯವಸ್ಥೆಯು ರಕ್ತ, ಹೃದಯ ಹಾಗು ರಕ್ತನಾಳಗಳನ್ನು ಒಳಗೊ0ಡಿದೆ
ಮತ್ತು ಬಿಳಿದ್ರವದ ವ್ಯವಸ್ಥೆಯು ಬಿಳಿದ್ರವ, ದುಗ್ಧಗ್ರಂಥಿ
ಹಾಗು ಬಿಳಿದ್ರವದ ನಾಳಗಳನ್ನು ಒಳಗೊ0ಡಿದೆ. ಹೃದಯನಾಳದ ವ್ಯವಸ್ಥೆ ಹಾಗೂ ಬಿಳಿದ್ರವದ
ವ್ಯವಸ್ಥೆಗಳು ಜೊತೆ ಸೇರಿ ರಕ್ತಪರಿಚಲನಾ ವ್ಯವಸ್ಥೆ ಆಗಿದೆ.
ರಕ್ತದ
ಕುರಿತು ಅಧ್ಯಯನ ಮಾಡಲು ಬಳಸುವ ಸಾಧನಗಳು
ಎಲೆಕ್ಟ್ರೋಕಾರ್ಡಿಯೋಗ್ರಾಮ್ - ಹೃದಯದ
ಎಲೆಕ್ಟ್ರೋಫಿಸಿಯಾಲಜಿಯನ್ನು ಅಳೆಯಲು ಬಳಸಲಾಗುತ್ತದೆ.
ಸ್ಫಿಗ್ಮೋಮಾನೊಮೀಟರ್ ಹಾಗು ಸ್ಟೆತೋಸ್ಕೋಪ್ -
ರಕ್ತದ ಒತ್ತಡವನ್ನು ಅಳೆಯಲು
ಪಲ್ಸ್ ಮೀಟರ್ - ಹೃದಯದ ಕಾರ್ಯಗಳನ್ನು ಅಳೆಯಲು
(ಹೃದಯದ ವೇಗ, ಲಯಬದ್ಧತೆ, ಇಳಿಮುಖವಾದ ಹೃದಯ ಬಡಿತ)
ಹೃದಯದ
ಕಾಯಿಲೆಗಳು
ಹೃದಯಾಘಾತ ಇದನ್ನು ಮಯೋಕಾರ್ಡಿಯಲ್
ಇನ್ಫಾರ್ಕಷನ್ ಎಂತಲೂ ಕರೆಯುವರು.
ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್
(ಕೊಬ್ಬು) ಸಂಗ್ರಹಣೆಯಾಗುವುದರಿಂದ ರಕ್ತನಾಳಗಳು ತಮ್ಮ ಸ್ಥಿತಿತಾಪಕ ಗುಣವನ್ನು ಕಳೆದುಕೊಳ್ಳುತ್ತವೆ
ಇದನ್ನು ಅಥೆರೋಸ್ಕ್ಲಿರೊಸಿಸ್ ಎನ್ನುವರು. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ರಕ್ತನಾಳದಲ್ಲಿ ಸೇರಿಕೊಂಡ ಕೊಬ್ಬನ್ನು ತೆಗೆದು ರಕ್ತ ಸರಾಗವಾಗಿ ಹರಿಯುವಂತೆ ಮಾಡಲು ಆ್ಯಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಸರ್ಜರಿ ಚಿಕಿತ್ಸೆಗಳನ್ನು ಮಾಡುತ್ತಾರೆ.
ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತ ಸರಿಯಾಗಿ ಪೂರೈಕೆಯಾಗದೆ ಹೋದರೆ ಮಗುವಿನ ನಾಲಿಗೆ, ತುಟಿ ಮತ್ತು ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ಇಂತಹ ಮಗುವನ್ನು ಬ್ಲೂ ಬೇಬಿ ಎನ್ನುವರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ