ಕರ್ನಾಟಕ ಸಸ್ಯವರ್ಗ (ಅರಣ್ಯ)

ಕರ್ನಾಟಕ ಸಸ್ಯವರ್ಗ (ಅರಣ್ಯ)

ಗಾಢ ಹಸಿರು ಬಣ್ಣ ನಿತ್ಯ ಹರಿದ್ವರ್ಣ ಕಾಡುಗಳನ್ನು, ಹಸಿರು ಬಣ್ಣ ಮಿಶ್ರ ಕಾಡುಗಳನ್ನು ಮತ್ತು ಎಲೆ ಉದುರುವ ಕಾಡುಗಳನ್ನು, ಹಾಗೂ ತಿಳಿ ಹಸಿರು ಬಣ್ಣ ಬಯಲು ಸಸ್ಯವರ್ಗವನ್ನು ಸೂಚಿಸುತ್ತದೆ.

ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕ್ರಮವಾಗಿ ಅತಿ ಹೆಚ್ಚಿನ ಕಾಡನ್ನು ಒಳಗೊಂಡಿದ್ದರೆ ವಿಜಯಪುರ ಅತಿ ಕಡಿಮೆ ಕಾಡನ್ನು ಹೊಂದಿರುವ ಜಿಲ್ಲೆಯಾಗಿದೆ.

ನಿತ್ಯ ಹರಿದ್ವರ್ಣ ಕಾಡುಗಳು

ವಾರ್ಷಿಕ ಮಳೆ 250 ಸೆಂ.ಮೀ ಕಿಂತಲೂ ಅಧಿಕವಾಗಿರುತ್ತದೆ. ಅಧಿಕ ಉಷ್ಣಾಂಶವಿರುವ ಮತ್ತು ಮಳೆ ಬೀಳುವ ಪ್ರದೇಶಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.

ಬೀಟೆ, ತೇಗ, ಮತ್ತಿ, ನಂದಿ, ದೂಪ, ಹೊನ್ನ, ಹೆಬ್ಬಲಸು ಇವು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ.

ಲವಂಗ, ಏಲಕ್ಕಿ, ದಾಲ್ಚಿನ್ನಿ ಮುಂತಾದ ಸಾಂಬಾರ ಪದಾರ್ಥಗಳನ್ನು ಮತ್ತು ಔಷಧಿ ಸಸ್ಯಗಳನ್ನು ಬೆಳೆಯುವರು

ನಿತ್ಯ ಹರಿದ್ವರ್ಣ ಕಾಡುಗಳು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಬಗೆಯ ಕಾಡುಗಳನ್ನು ಕಾಣುತ್ತೇವೆ.

ಎಲೆ ಉದುರುವ ಅರಣ್ಯಗಳು

60 120 ಸೆಂ.ಮೀ  ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುವ ಈ ಕಾಡುಗಳು ಬೇಸಿಗೆ ಕಾಲದಲ್ಲಿ ತೇವಾಂಶದ ಕೊರತೆಯಿಂದ ಈ ಕಾಡುಗಳಲ್ಲಿನ ಮರಗಳು ಎಲೆಗಳನ್ನು ಉದುರಿಸುತ್ತವೆ.

ತೇಗ, ಹೊನ್ನೆ, ಮತ್ತಿ, ಬೇವು, ಮಾವು, ಹಲಸು, ಆಲ, ಶ್ರೀಗಂಧ, ಬಿದಿರು ಇಲ್ಲಿ ಕಂಡುಬರುವ ಪ್ರಮುಖ ಮರಗಳಾಗಿವೆ.

ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ.

ಮಿಶ್ರಬಗೆಯ ಕಾಡುಗಳು

ಮಿಶ್ರಬಗೆಯ ಕಾಡುಗಳು 120 150 ಸೆಂ.ಮೀ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತವೆ.

ತೇಗ, ಹೊನ್ನೆ, ಮತ್ತಿ, ನಂದಿ, ದಿಂಡಗ, ಶ್ರೀಗಂಧ, ಹಲಸು, ಬಿದಿರು

ಈ ಬಗೆಯ ಕಾಡುಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರಿನ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ.

ಹುಲ್ಲುಗಾವಲು ಮತ್ತು ಕುರುಚಲು ಗಿಡಗಳು

ಈ ಪ್ರದೇಶದಲ್ಲಿ ಮಳಯ ಪ್ರಮಾಣ 60 ಸೆಂ.ಮೀ ಕಿಂತ ಕಡಿಮೆ ಇರುತ್ತದೆ.

ಕಳ್ಳಿ, ಕತ್ತಾಳಿ, ಕರಿಜಾಲಿ, ಬೇಲ, ಈಚಲ, ಹಂಚಿ, ಕುಂತಿ ಹುಲ್ಲು, ಆಲ, ಮಾವು, ಬೇವು ಈ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಸಸ್ಯಗಳಾಗಿವೆ.

ಬೀದರ್, ಕಲುಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ತರಹದ ಸಸ್ಯವರ್ಗವನ್ನು ಕಾಣುತ್ತೇವೆ.

ತಗ್ಗಾದ ಕಣಿವೆಗಳು ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಶೊಲಾ ಕಾಡುಗಳು ಕಂಡುಬರುತ್ತವೆ

ಕಾಮೆಂಟ್‌ಗಳು